More

    ದೆಹಲಿಯಿಂದ ರಾಮಗುಂಡಂಗೆ ರೈಲಿನಲ್ಲಿ ಆಗಮಿಸಿದ್ದ 8 ಮಂದಿಯಲ್ಲಿ ಕರೊನಾ ವೈರಸ್; ಅನಿವಾರ್ಯವಿಲ್ಲದಿದ್ದರೆ ಪ್ರಯಾಣ ಮಾಡಬೇಡಿ ಎನ್ನುತ್ತಿದೆ ರೈಲ್ವೆ ಸಚಿವಾಲಯ

    ತೆಲಂಗಾಣ: ದೆಹಲಿಯಿಂದ ತೆಲಂಗಾಣದ ರಾಮಗುಂಡಂಗೆ ಮಾ.13 ರಂದು ಸಂಚಾರ ಮಾಡಿದ್ದ ಎಪಿ ಕ್ರಾಂತಿ ಎಕ್ಸ್​ಪ್ರೆಸ್​ ರೈಲಿನಲ್ಲಿದ್ದ 8 ಪ್ರಯಾಣಿಕರಿಗೆ ಕರೊನಾ ವೈರಸ್ ಸೋಂಕು ತಗುಲಿದ್ದಾಗಿ ಇಂದು ವರದಿಯಾಗಿದೆ.

    ಈ ಬಗ್ಗೆ ರೈಲ್ವೆ ಇಲಾಖೆ ಟ್ವೀಟ್ ಮಾಡಿದ್ದು, ಮಾ.13ರಂದು, ಎಪಿ ಸಂಪರ್ಕ ಕ್ರಾಂತಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಪ್ರಯಾಣ ಮಾಡಿದವರಲ್ಲಿ ಕೆಲವರಲ್ಲಿ ಕರೊನಾ ಶಂಕೆ ಕಂಡುಬಂದಿತ್ತು. ರಕ್ತದ ಮಾದರಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಅವರಲ್ಲಿ 8 ಮಂದಿಯ ವೈದ್ಯಕೀಯ ವರದಿಯಲ್ಲಿ ಕರೊನಾ ಪಾಸಿಟಿವ್​ ಬಂದಿದೆ ಎಂದು ತಿಳಿಸಿದೆ. ಹಾಗೇ, ಅನಿವಾರ್ಯವಲ್ಲದೆ ಇದ್ದರೆ ಎಲ್ಲ ರೀತಿಯ ಪ್ರಯಾಣಗಳನ್ನೂ ರದ್ದುಪಡಿಸಿಕೊಳ್ಳಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದೆ.

    ಹಾಗೇ ಮುಂಬೈನಿಂದ ಗೋದಾನ್​ ಎಕ್ಸ್​ಪ್ರೆಸ್​ ರೈಲಿನಲ್ಲಿ ಮಾ.16ರಂದು ಜಬಲ್​ಪುರಕ್ಕೆ ಆಗಮಿಸಿದ್ದ 4 ಮಂದಿಗೆ ಕರೊನಾ ಸೋಂಕು ತಗುಲಿದೆ. ಇವರೆಲ್ಲ ಕಳೆದವಾರ ದುಬೈನಿಂದ ಭಾರತಕ್ಕೆ ಆಗಮಿಸಿದ್ದರು. ಮಾ.16ರಂದು ರೈಲಿನಲ್ಲಿ ಬಿ1 ಕೋಚ್​ನಲ್ಲಿ ಪ್ರಯಾಣ ಬೆಳೆಸಿದ್ದರು ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ. ನಾಲ್ಕು ಕರೊನಾ ವೈರಸ್​ ಪ್ರಕರಣ ಪತ್ತೆಯಾಗುತ್ತಲೇ ಜಬಲ್​ಪುರ ಲಾಕ್​ಡೌನ್​ ಆಗಿದೆ.

    ಕರೊನಾ ಹರಡುವಿಕೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ದೂರದ ಪ್ರಯಾಣಗಳನ್ನು ಮಾಡಬೇಡಿ ಎಂದು ಸೂಚನೆ ನೀಡುತ್ತಿರುವ ಭಾರತೀಯ ರೈಲ್ವೆ ಸಚಿವಾಲಯ ಈಗಾಗಲೇ ಹಲವು ಮಾರ್ಗಗಳಲ್ಲಿ ರೈಲು ಸಂಚಾರವನ್ನು ರದ್ದುಗೊಳಿಸಿದೆ. ಹಾಗೇ ಜನತಾ ಕರ್ಫ್ಯೂ ದಿನವಾದ ಭಾನುವಾರ (ಮಾ.22) 3700 ರೈಲುಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದೆ. (ಏಜೆನ್ಸೀಸ್​)

    ಲಾಕ್​ಡೌನ್ ಕೂಡ ಪ್ರಯೋಜನಕ್ಕೆ ಬರಲಿಲ್ಲ…ಮಹಾರಾಷ್ಟ್ರದಲ್ಲಿ ಒಂದೇ ದಿನ 11 ಹೊಸ ಕರೊನಾ ಕೇಸ್​ ಪತ್ತೆ; ಹೀಗಾದ್ರೆ ವೈರಸ್ ಹರಡುವಿಕೆ 3ನೇ ಹಂತಕ್ಕೆ ಕಾಲಿಡುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts