More

    ಅವಳಿ ಕೋಚ್​ ನೇಮಕಕ್ಕೆ ಮುಂದಾದ ಪಾಕಿಸ್ತಾನ ಕ್ರಿಕೆಟ್​ ಮಂಡಳಿ!

    ಲಾಹೋರ್​: ಪಾಕಿಸ್ತಾನದ ಟಿ20 ಮತ್ತು ಏಕದಿನ ಕ್ರಿಕೆಟ್​ ತಂಡಕ್ಕೆ ದಣ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕರ್ಸ್ಟನ್​ ಮತ್ತು ಟೆಸ್ಟ್​ ತಂಡಕ್ಕೆ ಆಸ್ಟ್ರೆಲಿಯಾದ ಮಾಜಿ ವೇಗಿ ಜೇಸನ್​ ಗಿಲೆಸ್ಪಿ ಕೋಚ್​ ಆಗಿ ನೇಮಕಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

    ಎಲ್ಲ ಮೂರು ಪ್ರಕಾರದ ಕ್ರಿಕೆಟ್​ನಲ್ಲಿ ಪಾಕಿಸ್ತಾನ ತಂಡದ ನಿರ್ವಹಣೆಯನ್ನು ಸುಧಾರಿಸುವ ಸಲುವಾಗಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ಈ ನಿರ್ಧಾರ ತೆಗೆದುಕೊಂಡಿದೆ. ಪ್ರತಿ ಕ್ರಿಕೆಟ್​ ಪ್ರಕಾರದಲ್ಲಿ ತಜ್ಞ ಮಾರ್ಗದರ್ಶನ ನೀಡುವುದು ಇದರ ಉದ್ದೇಶವಾಗಿದೆ ಎಂದು ಹೇಳಲಾಗಿದೆ.

    ಗ್ಯಾರಿ ಕರ್ಸ್ಟನ್​ ಈ ಮುನ್ನ 2008ರಿಂದ 2011ರವರೆಗೆ ಭಾರತ ತಂಡದ ಕೋಚ್​ ಕೂಡ ಆಗಿದ್ದರು ಮತ್ತು 2011ರ ಏಕದಿನ ವಿಶ್ವಕಪ್​ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಬಳಿಕ 2 ವರ್ಷಗಳ ಕಾಲ ತವರಿನ ದಣ ಆಫ್ರಿಕಾ ತಂಡಕ್ಕೂ ಕೋಚ್​ ಆಗಿದ್ದರು. 56 ವರ್ಷದ ಕರ್ಸ್ಟನ್​ ಪ್ರಸಕ್ತ ಐಪಿಎಲ್​ನಲ್ಲಿ ಗುಜರಾತ್​ ಟೈಟಾನ್ಸ್​ ತಂಡದ ಬ್ಯಾಟಿಂಗ್​ ಕೋಚ್​ ಮತ್ತು ಮೆಂಟರ್​ ಆಗಿದ್ದಾರೆ.

    ಪಾಕಿಸ್ತಾನ ತಂಡ ಪ್ರಸಕ್ತ ಅಬೋಟಾಬಾದ್​ನ ಕಾಕುಲ್​ನಲ್ಲಿ ಮಿಲಿಟರಿ ಮಾದರಿಯ ತರಬೇತಿ ಪಡೆಯುತ್ತಿದ್ದು, ಟಿ20 ವಿಶ್ವಕಪ್​ಗೆ ಕಠಿಣ ಪೂರ್ವಸಿದ್ಧತೆಯಲ್ಲಿ ತೊಡಗಿಕೊಂಡಿದೆ.

    ವಿರಾಟ್ ಶತಕದ ನಡುವೆಯೂ ರಾಜಸ್ಥಾನಕ್ಕೆ ಮಣಿದ ಆರ್‌ಸಿಬಿ: ಅಬ್ಬರಿಸಿದ ಬಟ್ಲರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts