More

    video/ ಕಾಲು ಮುರಿದ ನೋವನ್ನೇ ಮರೆಸಿದ ‘ಕುರುಬನ ರಾಣಿ’, ಆಸ್ಪತ್ರೆಯಲ್ಲಿ ಮಲಗಿದ್ದರೂ ಡಾನ್ಸ್!

    ವಾರೆ ವಾರೆ ಬಾರೆ ಬಾರೆ
    ಬಿಂದಗೆಯ ಮೊರೆ ತೋರೆ
    ಬಾರೆ ನನ್ನ ಕುರುಬನ ರಾಣಿs ಏಯ್s
    ಕೋಟಿ ಕೋಟಿ ಚುಕ್ಕಿ ತಾರೆ
    ಎಲ್ಲ ಸೇರಿ ಎರಕಹುಯ್ದಾ
    ನನ್ನ ಬೊಂಬೆ ಕಿಲ ಕಿಲ ವಾಣಿs ಹಹ….

    ಈ ಹಾಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ. ಅದು ನಟ ಶಿವರಾಜ್​ಕುಮಾರ್​ಮತ್ತು ನಗ್ಮಾ ಅಭಿನಯದ ವಿಡಿಯೋ ಅಲ್ಲ, ಕಾಲು ಮುರಿದರೂ ನೋವಿನ ಪರಿವೇ ಇಲ್ಲದೆ ಆಸ್ಪತ್ರೆಯ ಆಪರೇಶನ್​ ಥಿಯೇಟರ್​ನಲ್ಲಿ ಬೆಡ್​ ಮೇಲೆ ಮಲಗಿರುವ ರೋಗಿಯೊಬ್ಬ ‘ಬಾರೆ ಬಾರೆ ಕುರುಬನ ರಾಣಿ’ ಹಾಡಿಗೆ ಡಾನ್ಸ್ ಮಾಡುತ್ತಿರುವ ವಿಡಿಯೋ!

    ಇದನ್ನೂ ಓದಿರಿ ಕರೊನಾಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತೀರಾ? ಹಾಗಿದ್ದಲ್ಲಿ ತಪ್ಪದೇ ಈ ರೂಲ್ಸ್ ಫಾಲೋ ಮಾಡಿ

    ‘ಬಾರೆ ಬಾರೆ ಕುರುಬನ ರಾಣಿ’ ಸಾಂಗ್​ ಅಂದ್ರೆ ಈ ವ್ಯಕ್ತಿಗೆ ಅದೆಷ್ಟು ಇಷ್ಟವೋ ಪದಗಳಲ್ಲಿ ಹೇಳಲು ಕಷ್ಟ. ಕಾಲು ಮುರಿದ ನೋವಿನ ಪರಿವೇ ಆಗದಷ್ಟು ಆಪ್ತತೆ ಇದೆ ಆ ವ್ಯಕ್ತಿಗೂ-ಈ ಹಾಡಿಗೂ. ರೋಗಿಯ ಕೋರಿಕೆ ಮೇರೆಗೆ ವೈದ್ಯರೇ ಕುರುಬನ ರಾಣಿ ಹಾಡು ಹಾಕಿಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎನ್ನಲಾಗಿದೆ.

    ಬಾರೆ ಬಾರೆ ಕುರುಬನ ರಾಣಿ ಹಾಡು ಪ್ಲೇ ಆಗುತ್ತಿದ್ದಂತೆ ಫುಲ್​ ಜೋಶ್​ನಿಂದ ಮಲಗಿದ್ದಲ್ಲೇ ತಾಳಕ್ಕೆ ತಕ್ಕಂತೆ ಕೈಗಳ ಮೂಲಕ ಡಾನ್ಸ್ ಮಾಡುವ ಪರಿ ನೋಡುಗರನ್ನು ಹುಬ್ಬೇರಿಸುವಂತಿದೆ. ನಡುನಡುವೆ ಹಾಡಿಗೆ ತಕ್ಕಂತೆ ‘ಹಹ, ಏಯ್​, ಬಾರೆ ಬಾರೆ’ ಎನ್ನುವ ಅವರ ಉತ್ಸಾಹ ನೋಡುತ್ತಿದ್ದರೆ ಆಶ್ಚರ್ಯದ ಜತೆಗೆ ಇದಪ್ಪಾ ಜೋಶ್ ಅಂದ್ರೆ ಅನ್ನಿಸುತ್ತದೆ.

    ಇದು ಯಾವ ಆಸ್ಪತ್ರೆಯಲ್ಲಿ ನಡೆದ ಘಟನೆ, ರೋಗಿ ಯಾರು ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಆದರೆ ಆಪರೇಶನ್​ ಕೊಠಡಿಯಲ್ಲಿ ಕನ್ನಡ ಮಾತನಾಡುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಆ ವಿಡಿಯೋಗಾಗಿ ಕೆಳಗಿನ ಲಿಂಕ್​ ಕ್ಲಿಕ್​ ಮಾಡಿ.

    ಆಪರೇಶನ್​ ಥಿಯೇಟರ್​ನಲ್ಲಿ ಕುರುಬನ ರಾಣಿ ಹಾಡಿಗೆ ಡಾನ್ಸ್, ವಿಡಿಯೋ ವೈರಲ್

    ಆಪರೇಶನ್​ ಥಿಯೇಟರ್​ನಲ್ಲಿ ಕುರುಬನ ರಾಣಿ ಹಾಡಿಗೆ ಡಾನ್ಸ್, ವಿಡಿಯೋ ವೈರಲ್ ಇದಪ್ಪ ಜೋಶ್ ಅಂದ್ರೆ! ಕಾಲು ಮುರಿದರೂ ನೋವಿನ ಪರಿವೇ ಇಲ್ಲದೆ ಆಸ್ಪತ್ರೆಯ ಆಪರೇಷನ್​ ಥಿಯೇಟರ್​ನಲ್ಲಿ ಬೆಡ್​ ಮೇಲೆ ಮಲಗಿಕೊಂಡೇ ಡಾನ್ಸ್ ಮಾಡುತ್ತಿದ್ದಾರೆ. 'ಬಾರೆ ಬಾರೆ ಕುರುಬನ ರಾಣಿ' ಸಾಂಗ್​ ಅಂದ್ರೆ ಈ ವ್ಯಕ್ತಿಗೆ ಅದೆಷ್ಟು ಆಪ್ತ ಎಂದು ನೀವೆ ನೋಡಿ. ಈ ವಿಡಿಯೋ ಇದೀಗ ಸಖತ್​ ವೈರಲ್ ಆಗ್ತಿದೆ.​ #Dance #Hospital #OperationTheater #BareBareKrubanaRani

    Posted by Vijayavani on Thursday, July 16, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts