More

    ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಿ

    ಮುದ್ದೇಬಿಹಾಳ: ಕ್ರೀಡೆ ಯಾವುದೇ ಇರಲಿ ಸೋಲು, ಗೆಲುವಿನ ಬಗ್ಗೆ ಯೋಚಿಸದೆ ಸ್ಪರ್ಧಾ ಮನೋಭಾವದಿಂದ ಪಾಲ್ಗೊಳ್ಳಬೇಕು ಎಂದು ಅಸ್ಕಿ ಫೌಂಡೇಷನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.

    ಪಟ್ಟಣದ ವಿದ್ಯಾ ನಗರದಲ್ಲಿರುವ ಹೋಳ್ಕರ್ ಕಾಲನಿಯ ಅಭ್ಯುದಯ ಶಿಕ್ಷಣ ಸಂಸ್ಥೆಯ ವಸತಿ ನಿಲಯ ಆವರಣದಲ್ಲಿ ಜ್ಞಾನ ಭಾರತಿ ವಿದ್ಯಾ ಮಂದಿರ ಮತ್ತು ಅಭ್ಯುದಯ ಪಿಯು ಕಾಲೇಜ್ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ಪ್ರಾಂತೀಯ ಹಾಗೂ ಕ್ಷೇತ್ರೀಯ ಕಬಡ್ಡಿ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಆರೋಗ್ಯಕರ ಬದುಕಿನಲ್ಲಿ ಕ್ರೀಡೆ ಮುಖ್ಯ ಪಾತ್ರ ವಹಿಸುತ್ತದೆ. ಆಟಗಳನ್ನು ಉಳಿಸುವತ್ತ ವಿದ್ಯಾಭಾರತಿ ಸಂಸ್ಥೆ ಮುಂದಾಗಿರುವುದು ಶ್ರೇಷ್ಠ ಕಾರ್ಯ ಎಂದರು.

    ಸAಸ್ಥೆ ಕಾರ್ಯದರ್ಶಿ ಎಂ.ಎನ್.ಮದರಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ಸಾಹದಿಂದ ಭಾಗವಹಿಸಬೇಕು ಎಂದರು.

    ಬಾಲಾಜಿ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶಗೌಡ ಪಾಟೀಲ ಮಾತನಾಡಿ, ದೇಶೀಯ ಕ್ರೀಡೆಗಳಾದ ಕಬಡ್ಡಿ, ಖೋಖೊ ಮತ್ತಿತರ ಆಟಗಳ ಉಳಿವಿಗೆ ಶ್ರಮಿಸಬೇಕು ಎಂದರು.

    ಕಡಬ ನೈತಿಕ ಮತ್ತು ಆಧ್ಯಾತ್ಮಿಕ ಪ್ರಶಿಕ್ಷಣ ವಿಭಾಗದ ಪ್ರಮುಖ ವೆಂಕಟರಮಣರಾವ್, ವಿದ್ಯಾಭಾರತಿ ವಿಜಯಪುರ ಜಿಲ್ಲಾಧ್ಯಕ್ಷ ಪ್ರಭು ಕಡಿ, ರಾಜಶೇಖರ ಉಮರಾಣಿ, ಸೋಮನಗೌಡ ಬಿರಾದಾರ ಮಾತನಾಡಿದರು.

    ನಿವೃತ್ತ ದೈಹಿಕ ಶಿಕ್ಷಕ ಎಸ್.ಎಲ್.ಗುರವ್ ಅವರನ್ನು ಸನ್ಮಾನಿಸಲಾಯಿತು. ಲಿಂಬೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂದ್ರಶೇಖರ ಕವಟಗಿ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಬಿ.ಆರ್.ಓಸ್ವಾಲ, ಬಿಇಒ ಎಸ್.ಜೆ.ನಾಯಕ, ಸತೀಶ ಓಸ್ವಾಲ್, ಬಿ.ವೈ.ಕವಡಿ, ಗೋಪಿ ಜಾನ್ವೇಕರ, ಬಿ.ಪಿ.ಕುಲರ್ಣಿ, ಮಾಣಿಕ್‌ಚಂದ ದಂಡಾವತಿ ಇತರರಿದ್ದರು. ಹತ್ತು ಜಿಲ್ಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ಟಿ.ಡಿ.ಲಮಾಣಿ ನಿರೂಪಿಸಿದರು. ಅಶೋಕ ಕೊಡಗಾನೂರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts