More

    ಹುಬ್ಬಳ್ಳಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ನಡುವಿನ ರೈಲು ಪ್ರಯಾಣ ದುಬಾರಿ

    ಬೆಂಗಳೂರು: ನಗರದ ಕೆಎಸ್​ಆರ್​ ಮತ್ತು ಯಶವಂತಪುರ ರೈಲು ನಿಲ್ದಾಣಗಳಿಂದ ಹುಬ್ಬಳ್ಳಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಹಲವು ಸ್ಥಳಗಳಿಗೆ ತೆರಳುವ ಪ್ಯಾಸೆಂಜರ್​ ರೈಲುಗಳನ್ನು ಎಕ್ಸ್​ಪ್ರೆಸ್​ ರೈಲುಗಳನ್ನಾಗಿ ಪರಿವರ್ತಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಇದರಿಂದಾಗಿ ಈ ಎಲ್ಲ ರೈಲುಗಳ ಪ್ರಯಾಣದರಗಳು ಭಾರಿ ಏರಿಕೆಯಾಗುವುದು ನಿಶ್ಚಿತವಾಗಿದೆ.

    200 ಕಿ.ಮೀ.ಗಿಂತ ಹೆಚ್ಚಿನ ಅಂತರ ಕ್ರಮಿಸುವ ಪ್ಯಾಸೆಂಜರ್​ ರೈಲುಗಳಿಗೆ ಈ ನಿರ್ಧಾರ ಅನ್ವಯವಾಗಲಿದೆ. ರೈಲುಗಳ ವೇಗವನ್ನು ಹೆಚ್ಚಿಸುವ ಜತೆಗೆ ಆರ್ಥಿಕವಾಗಿ ಹೆಚ್ಚು ಲಾಭ ತರದ ನಿಲ್ದಾಣಗಳಲ್ಲಿನ ನಿಲುಗಡೆಗಳನ್ನು ರದ್ದುಗೊಳಿಸುವಂತೆ ರೈಲ್ವೆ ನಿಗಮ ನೀಡಿದ ಸೂಚನೆಯ ಅನ್ವಯ ಈ ನಿರ್ಧಾರ ಕೈಗೊಂಡಿರುವುದಾಗಿ ನೈಋತ್ಯ ರೈಲ್ವೆ ತಿಳಿಸಿದೆ.

    ಬೆಂಗಳೂರಿನಿಂದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಹಬ್ಬಳ್ಳಿಗೆ ಮೆಮು ಮತ್ತು ಡೆಮು ರೈಲುಗಳ ಸೇರಿ ಒಟ್ಟು 38 ಪ್ಯಾಸೆಂಜರ್​ ರೈಲುಗಳು ಸಂಚರಿಸುತ್ತವೆ. ಈ ಎಲ್ಲ ರೈಲುಗಳು ಈಗ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರವೇ ನಿಲುಗಡೆ ನೀಡಲಿವೆ.

    ಇದನ್ನೂ ಓದಿ: ಹೆಬ್ಬೆಟ್ ಮಂಜನಿಂದ ಹೆಣವಾಗಬೇಕಿದ್ದ ಕೊರಂಗು ಪಾರಾಗಿದ್ದೇ ರೋಚಕ!

    ಪ್ಯಾಸೆಂಜರ್​ ರೈಲುಗಳ ಪ್ರಯಾಣಕ್ಕೆ ಕನಿಷ್ಠ 10 ರೂ. ಶುಲ್ಕವಿದೆ. ಆದರೆ, ಈ ರೈಲುಗಳು ಎಕ್ಸ್​ಪ್ರೆಸ್​ ರೈಲುಗಳಾಗಿ ಪರಿವರ್ತನೆಗೊಂಡ ಬಳಿಕ ಕನಿಷ್ಠ ಪ್ರಯಾಣ ದರ 30 ರೂ.ಗೆ ಹೆಚ್ಚಳವಾಗಲಿದೆ. ಇದರಿಂದ ದೂರಪ್ರಯಾಣಕ್ಕೆ ಪ್ಯಾಸೆಂಜರ್​ ರೈಲುಗಳನ್ನು ಅವಲಂಬಿಸಿದ್ದ ದಿನಗೂಲಿ ನೌಕರರು, ಕೆಳಮಧ್ಯಮವರ್ಗದ ಜನರು ಒಂದಕ್ಕೆ ಮೂರುಪಟ್ಟು ಹೆಚ್ಚು ಪ್ರಯಾಣ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿದ್ದಾರೆ. ಆದ್ದರಿಂದ, ಅಂಥವರಿಗಾಗಿ ಪರ್ಯಾಯ ಸೇವೆಗಳನ್ನು ಒದಗಿಸುವಂತೆ ಒತ್ತಾಯಗಳು ಕೇಳಿಬರಲಾರಂಭಿಸಿವೆ.

    ಟಿಕೆಟ್​ಗಳು ಮಾರಾಟವಾಗುವ ಪ್ರಮಾಣವನ್ನು ಆಧರಿಸಿ ರೈಲ್ವೆ ಇಲಾಖೆ ಆಯಾ ನಿಲ್ದಾಣಗಳು ಲಾಭಕಾರಕವೋ, ನಷ್ಟಕಾರಕವೋ ಎಂದು ನಿರ್ಧರಿಸುತ್ತದೆ. ಆದರೆ, ಇಂಥ ನಿಲ್ದಾಣಗಳಿಗೆ ದೈನಂದಿನ ಪಾಸ್​ಗಳನ್ನು ಪಡೆದುಕೊಂಡವರು ಪ್ರಯಾಣಿಸುತ್ತಾರೆ. ನಿಲ್ದಾಣದ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಪಾಸ್​ಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ, 200 ಕಿ.ಮೀ. ಬದಲು 400 ಕಿ.ಮೀ.ವರೆಗಿನ ಅಂತರ ಕ್ರಮಿಸುವ ಪ್ಯಾಸೆಂಜರ್​ ರೈಲುಗಳನ್ನು ಎಕ್ಸ್​ಪ್ರೆಸ್​ ರೈಲುಗಳನ್ನಾಗಿ ಪರಿವರ್ತಿಸಬೇಕು. ಇದರಿಂದ ಸಹಸ್ರಾರು ಜನರಿಗೆ ಅನುಕೂಲವಾಗುತ್ತದೆ ಎಂಬ ಒತ್ತಾಯವೂ ಕೇಳಿಬಂದಿದೆ.

    ಎಕ್ಸ್​ಪ್ರೆಸ್​ ರೈಲುಗಳಾಗಿ ಪರಿವರ್ತನೆಗೊಳ್ಳಲಿರುವ ಪ್ಯಾಸೆಂಜರ್​ ರೈಲುಗಳು
    ಯಶವಂತಪುರ-ಚಿಕ್ಕಮಗಳೂರು-ಯಶವಂತರಪುರ (56278/56277 ), ಸೇಲಂ-ಯಶವಂತಪುರ-ಸೇಲಂ (56241/56242), ಕೆಎಸ್​ಆರ್​ ಬೆಂಗಳೂರು-ಶಿವಮೊಗ್ಗ-ಕೆಎಸ್​ಆರ್​ ಬೆಂಗಳೂರು (56227/56228), ಕೆಎಸ್​ಆರ್​ ಬೆಂಗಳೂರು-ಶಿವಮೊಗ್ಗ-ಕೆಎಸ್​ಆರ್​ ಬೆಂಗಳೂರು (56917/56918), ಮೈಸೂರು-ಯಶವಂತಪುರ_ಮೈಸೂರು (56216/56215), ಯಶವಂತಪುರ-ಚಿತ್ರದುರ್ಗ-ಯಶವಂತಪುರ (56519/56520), ಕೆಎಸ್​ಆರ್​ ಬೆಂಗಳೂರು-ಹುಬ್ಬಳ್ಳಿ-ಕೆಎಸ್​ಆರ್​ ಬೆಂಗಳೂರು (56516/56515), ಕೆಎಸ್​ಆರ್​ ಬೆಂಗಳೂರು-ಹುಬ್ಬಳ್ಳಿ-ಕೆಎಸ್​ಆರ್​ ಬೆಂಗಳೂರು (56911/56912), ಹುಬ್ಬಳ್ಳಿ-ಕೆಎಸ್​ಆರ್​ ಬೆಂಗಳೂರು-ಹುಬ್ಬಳ್ಳಿ (56914/56913), ಕೆಎಸ್​ಆರ್​ ಬೆಂಗಳೂರು-ಹುಬ್ಬಳ್ಳಿ-ಕೆಎಸ್​ಆರ್​ ಬೆಂಗಳೂರು (56515/56516), ಕೆಎಸ್​ಆರ್​ ಬೆಂಗಳೂರು-ಹೊಸಪೇಟೆ-ಕೆಎಸ್​ಆರ್​ ಬೆಂಗಳೂರು (56909/56910), ಕೆಎಸ್​ಆರ್​ ಬೆಂಗಳೂರು-ಕರೈಕಲ್​-ಕೆಎಸ್​ಆರ್​ ಬೆಂಗಳೂರು (56514/56513) ಮತ್ತು ಯಶವಂತಪುರ-ವಿಜಯವಾಡ-ಯಶವಂತಪುರ (56503/56504)

    ರಿಲಯನ್ಸ್​ ಇಂಡಸ್ಟ್ರೀಸ್​ ಈಗ ಸಂಪೂರ್ಣ ಸಾಲಮುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts