More

    ಕೃಷ್ಣ ಮಠದಲ್ಲಿ ಪಶ್ಚಿಮ ಜಾಗರಪೂಜೆ ಆರಂಭ

    ಉಡುಪಿ: ಕೃಷ್ಣ ಮಠದಲ್ಲಿ ಸೂರ್ಯೋದಯಕ್ಕೂ ಮುನ್ನ ಆಶ್ವಿಜ ಮಾಸದ ಶುಕ್ಲ ಏಕಾದಶಿಯಿಂದ 1 ತಿಂಗಳು ನಡೆಯುವ ಪಶ್ಚಿಮ ಜಾಗರ ಪೂಜೆ ಮಂಗಳವಾರ ಪ್ರಾರಂಭವಾಗಿದೆ. ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಮೊದಲಿಗೆ ಕೃಷ್ಣನಿಗೆ ಕೂರ್ಮಾರಾತಿ ಮಾಡಿ, ಬಳಿಕ ಅನುಕ್ರಮವಾಗಿ ಮುಖ್ಯಪ್ರಾಣ ದೇವರಿಗೆ, ಮಧ್ವಾಚಾರ್ಯರಿಗೆ, ಗರುಡ ದೇವರಿಗೆ ಆರತಿ ಬೆಳಗಿದರು.

    ಬೆಳಗ್ಗಿನ ಜಾವ ಪೂಜಾ ಸಮಯದಲ್ಲಿ ಕೃಷ್ಣ ಮಠದ ಗರ್ಭಗುಡಿ ಸುತ್ತಲಿನ ದಳಿಗಳಲ್ಲಿ ದೀಪಗಳನ್ನು ಹಚ್ಚಲಾಗುತ್ತದೆ. ವಿಶೇಷವಾಗಿ ಸೂರ್ಯ ವಾದ್ಯವನ್ನು ಮೊಳಗಿಸಲಾಗುತ್ತದೆ. ಕೃಷ್ಣನಿಗೆ ನಿತ್ಯ 14 ಬಗೆಯ ಪೂಜೆಗಳೊಂದಿಗೆ ಪಶ್ಚಿಮ ಜಾಗರ ಪೂಜೆ ಸೇರ್ಪಡೆಗೊಂಡಿದ್ದು, ಒಂದು ತಿಂಗಳು ನಿತ್ಯ 15 ಪೂಜೆ ನಡೆಯಲಿದ್ದು, ಉತ್ಥಾನ ದ್ವಾದಶಿಯಂದು ಸಮಾಪನಗೊಳ್ಳಲಿದೆ.

    ಬೆಳಗ್ಗೆ ನಿರ್ಮಾಲ್ಯ ಪೂಜೆ, ಉಷಾಃಕಾಲ ಪೂಜೆ, ಅಕ್ಷಯಪಾತ್ರೆ ಪೂಜೆ, ಪಂಚಾಮೃತ ಅಭಿಷೇಕದ ಬಳಿಕ ಪಶ್ಚಿಮ ಜಾಗರ ಪೂಜೆ ನಡೆಯಲಿದೆ. ಅನಂತರ ಉಧ್ವರ್ತನ ಪೂಜೆ, ಕಳಶ ಪೂಜೆ, ತೀರ್ಥ ಪೂಜೆ, ಅಲಂಕಾರ ಪೂಜೆ, ಅವಸರ ಕನಕಾದಿ ಪೂಜೆ, ಮಹಾಪೂಜೆ ಜರುಗಲಿದೆ. ಸಾಯಂಕಾಲ ಚಾಮರ ಸೇವೆ, ರಾತ್ರಿಪೂಜೆ, ಅಷ್ಟಾವಧಾನ ಪೂಜೆ, ಶಯನೋತ್ಸವ ಯಥಾಪ್ರಕಾರ ನೆರವೇರಲಿದೆ.

    ಪಕ್ಷಿ ಜಾಗರ ಪೂಜೆ: ಚಾತುರ್ಮಾಸ್ಯ ಸಮಾಪನಕ್ಕೆ ಒಂದು ತಿಂಗಳು ಪೂರ್ವದಲ್ಲಿ ಕೈಗೊಳ್ಳುವ ಈ ವಿಶಿಷ್ಟ ಪೂಜೆಗೆ ಪಕ್ಷಿ ಜಾಗರ ಪೂಜೆ ಎಂದೂ ಕರೆಯುತ್ತಾರೆ. ಬ್ರಾಹ್ಮೀ ಮುಹೂರ್ತದಲ್ಲಿ ಪಕ್ಷಿಗಳು ಎಚ್ಚರಗೊಳ್ಳುವ ಸಮಯದಲ್ಲಿ ನಡೆಸುವ ಪೂಜೆಯಾಗಿರುವುದರಿಂದ ಈ ಹೆಸರು ಬಂದಿದೆ. ಲಕ್ಷ್ಮೀ ದೇವಿ ಪ್ರೀತ್ಯರ್ಥವಾಗಿ ಹಾಗೂ ಯೋಗನಿದ್ರೆಯಲ್ಲಿರುವ ಭಗವಂತನನ್ನು ಉತ್ಥಾನ ದ್ವಾದಶಿಯಂದು ಎಚ್ಚರಿಸುವ ಪೂರ್ವಭಾವಿ ಈ ಪೂಜೆ ನಡೆಸುವುದು ಸಂಪ್ರದಾಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts