More

    ಗ್ರಾಮಗಳ ಅಭಿವೃದ್ಧಿಗೆ ಗಮನ ಕೊಡಿ

    ಹುಣಸೂರು: ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ ಮತ್ತು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಆಡಳಿತಾಧಿಕಾರಿ ಮತ್ತು ಪಿಡಿಒ ಪರಸ್ಪರ ಹೊಂದಾಣಿಕೆಯೊಂದಿಗೆ ಕಾರ್ಯ ನಿರ್ವಹಿಸಬೇಕೆಂದು ಶಾಸಕ ಎಚ್.ಪಿ. ಮಂಜುನಾಥ್ ಸೂಚಿಸಿದರು.
    ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

    ಸರ್ಕಾರ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ಈಗಾಗಲೇ ನೇಮಿಸಿದೆ. ಕೆಲವರಿಗೆ ಒಪ್ಪಿಕೊಳ್ಳಲಾಗದ ಸ್ಥಿತಿ ಇರುತ್ತದೆ. ಇದರಿಂದ ಗ್ರಾಮಗಳಲ್ಲಿ ಅವ್ಯವಸ್ಥೆ ಆಗಬಾರದು. ಆಡಳಿತಾಧಿಕಾರಿ ಮತ್ತು ಪಿಡಿಒ ಕೇವಲ ಚೆಕ್‌ಗೆ ಸಹಿ ಹಾಕುವ, ಬಿಲ್‌ಗಳನ್ನು ಅನುಮೋದಿಸುವ ಕಾರ್ಯಕ್ಕೆ ಸೀಮಿತಗೊಳ್ಳಬಾರದು. ಬದಲಾಗಿ ಗ್ರಾಮಗಳ ಅಭಿವೃದ್ಧಿಯ ಕಡೆ ಗಮನಕೊಡಬೇಕು. 14ನೇ ಹಣಕಾಸು ಯೋಜನೆಯ ಹಣ ಸದ್ಬಳಕೆಯಾಗುವತ್ತ ಗಮನಿಸಿ. ಕುಡಿಯುವ ನೀರಿನ ಪೂರೈಕೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿರಿ. ಪಿಡಿಒಗಳಿಗೆ ಕಾರ್ಯ ನಿರ್ವಹಿಸಲು ಫ್ರೀಹ್ಯಾಂಡ್ ನೀಡಿದಲ್ಲಿ ಸಮಸ್ಯೆ ಬಗೆಹರಿಸುವುದು ಸುಲಭ ಎಂದರು.

    ನಂಬರ್ ಬ್ಲಾಕ್ ಮಾಡಬೇಡಿ: ತಮಗೆ ಬಂದಿರುವ ದೂರಿನನ್ವಯ ಕೆಲ ಪಿಡಿಒಗಳು ಈ ಹಿಂದಿನ ಗ್ರಾಪಂ ಸದಸ್ಯರ ಫೋನ್ ನಂಬರ್‌ಗಳನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಿಕೊಂಡಿದ್ದಾರೆ ಎನ್ನಲಾಗಿದೆ, ಇದು ಸರಿಯಲ್ಲ. ಗ್ರಾಮೀಣರು ತಮ್ಮ ಸಮಸ್ಯೆಗಳನ್ನು ಇನ್ಯಾರಲ್ಲಿ ಹೇಳಿಕೊಳ್ಳಬೇಕು ಎಂದು ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡರು.

    ಪ್ರವಾಹದ ಮುನ್ನಚ್ಚರಿಕೆ: ಆಗಸ್ಟ್ ತಿಂಗಳಲ್ಲಿ ಕಳೆದ ಸಾಲಿನಂತೆ ಪ್ರವಾಹ ಭೀತಿ ಎದುರಾಗಲಿದ್ದು, ಲಕ್ಷ್ಮಣತೀರ್ಥ ನದಿಯಂಚಿನ ಗಡಿಭಾಗದ ಗ್ರಾಮಗಳು ಎಚ್ಚರಿಕೆ ವಹಿಸಬೇಕು. ಆ ಭಾಗದ ಪಿಡಿಒಗಳು ಮತ್ತು ಆಡಳಿತಾಧಿಕಾರಿಗಳು ಪ್ರವಾಹ ಸಮಯದಲ್ಲಿ ಕೇಂದ್ರ ಸ್ಥಾನದಲ್ಲೇ ಇದ್ದು, ಜನರ ನೆರವಿಗೆ ಬರಬೇಕೆಂದು ಅವರು ಸೂಚಿಸಿದರು.
    ಸಭೆಯಲ್ಲಿ ತಹಸೀಲ್ದಾರ್ ಐ.ಇ.ಬಸವರಾಜು, ಇಒ ಎಚ್.ಡಿ.ಗಿರೀಶ್, ತಾಪಂ ಎಡಿ ಎಚ್.ಡಿ. ಲೋಕೇಶ್ ಹಾಗೂ ಅಧಿಕಾರಿಗಳು ಇದ್ದರು.

    ಡೆಂೆ ಕಾಣಿಸಿಕೊಂಡಿದೆ: ಕರೊನಾ ಮಾರಿಯೊಂದಿಗೆ ತಾಲೂಕಿನ ಎರಡು ಗ್ರಾಮದಲ್ಲಿ ಡೆಂಘೆ ಜ್ವರ ಕಾಣಿಸಿಕೊಂಡಿದೆ. ಕಟ್ಟೆಮಳಲವಾಡಿ ಮತ್ತು ನಿಲುವಾಗಿಲು ಗ್ರಾಮದಲ್ಲಿ ಈಗಾಗಲೇ ಹಲವಾರು ಜನರು ಡೆಂಘೆ ಜ್ವರದಿಂದ ಬಳಲುತ್ತಿದ್ದು ಈ ಕುರಿತು ಪಿಡಿಒಗಳಿಗೆ ಮಾಹಿತಿಯೇ ಇಲ್ಲದಿರುವುದು ದುರಂತ. ಕರೊನಾದೊಂದಿಗೆ ಡೆಂಘೆ, ಚಿಕೂನ್‌ಗುನ್ಯಾ ಜ್ವರ ಬಾಧೆ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಪಿಡಿಒಗಳಿಗೆ ಶಾಸಕರು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts