More

    ಪ್ಲೇಆಫ್‌ಗೆ ಲಗ್ಗೆ ಹಾಕಿದ ಪಟನಾ ಪೈರೇಟ್ಸ್‌: 18ನೇ ಸೋಲಿಗೆ ಗುರಿಯಾದ ತೆಲುಗು ಟೈಟನ್ಸ್‌

    ಕೋಲ್ಕೋತಾ: ಪಂದ್ಯದ ಕೊನೆಯ ಹಂತದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಪಟನಾ ಪೈರೇಟ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌
    10ನೇ ಆವೃತ್ತಿಯ 119ನೇ ಪಂದ್ಯದಲ್ಲಿತೆಲುಗು ಟೈಟನ್ಸ್‌ ತಂಡವನ್ನು 2 ಅಂಕಗಳಿಂದ ಮಣಿಸಿ ಐದನೇ ತಂಡವಾಗಿ ಪ್ಲೇಆಫ್‌ಗೆ ಲಗ್ಗೆ
    ಹಾಕಿತು. ಈಗಾಗಲೇ ಜೈಪುರ ಪಿಂಕ್‌ ಪ್ಯಾಂಥರ್ಸ್‌, ಪುಣೇರಿ ಪಲ್ಟನ್‌ , ದಬಾಂಗ್‌ ದಿಲ್ಲಿಮತ್ತು ಗುಜರಾತ್‌ ಜಯಂಟ್ಸ್‌ ತಂಡಗಳು
    ಪ್ಲೇಆಫ್‌ಗೆ ಅರ್ಹತೆ ಹೊಂದಿವೆ.

    ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿಮಂಗಳವಾರ ನಡೆದ ಮೊದಲ ಪಂದ್ಯದಲ್ಲಿಪೈರೇಟ್ಸ್‌ ತಂಡ 38-36 ಅಂಕಗಳಿಂದ ಟೈಟನ್ಸ್‌
    ವಿರುದ್ಧ ರೋಚಕ ಗೆಲುವು ದಾಖಲಿಸಿತು. ಈ ಫಲಿತಾಂಶದೊಂದಿಗೆ ಒಟ್ಟು 68 ಅಂಕಗಳನ್ನು ಕಲೆಹಾಕಿದ ಪೈರೇಟ್ಸ್‌
    ಅಂಕಪಟ್ಟಿಯಲ್ಲಿ4ನೇ ಸ್ಥಾನ ಪಡೆಯುವಲ್ಲಿಸಾಫಲ್ಯ ಕಂಡಿತು.ಟೈಟನ್ಸ್‌ ಪರ ಏಕಾಂಗಿ ಹೋರಾಟ ನಡೆಸಿದ ಪವನ್‌ ಕುಮಾರ್‌
    ಸೆಹ್ರಾವತ್‌(16) ತಂಡದ 18ನೇ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.

    https://x.com/ProKabaddi/status/1757432866386952331?s=20

    ಪ್ಲೇಆಫ್‌ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಾದರೆ ಗೆಲ್ಲಬೇಕಾದ ಒತ್ತಡದಲ್ಲಿದ್ವಿತೀಯ ಅವಧಿ ಆರಂಭಿಸಿದ ಪಟನಾ ಪೈರೇಟ್ಸ್‌
    ಆಟಗಾರರು, ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. 25 ನಿಮಿಷದ ಆಟ ಮುಗಿಯುವುದರೊಳಗೆ ಮೊದಲ ಬಾರಿ 25-
    22ರಲ್ಲಿಮೇಲುಗೈ ಸಾಧಿಸಿದ ಪಟನಾ, ಎದುರಾಳಿ ತಂಡದ ಮೇಲೆ ಒತ್ತಡ ಹೇರುವ ಕಾರ್ಯತಂತ್ರಗಳನ್ನು ಮುಂದುವರಿಸಿತು.
    30ನೇ ನಿಮಿಷಕ್ಕೆ 27-28ರಲ್ಲಿಪೈರೇಟ್ಸ್‌ ಮತ್ತು ಟೈಟನ್ಸ್‌ ತೀವ್ರ ಪೈಪೋಟಿ ನಡೆಸಿದವು. ಆದರೆ ಅಂತಿಮ ಕ್ಷ ಣದಲ್ಲಿಸಮನ್ವಯತೆ
    ಕೊರತೆ ಎದುರಿಸಿದ ತೆಲುಗು ತಂಡದ ಮೇಲೆ ಪಟನಾ ಮೇಲುಗೈ ಸಾಧಿಸಲು ಸರ್ವಪ್ರಯತ್ನ ನಡೆಸಿತು. ಪಂದ್ಯ ಮುಕ್ತಾಯಕ್ಕೆ ಐದು
    ನಿಮಿಷಗಳು ಬಾಕಿ ಇರುವಾಗ 33- 31 ಅಂಕಗಳ ಮುನ್ನಡೆ ಕಂಡುಕೊಂಡ ಸಚಿನ್‌ ಸಾರಥ್ಯದ ಪೈರೇಟ್ಸ್‌ ರಕ್ಷ ಣಾತ್ಮಕ ಆಟಕ್ಕೆ ಒತ್ತು
    ನೀಡಿತು.

    ಅನಗತ್ಯ ತಪ್ಪುಗಳಿಂದಾಗಿ 36ನೇ ನಿಮಿಷದಲ್ಲಿಎರಡನೇ ಬಾರಿ ಆಲೌಟ್‌ಗೆ ಒಳಗಾದ ಟೈಟನ್ಸ್‌ ತಂಡ, 4 ಅಂಕಗಳಿಗೆ ತಂಡದ ಹಿನ್ನಡೆಗೆ
    ಕುಸಿದು ಒತ್ತಡಕ್ಕೆ ಗುರಿಯಾಯಿತು. ಸಚಿನ್‌ (5 ಅಂಕ) ಮತ್ತು ಸಂದೀಪ್‌ (7 ಅಂಕ) ಅವರಲ್ಲದೆ, ಪಟನಾ ಪರ ಡಿಫೆಂಡರ್‌ ಕೃಷ್ಣ (4
    ಅಂಕ) ಮತ್ತು ರೇಡರ್‌ ಮಂಜೀತ್‌ (8 ಅಂಕ) ತಂಡದ ಗೆಲುವಿಗೆ ಅಮೂಲ್ಯ ಕೊಡುಗೆ ನೀಡಿದರು.

    ಆರಂಭಿಕ ಹಿನ್ನಡೆಯ ಹೊರತಾಗಿಯೂ ಸಾಂಘಿಕ ಪ್ರದರ್ಶನ ನೀಡಿದ ಮೂರು ಬಾರಿಯ ಚಾಂಪಿಯನ್ಸ್‌ ಪಟನಾ ಪೈರೇಟ್ಸ್‌ ತಂಡ
    ಪಂದ್ಯದ ಮೊದಲಾರ್ಧಕ್ಕೆ ತೆಲುಗು ಟೈಟನ್ಸ್‌ ವಿರುದ್ಧ 20-22ರಲ್ಲಿಜಿದ್ದಾಜಿದ್ದಿನ ಹೋರಾಟ ನೀಡುವಲ್ಲಿಯಶಸ್ವಿಯಾಯಿತು.
    ರೇಡರ್‌ ಪವನ್‌ ಕುಮಾರ್‌ ಸೆಹ್ರಾವತ್‌ ಅವರಿಂದ ಖಾತೆ ತೆರೆದ ಈಗಾಗಲೇ ಪ್ಲೇಆಫ್‌ ಸ್ಪರ್ಧೆಯಿಂದ ನಿರ್ಗಮಿಸಿರುವ ತೆಲುಗು ಟೈಟನ್ಸ್‌,
    ಮೊದಲ ಹತ್ತು ನಿಮಿಷಗಳ ಆಟದಲ್ಲಿಆರ್ಭಟಿಸಿತು. ನಾಲ್ಕು ನಿಮಿಷಗಳಲ್ಲೇ ಪಟನಾ ತಂಡವನ್ನು ಆಲೌಟ್‌ ಮಾಡಿದ ಟೆಟನ್ಸ್‌ 10-6
    ಅಂಕಗಳಲ್ಲಿಮುನ್ನಡೆ ಕಂಡುಕೊಳ್ಳುವಲ್ಲಿಯಶಸ್ವಿಯಾಯಿತು.

    ಆದರೆ ವಿರಾಮದ ವೇಳೆಗೆ ಇದೇ ಅಂತರವನ್ನು ಕಾಯ್ದುಕೊಳ್ಳಲು ಟೈಟನ್ಸ್‌ ಆಟಗಾರರಿಗೆ ಸಾಧ್ಯವಾಗಲಿಲ್ಲ. ಸಚಿನ್‌ ಮತ್ತು ಸಂದೀಪ್‌
    ಆಕರ್ಷಕ ರೇಡಿಂಗ್‌ ಮೂಲಕ ನಿಯಮಿತವಾಗಿ ಅಂಕಗಳನ್ನು ತಂದ ಕಾರಣ ಪಟನಾ ಎದುರಾಳಿಯನ್ನು ಆಲೌಟ್‌ ಮಾಡಿ ವಿರಾಮಕ್ಕೆ
    ಕೇವಲ 2 ಅಂಕಗಳ ಹಿನ್ನಡೆ ಅನುಭವಿಸಿತು. ಫೆಬ್ರವರಿ 14ರಂದು ದಬಾಂಗ್‌ ದಿಲ್ಲಿಮತ್ತು ತಮಿಳ್‌ ತಲೈವಾಸ್‌ ಹಾಗೂ ಬೆಂಗಾಲ್‌ ವಾರಿಯರ್ಸ್‌ ಮತ್ತು ಪುಣೇರಿ ಪಲ್ಟನ್‌ ತಂಡಗಳು ಮುಖಾಮುಖಿಯಾಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts