More

    ರಸ್ತೆಯಿಲ್ಲದೆ ರೋಗಿಯನ್ನು ಹೊತ್ತು ಸಾಗಿಸಿದರು!

    ಹೆಬ್ರಿ: ಹೆಬ್ರಿ ತಾಲೂಕಿನ ಕಾಪೋಳಿ ಎಂಬಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಹೆಬ್ರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಣೇಶ ಕುಮಾರ್ ಜರ್ವತ್ತು ಮತ್ತು ತಂಡ ಸೋಮವಾರ 2 ಕಿ.ಮೀ. ದೂರ ಹೊತ್ತುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು.
    ಹೆಬ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಪೊಳಿಯ ತಿಮ್ಮಪ್ಪ ಆಚಾರ್ಯ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ನಡೆದಾಡಲೂ ಆಗುತ್ತಿರಲಿಲ್ಲ. ಆಸ್ಪತ್ರೆಗೆ ದಾಖಲಿಸಲು ಆಗದೇ ಮನೆಯವರು ಕಷ್ಟಪಡುತ್ತಿದ್ದರು.

    ತಿಮ್ಮಪ್ಪ ಆಚಾರ್ಯರ ಮನೆಗೆ ಹೋಗಲು ಯಾವುದೇ ರಸ್ತೆ ಸಂಪರ್ಕ ಇಲ್ಲ. ಸುತ್ತಮುತ್ತಲಿನ ಜಾಗ ಬೇರೆಯವರ ಪಟ್ಟಾ ಸ್ಥಳವಾಗಿರುವುದು ಹಾಗೂ ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ರಸ್ತೆ ನಿರ್ಮಾಣಕ್ಕೆ ತೊಡಕಾಗಿತ್ತು. ಸುದ್ದಿ ತಿಳಿದ ಹೆಬ್ರಿ ಗ್ರಾಪಂ ಉಪಾಧ್ಯಕ್ಷ ಗಣೇಶ್ ಕುಮಾರ್ ಜರ್ವತ್ತು ಮತ್ತು ಅವರ ತಂಡ ಭಾನುವಾರ ಅವರ ಕಾಪೋಲಿಗೆ ತೆರಳಿ ತಿಮ್ಮಪ್ಪ ಆಚಾರ್ಯ ಅವರನ್ನು ಸುಮಾರು 2 ಕಿ.ಮೀ.ಹೊತ್ತು ಸಾಗಿ ಬಳಿಕ ವಾಹನದ ಮೂಲಕ ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.
    ಹೆಬ್ರಿಯ ಬಿಜೆಪಿ ಸ್ಥಳೀಯ ಪ್ರಮುಖರಾದ ಶೇಖರ ತಾಣ, ವಿಶ್ವನಾಥ್ ಹೆಗ್ಡೆ, ಪ್ರತ್ಯಕ್ಷ ಹೆಗ್ಡೆ, ದಿನೇಶ್ ಪೂಜಾರಿ, ಸಚಿನ್ ಗುಳಿಬೆಟ್ಟು, ಅಭಿಷೇಕ್ ತಾಣ, ಶ್ರೆಯಸ್ ಎಸ್.ಯುವಕರ ತಂಡದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts