More

    ಕರೊನಾ ರೋಗಿಗಳನ್ನು ಪ್ರಾಣಿಗಳಂತೆ ಕಾಣಬೇಡಿ: ಕೇಜ್ರಿವಾಲ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೊನಾ ರೋಗಿಗಳನ್ನು ಪ್ರಾಣಿಗಳಿಗಿಂತ ಕೀಳಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಶುಕ್ರವಾರ ಹೇಳಿರುವ ಸುಪ್ರೀಂಕೋರ್ಟ್, ಕೇಜ್ರಿವಾಲ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

    ಕರೊನಾ ರೋಗಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಪ್ರತಿದಿನ ನೂರಾರು ಕರೊನಾ ರೋಗಿಗಳು ಸಾಯುತ್ತಿದ್ದರೂ ಸರ್ಕಾರಕ್ಕೆ ಗಾಂಭೀರ್ಯವೇ ಇಲ್ಲ. ಸಾವಿನ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿಯನ್ನೂ ನೀಡುತ್ತಿಲ್ಲ. ಕೆಲವೆಡೆ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲೂ ಕುಟುಂಬಸ್ಥರಿಗೆ ಸಾಧ್ಯವಾಗಿಲ್ಲ. ರೋಗಿಗಳ ಶವಗಳನ್ನು ಅಸಹ್ಯಕರ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಕೆಲವು ಶವಗಳನ್ನು ಕಸದ ತೊಟ್ಟಿಗಳಲ್ಲಿ ಬಿಸಾಡಲಾಗಿದೆ. ಇನ್ನು ಕೆಲವು ಶವಗಳು ಆಸ್ಪತ್ರೆಯ ಆವರಣದಲ್ಲಿ ಬಿದ್ದಿರುವುದೂ ಕಂಡುಬಂದಿದೆ ಎಂದು ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

    ದೆಹಲಿಯಲ್ಲಿ ಕರೊನಾ ಪರೀಕ್ಷೆಗಳೂ ಕಡಿಮೆಯಾಗುತ್ತಿವೆ. ಚೆನ್ನೈ ಮುಂಬೈ ಮುಂತಾದೆಡೆ ಪ್ರತಿದಿನ 17 ಸಾವಿರ ಜನರ ಪರೀಕ್ಷೆ ನಡೆಯುತ್ತಿದ್ದರೆ ದೆಹಲಿಯಲ್ಲಿ ಕೇವಲ ನಾಲ್ಕೈದು ಸಾವಿರ ಪರೀಕ್ಷೆಗಳು ಮಾತ್ರ ನಡೆಯುತ್ತಿವೆ. ಪ್ರಕ್ರಿಯೆಯನ್ನು ಸರಳಗೊಳಿಸಿ ಹೆಚ್ಚು ಪರೀಕ್ಷೆಗಳು ಆಗುವಂತೆ ನೋಡಿಕೊಳ್ಳಿ ಎಂದು ಕೋರ್ಟ್ ಆದೇಶಿಸಿದೆ.

    ದೆಹಲಿ ಮಾತ್ರವಲ್ಲದೆ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿಯೂ ಬಹುತೇಕ ಇದೇ ಸ್ಥಿತಿ ಇದೆ ಎಂದಿರುವ ಕೋರ್ಟ್, ಈ ಎಲ್ಲ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿತಲ್ಲದೆ, ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು.

    ಕೋಕಾಕೋಲಾ ಬ್ಯಾನ್​ ಮಾಡಿ ಎಂದವನಿಗೆ 5 ಲಕ್ಷ ದಂಡ ವಿಧಿಸಿದ ಸುಪ್ರೀಂಕೋರ್ಟ್​

    ದೆಹಲಿಯಲ್ಲಿ ಲಾಕ್​ಡೌನ್​ ವಿಸ್ತರಣೆ ಇಲ್ಲ, ಮಹಾರಾಷ್ಟ್ರದಲ್ಲಿ ಮರುಜಾರಿಯಾಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts