More

    ಲಂಕಾಸುರನಿಗೆ ಜತೆಯಾದ ಪಾರ್ವತಿ; ಮರಿ ಟೈಗರ್ ಚಿತ್ರದಲ್ಲಿ ಮಲಯಾಳಿ ಬೆಡಗಿ…

    ಬೆಂಗಳೂರು: ‘ಮರಿ ಟೈಗರ್’ ವಿನೋದ್ ಪ್ರಭಾಕರ್ ‘ಲಂಕಾಸುರ’ನಾಗಿದ್ದಾರೆ. ಕಳೆದ ವರ್ಷವೇ ಈ ಸಿನಿಮಾ ಘೋಷಣೆ ಆಗಿದ್ದರೂ, ಕೋವಿಡ್ ಹಿನ್ನೆಲೆಯಲ್ಲಿ ಶೂಟಿಂಗ್​ಗೆ ಚಾಲನೆ ಸಿಕ್ಕಿರಲಿಲ್ಲ. ಇದೀಗ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣದಲ್ಲಿ ತಂಡ ತೊಡಗಿಸಿಕೊಂಡಿದೆ. ಅಷ್ಟೇ ಅಲ್ಲ, ನಾಯಕಿಯ ಆಯ್ಕೆಯನ್ನೂ ನಿರ್ದೇಶಕರು ಅಂತಿಮ ಮಾಡಿದ್ದಾರೆ. ಮಲಯಾಳಿ ಬೆಡಗಿ ಪಾರ್ವತಿ ಅರುಣ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿ ನಟಿಸಿರುವ ಪಾರ್ವತಿ, ಈಗಾಗಲೇ ‘ಗೋಲ್ಡನ್ ಸ್ಟಾರ್’ ಗಣೇಶ್ ಜತೆ ‘ಗೀತಾ’ ಸಿನಿಮಾದಲ್ಲಿ ಮೂವರು ನಾಯಕಿಯರ ಪೈಕಿ ಒಬ್ಬರಾಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಸ್ಯಾಂಡಲ್​ವುಡ್​ನತ್ತ ಮುಖಮಾಡಿ, ‘ಲಂಕಾಸುರ’ನಿಗೆ ಜತೆಯಾಗಿದ್ದಾರೆ.

    ಈ ಹಿಂದೆ ‘ಮೂರ್ಕಲ್ ಎಸ್ಟೇಟ್’ ಸಿನಿಮಾ ನಿರ್ದೇಶನ ಮಾಡಿದ್ದ ಪ್ರಮೋದ್, ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ಅಂಡರ್​ವರ್ಡ್ ಹಿನ್ನೆಲೆಯ ಸಿನಿಮಾ ಇದು. ಇಲ್ಲಿ ನಾಯಕಿ ಎನ್​ಆರ್​ಐ ಹುಡುಗಿ. ವಿದೇಶದಿಂದ ಭಾರತಕ್ಕೆ ಬಂದಿರುತ್ತಾಳೆ. ಸಭ್ಯ ಹುಡುಗಿಯ ಪಾತ್ರ. ಅದೇ ರೀತಿ ವಿನೋದ್ ಪಾತ್ರವೂ ವಿಭಿನ್ನವಾಗಿದೆ. ಯೋಗಿಯವರೂ ತಂಡದ ಜತೆಗಿದ್ದಾರೆ’ ಎಂಬುದು ನಿರ್ದೇಶಕರ ಮಾತು. ಈಗಾಗಲೇ ನಾಯಕ ಮತ್ತು ನಾಯಕಿಯ ಕಾಂಬಿನೇಷನ್ ಚಿತ್ರೀಕರಣ ಶುರುವಾಗಿದ್ದು ಬೆಂಗಳೂರಿನ ಹಲವೆಡೆ ಶೂಟಿಂಗ್ ಮಾಡಲಾಗುತ್ತಿದೆ. 20 ದಿನಗಳಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿ, ಒಟ್ಟು 65-70 ದಿನಗಳಲ್ಲಿ ಸಿನಿಮಾ ಮುಗಿಸುವ ಲೆಕ್ಕಾಚಾರ ನಿರ್ದೇಶಕರದ್ದು. ಎಸ್.ಟಿ ಮುನಿಸ್ವಾಮಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ವಿಜಯ್ ಕೃಷ್ಣ ಸಂಗೀತ, ಸುಜ್ಞಾನ್ ಛಾಯಾಗ್ರಹಣವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts