More

    ಮತ್ತೊಮ್ಮೆ ಅತ್ಯುತ್ತಮ ನಟಿಯಾದ ಪಾವನಾ ಗೌಡ..

    ಬೆಂಗಳೂರು: ‘ರುದ್ರಿ’ ಚಿತ್ರದಲ್ಲಿನ ಅಭಿನಯಕ್ಕಾಗಿ ಈಗಾಗಲೇ ಪಾವನಾ ಗೌಡ ಕೆಲವು ಚಿತ್ರೋತ್ಸವಗಳಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಇದೀಗ ಮಧ್ಯಪ್ರದೇಶದ ವಿಂಧ್ಯಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅವರಿಗೆ ಮತ್ತೊಮ್ಮೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಅಷ್ಟೇ ಅಲ್ಲ, ‘ರುದ್ರಿ’ ಚಿತ್ರಕ್ಕೆ ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಹ ಸಿಕ್ಕಿದೆ.

    ವಿಂಧ್ಯಾ ಅಂತಾರಾಷ್ಟ್ರೀಯ ಚಿತ್ರೋತ್ಸವವು ಜನವರಿ 8ರಿಂದ 10ರವರೆಗೆ ನಡೆದಿದ್ದು, ಇದರಲ್ಲಿ 46 ದೇಶಗಳ 350ಕ್ಕೂ ಹೆಚ್ಚು ಚಿತ್ರಗಳು ಸ್ಪರ್ಧಿಸಿದ್ದವು. ಈ ಪೈಕಿ 15 ಚಿತ್ರಗಳು ಅಂತಿಮ ಸುತ್ತಿಗೆ ಬಂದಿದ್ದು, ಈ ಪೈಕಿ ‘ರುದ್ರಿ’ ಚಿತ್ರಕ್ಕೆ ಎರಡು ಪ್ರಶಸ್ತಿಗಳು ಸಿಕ್ಕಿವೆ. ಬಡಿಗೇರ್ ದೇವೇಂದ್ರ ನಿರ್ದೇಶನದ ಈ ಚಿತ್ರವು ಕಳೆದ ವರ್ಷವೇ ಸಂಪೂರ್ಣವಾಗಿ ತಯಾರಾಗಿದ್ದು, ಲಾಕ್​ಡೌನ್​ನಿಂದ ಬಿಡುಗಡೆಯಾಗಿರಲಿಲ್ಲ. ಇದೀಗ ಹಲವು ಪ್ರಶಸ್ತಿಗಳನ್ನು ಗೆದ್ದ ಸಂತಸದಲ್ಲಿರುವ ಚಿತ್ರತಂಡ, ಈ ವರ್ಷ ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts