More

    ದೇಶ ಪ್ರೇಮ ಮೈಗೂಡಿಸಿಕೊಂಡು ಕೊಡುಗೆ ನೀಡಿ

    ದೇವದುರ್ಗ: ದೇಶದ ಸ್ವಾತಂತ್ರೃಕ್ಕಾಗಿ ಪ್ರಾಣವನ್ನೇ ಪಣವಾಗಿಟ್ಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಇಂದಿನ ಯುವಜನತೆಗೆ ಪ್ರೇರಣೆಯಾಗಿದ್ದು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ ಹೇಳಿದರು.

    ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಾಲೂಕು ಕುರುಬರ ಸಂಘದಿಂದ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನದ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಕಿತ್ತೂರು ಸಂಸ್ಥಾನವನ್ನು ಬ್ರಿಟಿಷರ ಹಿಡಿತದಿಂದ ರಕ್ಷಿಸುವಲ್ಲಿ ರಾಯಣ್ಣ ಪಾತ್ರ ದೊಡ್ಡದು. ರಾಣಿ ಚನ್ನಮ್ಮ ಬಲಗೈ ಬಂಟರಾಗಿದ್ದ ರಾಯಣ್ಣ ನಾಡು ನುಡಿಗಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದರು.

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನದಂದೇ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ್ದು, ಅವರು ಹುತಾತ್ಮರಾದ ದಿನದಂದೇ ದೇಶದ ಸಂವಿಧಾನ ಅಂಗೀಕಾರ ಮಾಡಿದ್ದು ಸೌಭಾಗ್ಯದ ವಿಷಯವಾಗಿದೆ. ಯುವಕರು ದೇಶಪ್ರೇಮ ಮೈಗೂಡಿಸಿಕೊಂಡು ನಾಡಿಗಾಗಿ ಕೊಡುಗೆ ನೀಡಬೇಕು. ಮಹಾನೀಯರು ತೋರಿಸಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕು ಎಂದರು. ಪ್ರಮುಖರಾದ ನರಸಣ್ಣ ಗಾಣಧಾಳ, ಅಯ್ಯಪ್ಪ ಕೊಂಗಂಡಿ, ಶಿವಮಾಳಪ್ಪ, ಸಾಬಣ್ಣ ವಕೀಲ, ವೆಂಕಟೇಶ, ಮಲ್ಲಿಕಾರ್ಜುನ ಜಂಬಲದಿನ್ನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts