More

    ಪತಂಜಲಿಯ ಕರೊನಾ ಕಿಟ್​ನ ದರ 545 ರೂಪಾಯಿ

    ಹರಿದ್ವಾರ: ಕರೊನಾ ಸೋಂಕಿನ ಚಿಕಿತ್ಸೆಗಾಗಿ ಭಾರತದ ಪತಂಜಲಿ ಸಂಸ್ಥೆ ಕರೊನಿಲ್​ ಮತ್ತು ಸ್ವಾಸರಿ ಎಂಬ ಔಷಧವನ್ನು ಮಂಗಳವಾರ ಬಿಡುಗಡೆ ಮಾಡಿದೆ.

    ಔಷಧವನ್ನು ಬಿಡುಗಡೆ ಮಾಡಿ ಮಾತನಾಡಿದ ಯೋಗಗುರು ರಾಮದೇವ್​, ಕರೊನಾ ಸೋಂಕಿನ ಚಿಕಿತ್ಸೆಗಾಗಿ ಇಡೀ ವಿಶ್ವ ಚುಚ್ಚುಮದ್ದು ಅಥವಾ ಔಷಧಕ್ಕಾಗಿ ಕಾಯುತ್ತಿತ್ತು. ನಾವು ಕರೊನಿಲ್​ ಮತ್ತು ಸ್ವಾಸರಿ ಎಂಬ ಕರೊನಾ ಕಿಟ್​ ಅನ್ನು ಬಿಡುಗಡೆ ಮಾಡುವ ಮೂಲಕ ಆ ಕಾಯುವಿಕೆಯನ್ನು ಕೊನೆಗೊಳಿಸಿದ್ದೇವೆ. ಇದು ಕರೊನಾ ಚಿಕಿತ್ಸೆಗೆ ಲಭ್ಯವಾಗುತ್ತಿರುವ ಮೊಟ್ಟಮೊದಲ ಆಯುರ್ವೇದ ಔಷಧವಾಗಿದೆ. ನಿಯಂತ್ರಿತ ಕ್ಲಿನಿಕಲ್​ ಟ್ರಯಲ್​ ಬಳಿಕ ಈ ಔಷಧವನ್ನು ತಯಾರಿಸಲಾಗಿದೆ. ಪತಂಜಲಿ ಸಂಶೋಧನಾ ಕೇಂದ್ರ ಮತ್ತು ನಿಮ್ಸ್​ ಜಂಟಿಯಾಗಿ ಈ ಔಷಧವನ್ನು ಸಿದ್ಧಪಡಿಸಿವೆ. ಈ ಔಷಧವನ್ನು ಪಡೆಯುವ ಸೋಂಕಿತರು 3ರಿಂದ 7 ದಿನಗಳೊಳಗಾಗಿ ಗುಣಮುಖರಾಗುತ್ತಾರೆ ಎಂದು ಹೇಳಿದರು.

    ಕರೊನಿಲ್​ ಮತ್ತು ಸ್ವಾಸರಿ ಕಿಟ್​ ಅನ್ನು ಮೊದಲಿಗೆ ದೆಹಲಿ, ಅಹಮದಾಬಾದ್​ ಸೇರಿ ಹಲವು ನಗರಗಳಲ್ಲಿ 280 ಸೋಂಕಿತರನ್ನು ಬಳಸಿಕೊಂಡು ನಿಯಂತ್ರಿತ ಕ್ಲಿನಿಕಲ್​ ಟ್ರಯಲ್​ಗೆ ಒಳಪಡಿಸಲಾಯಿತು. ಈ ಔಷಧ ತೆಗೆದುಕೊಂಡ ಎಲ್ಲರೂ ಸಂಪೂರ್ಣವಾಗಿ ಗುಣಮುಖರಾದರು. ನಮ್ಮ ಔಷಧದ ಮೂಲಕ ಕರೊನಾ ವೈರಾಣುವನ್ನು ನಿಯಂತ್ರಿಸಿದಷ್ಟೇ ಅಲ್ಲ, ಅದರಿಂದ ಉಂಟಾಗುವ ಎಲ್ಲ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿತು ಎಂದು ತಿಳಿಸಿದರು.

    ಇದನ್ನೂ ಓದಿ: ಕರೊನಾ ಆತಂಕದಲ್ಲಿ ಕಿಚ್ಚ ಸುದೀಪ್​!; ಇಡೀ ರಸ್ತೆ ಸೀಲ್​ಡೌನ್​, ವ್ಯಾಪಾರ ವಹಿವಾಟು ನಿರ್ಬಂಧ…

    ಕರೊನಾ ಕಿಟ್​ 545 ರೂ. ದರದಲ್ಲಿ ಲಭ್ಯವಿದೆ. ಈ ಕಿಟ್​ನಲ್ಲಿನ ಔಷಧ 30 ದಿನಗಳವರೆಗೆ ಬರುತ್ತದೆ ಎಂದು ಪತಂಜಲಿಯ ಸಿಇಒ ಆಚಾರ್ಯ ಬಾಲಕೃಷ್ಣ ಹೇಳಿದರು.

    ಪತಂಜಲಿಯ ಕರೊನಾ ಕಿಟ್​ ಮುಕ್ತ ಮಾರುಕಟ್ಟೆಯಲ್ಲಿ ಇನ್ನೂ ಲಭ್ಯವಿಲ್ಲ. ಇನ್ನೊಂದು ವಾರದಲ್ಲಿ ಪತಂಜಲಿ ಸ್ಟೋರ್​ಗಳಲ್ಲಿ ಇದು ಲಭ್ಯವಾಗಲಿದೆ. ಜತೆಗೆ ಆನ್​ಲೈನ್​ನಲ್ಲಿ ಖರೀದಿಸಲು ಬಯಸುವವರಿಗಾಗಿ ಆ್ಯಪ್​ ಅನ್ನು ಕೂಡ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ಏನಿದು ಕರೊನಿಲ್​: ಕರೊನಿಲ್​ ಔಷಧವನ್ನು ಅಶ್ವಗಂಧ, ಅಮೃತಬಳ್ಳಿ ಮತ್ತು ತುಳಸಿಯ ಮಿಶ್ರಣದೊಂದಿಗೆ ತಯಾರಿಸಲಾಗಿದೆ. ಈ ಔಷಧವನ್ನು ತೆಗೆದುಕೊಳ್ಳುವುದರಿಂದ ಕರೊನಾ ಸೋಂಕಿತರು ಶೇ.100 ಚೇತರಿಸಿಕೊಳ್ಳುತ್ತಾರೆ ಎಂದು ಪತಂಜಲಿ ಸಂಸ್ಥೆ ಹೇಳಿಕೊಂಡಿದೆ.

    ಶಾಸಕರ ಭವನಕ್ಕೂ ಕಾಲಿಟ್ಟ ಕರೊನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts