More

    ಪವನ್​ ಕಲ್ಯಾಣ್​ರ ‘ವಕೀಲ್ ಸಾಬ್’ ಬಿಡುಗಡೆ

    ಬೆಂಗಳೂರು : ತೆಲುಗು ಸೂಪರ್​​ಸ್ಟಾರ್ ಪವನ್​ ಕಲ್ಯಾಣ್​ ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರ ‘ವಕೀಲ್ ಸಾಬ್’ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕೊಲೆಯ ಪ್ರಯತ್ನದ ಆರೋಪ ಎದುರಿಸುತ್ತಿರುವ ಮೂವರು ಯುವತಿಯರ ಕೋರ್ಟ್ ವಿಚಾರಣೆಯ ಸುತ್ತ ಹೆಣೆದಿರುವ ಈ ಚಿತ್ರ, ಅಮಿತಾಭ್ ಬಚ್ಚನ್​ರ ಹಿಂದಿ ಚಿತ್ರ ‘ಪಿಂಕ್​​’ನ ತೆಲುಗು ರೀಮೇಕ್ ಆಗಿದೆ.

    2016 ರ ಚಿತ್ರ ಪಿಂಕ್​​ನಲ್ಲಿ ಬಚ್ಚನ್​ ಮಾಡಿರುವ ಪ್ರಭಾವೀ ಡೈಲಾಗ್​ಗಳುಳ್ಳ ವಕೀಲನ ಪಾತ್ರವನ್ನು ಪವನ್ ಕಲ್ಯಾಣ್​ ಮಾಡುತ್ತಿದ್ದಾರೆ. ಎದುರಾಳಿ ವಕೀಲರ ಪಾತ್ರದಲ್ಲಿ ಪ್ರಕಾಶ್ ರಾಜ್​ ಅವರನ್ನು ಕಾಣಬಹುದು. ಈ ಚಿತ್ರದಲ್ಲಿ ನಿವೇತ ಥಾಮಸ್​, ಅಂಜಲಿ, ಅನನ್ಯ ನಗಲ್ಲ ಅವರೊಂದಿಗೆ ಶ್ರುತಿ ಹಸನ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ವೇಣು ಶ್ರೀರಾಮ್ ನಿರ್ದೇಶಿಸಿದ್ದಾರೆ.

    ಇದನ್ನೂ ಓದಿ: ಯುಗಾದಿಗೆ ಹೊಸ ಬಟ್ಟೆಯ ಆಸೆ: ಸಂಬಳ ಬರಲಿ ಇರು ಮಗಳೆ ಅಂದ್ರೂ ಕೇಳದೆ ಬಾಲಕಿ ಆತ್ಮಹತ್ಯೆ!

    ಪವನ್​ ಕಲ್ಯಾಣ್ ಅಭಿಮಾನಿಗಳಿಗೆ ಬಹುಸಮಯದ ನಂತರ ಉಡುಗೊರೆಯಾಗಿ ಬಂದಿರುವ ಈ ಚಿತ್ರದ ಬಗ್ಗೆ ಸ್ವತಃ ಕಲ್ಯಾಣ್ ಪುಳಕಿತರಾಗಿದ್ದಾರಂತೆ. “ನನ್ನ ನೆಚ್ಚಿನ ನಾಯಕ ಬಚ್ಚನ್ ವಹಿಸಿರುವ ಪಾತ್ರವನ್ನು ಮಾಡುವೆ ಎಂದು ಯೋಚಿಸೇ ಇರಲಿಲ್ಲ” ಎಂದು ಕಲ್ಯಾಣ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಮಂದಿರಗಳು ಹಲವು ನಿರ್ಬಂಧಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ ಚಿತ್ರ ಬಾಕ್ಸ್​ ಆಫೀಸಲ್ಲಿ ಹೇಗೆ ಓಡುತ್ತದೆ ಎಂಬುದನ್ನು ಕಾದುನೋಡಬೇಕು. (ಏಜೆನ್ಸೀಸ್)

    ಕರೊನಾ ಚಿಕಿತ್ಸೆಯಲ್ಲಿ ಬಳಸುವ ರೆಮ್​ಡೆಸಿವಿರ್ ಕಳ್ಳ ಮಾರುಕಟ್ಟೆಗೆ

    ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ, ಚೇನಬ್ ಬ್ರಿಡ್ಜ್​​ನ ಆರ್ಚ್​ ರೆಡಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts