More

    ಮೊದಲ ದಿನ ಭಾಗಶಃ ಪ್ರತಿಕ್ರಿಯೆ

    ಹಾವೇರಿ: ಸರ್ಕಾರ ಸೋಮವಾರದಿಂದ ಜಾರಿಗೊಳಿಸಿರುವ ಲಾಕ್​ಡೌನ್​ಗೆ ಜಿಲ್ಲೆಯಲ್ಲಿ ಮೊದಲ ದಿನ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿದೆ.
    ಜಿಲ್ಲೆಯಾದ್ಯಂತ ಲಾಕ್​ಡೌನ್ ಆದೇಶ ಬೆಳಗ್ಗೆ 10ರಿಂದಲೇ ಆರಂಭವಾಗಿದ್ದರೂ ಮಧ್ಯಾಹ್ನದವರೆಗೆ ಬೈಕ್, ಕಾರುಗಳಲ್ಲಿ ಅನಗತ್ಯವಾಗಿ ಜನರ ಓಡಾಟ ಎಂದಿನಂತೆಯೇ ಇತ್ತು. ಜನತಾ ಕರ್ಫ್ಯೂಗೆ ಸೂಕ್ತ ಸ್ಪಂದನೆ ಜನರಿಂದ ಸಿಗದ ಹಿನ್ನೆಲೆಯಲ್ಲಿ ಸರ್ಕಾರ ಕೆಲ ನಿರ್ಬಂಧಗಳನ್ನು ಹೆಚ್ಚಿಸಿ ಲಾಕ್​ಡೌನ್ ಘೊಷಿಸಿದೆ. ಆದರೂ ಜನರಲ್ಲಿ ಇದರ ಗಂಭೀರತೆ ಕಂಡುಬರಲಿಲ್ಲ. ಬೆಳಗ್ಗೆ ಎಂದಿನಂತೆ ತರಕಾರಿ, ದಿನಸಿ ಸೇರಿ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದವು. ಅಲ್ಲಿಯೂ ಜನ ಮಾರ್ಗಸೂಚಿ ಮರೆತು ವ್ಯವಹಾರ ನಡೆಸಿದರು. ಕೆಲವು ಬಟ್ಟೆ, ಬಂಗಾರದ ಅಂಗಡಿಗಳು ಎಂದಿನಂತೆಯೇ ಅರ್ಧಂಬರ್ಧ ತೆರೆದುಕೊಂಡಿದ್ದವು. ಬೆಳಗ್ಗೆ 10ರ ನಂತರ ತರಕಾರಿ, ದಿನಸಿ, ಹಾಲು ಸೇರಿ ಎಲ್ಲ ಅಂಗಡಿಗಳು ಪೂರ್ಣಪ್ರಮಾಣದಲ್ಲಿ ಸ್ಥಗಿತಗೊಂಡವು. ಮೆಡಿಕಲ್ ಶಾಪ್, ಆಸ್ಪತ್ರೆ, ಬ್ಯಾಂಕ್​ಗಳು ಆರಂಭಗೊಂಡಿದ್ದವು. ಜನರು ಆಸ್ಪತ್ರೆ, ಔಷಧ ಖರೀದಿ, ಬ್ಯಾಂಕ್​ಗೆ ಹೋಗುತ್ತೇವೆ ಎಂಬ ನೆಪ ಹೇಳಿ ಸುಗಮವಾಗಿ ಸಂಚರಿಸಿದರು.
    ಬೆಳಗ್ಗೆ ಕಟ್ಟುನಿಟ್ಟು: ಲಾಕ್​ಡೌನ್ ಆದೇಶವನ್ನು ಬೆಳ್ಳಂಬೆಳಗ್ಗೆ ಜಾರಿಗೊಳಿಸಲು ಪೊಲೀಸರು ಮುಂದಾದರು. ಬೆಳಗ್ಗೆ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದರೂ ಬೆಳಗ್ಗೆ 7.30ರಿಂದಲೇ ಪೊಲೀಸರು ಬೈಕ್​ಗಳನ್ನು ವಶಪಡಿಸಿ ಕೊಳ್ಳುವ ಕಾರ್ಯಾಚರಣೆ ಆರಂಭಿಸಿದರು.
    175 ವಾಹನ ಸೀಜ್: ಅನಗತ್ಯವಾಗಿ ರಸ್ತೆಗಿಳಿದಿದ್ದ 175 ವಾಹನಗಳನ್ನು ಸೋಮವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 5 ಕಾರು ಹಾಗೂ 170 ಬೈಕ್ ಸೇರಿದಂತೆ 175 ವಾಹನಗಳನ್ನು ಸೀಜ್ ಮಾಡಿದ್ದಾರೆ. ಇದಲ್ಲದೆ, ಮಾಸ್ಕ್ ಧರಿಸದ 740 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅವರಿಂದ 74 ಸಾವಿರ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts