More

    ಇನ್​ನಲ್ಲಿ ಲಾಕ್​ಡೌನ್ ತಾಪತ್ರಯ; ಸವಾಲಿನ ಪಾತ್ರದಲ್ಲಿ ಪಾವನಾ..

    ‘ನನಗಿದು ನಿಜಕ್ಕೂ ಚಾಲೆಂಜಿಂಗ್ ಪಾತ್ರ. ಇಲ್ಲಿಯವರೆಗೂ ನನ್ನೆದುರಿನ ಪಾತ್ರಧಾರಿಗಳ ಜತೆಗೆ ನಟಿಸಿದ್ದೇನೆ. ಆದರೆ, ಈ ಚಿತ್ರದಲ್ಲಿ ನಾನೊಬ್ಬಳೇ ಪಾತ್ರಧಾರಿ. ತೆರೆಮೇಲೆ ಕಾಣಿಸಿಕೊಳ್ಳುವುದೂ ನಾನೊಬ್ಬಳು ಮಾತ್ರ!’- ಹೀಗೆ ‘ಇನ್’ ಹೆಸರಿನ ಸಿನಿಮಾದ ಬಗ್ಗೆ ಹೇಳಿಕೊಳ್ಳುತ್ತಾರೆ ನಟಿ ಪಾವನಾ ಗೌಡ. ಲಾಕ್​ಡೌನ್​ನಲ್ಲಿ ಏನೆಲ್ಲ ಘಟಿಸಿತು? ನಾಲ್ಕು ಗೋಡೆ ನಡುವಿದ್ದವರ ಪರಿಸ್ಥಿತಿ ಹೇಗಿತ್ತು ಎಂಬುದನ್ನು ‘ಇನ್’ ಚಿತ್ರದಲ್ಲಿ ನೋಡಬಹುದಂತೆ.

    ಬಡಿಗೇರ್ ದೇವೇಂದ್ರ ನಿರ್ದೇಶನದ ಈ ಸಿನಿಮಾ ಲಾಕ್​ಡೌನ್ ಸಂದರ್ಭದಲ್ಲಿಯೇ ಚಿತ್ರೀಕರಣವಾಗಿದೆ. ಹೊರಗಡೆ ಖಾಕಿ ಸರ್ಪಗಾವಲಿದ್ದರೂ, ಮನೆಯೊಳಗೇ 25 ದಿನಗಳ ಕಾಲ ಚಿತ್ರೀಕರಣವಾಗಿದೆ. ಹಾಗಾಗಿ, ಈ ಸಿನಿಮಾ ಬಗ್ಗೆ ಅಷ್ಟೇ ಕುತೂಹಲಿಯಾಗಿದ್ದಾರೆ ನಟಿ ಪಾವನಾ.

    ‘ಲಾಕ್​ಡೌನ್​ನಲ್ಲಿ ಏನೆಲ್ಲ ಆಯಿತು ಎಂಬುದನ್ನು ಅಷ್ಟೇ ರೋಚಕವಾಗಿ ‘ಇನ್’ ಸಿನಿಮಾದಲ್ಲಿ ಹೇಳಿದ್ದೇವೆ. ಕೆಲಸ, ಕೋವಿಡ್, ಹಣಕಾಸಿನ ಸಮಸ್ಯೆ, ಇಎಂಐ, ಒಂಟಿತನ, ಖಿನ್ನತೆ … ಹೀಗೆ ಎಲ್ಲ ವಿಚಾರಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಒಂಟಿ ಯುವತಿಯ ಬವಣೆಯೂ ಈ ಸಿನಿಮಾದಲ್ಲಿರಲಿದೆ’ ಎನ್ನುತ್ತಾರೆ ಪಾವನಾ.

    ಕರುಣಾಕರ ರಾವಣ ಈ ಚಿತ್ರ ನಿರ್ವಿುಸಿದರೆ, ಶಂಕರ್ ಪಾಗೋಜಿ, ಬಡಿಗೇರ್ ದೇವೇಂದ್ರ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ರಾಜಾ ಶಿವಶಂಕರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ಶೂಟಿಂಗ್ ಮುಗಿದಿದ್ದು, ಚಿತ್ರೀಕರಣೋತ್ತರ ಕೆಲಸಗಳಲ್ಲಿ ತಂಡ ನಿರತರಾಗಿದೆ. ಇತ್ತೀಚೆಗಷ್ಟೇ, ಈ ಚಿತ್ರದ ಫಸ್ಟ್ ಲುಕ್​ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿ, ಶುಭಕೋರಿದ್ದಾರೆ.

    ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ; ಪಕ್ಕದ ರಸ್ತೆಗೆ ಹಾರಿ ಇನ್ನೊಂದು ಕಾರಿನ ಮೇಲೆ ಬಿದ್ದ ಕಾರು, ಮೂವರು ಸ್ಥಳದಲ್ಲೇ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts