More

    ವಿವಿ ಸಾಗರಕ್ಕೆ ಐದು ಟಿಎಂಸಿ ಅಡಿಗೂ ಅಧಿಕ ನೀರು

    ಪರಶುರಾಮಪುರ: ಭದ್ರಾಮೇಲ್ದಂಡೆ ಯೋಜನೆಯಡಿ ವಿವಿ ಸಾಗರಕ್ಕೆ ಐದು ಟಿಎಂಸಿ ಅಡಿಗೂ ಅಧಿಕ ನೀರನ್ನು ಕಾಲಕಾಲಕ್ಕೆ ಹರಿಸುವ ಜತೆಗೆ 2 ಟಿಎಂಸಿ ನೀರನ್ನು ನಿಯಮಿತವಾಗಿ ವೇದಾವತಿ ನದಿಗೆ ಹರಿಸುವಂತೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಲಾಗುವುದು ಎಂದು ಸಂಸದ ಎ. ನಾರಾಯಣಸ್ವಾಮಿ ತಿಳಿಸಿದರು.

    ಗ್ರಾಮದ ಕರ್ನಾಟಕ ಪಬ್ಲಿಕ್‌ಸ್ಕೂಲ್ ಆವರಣದಲ್ಲಿ ತೆರೆದಿದ್ದ ಭೋಜನ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಸಾರ್ವಜನಿಕರಿಗೆ ಸಿಹಿಯೂಟ ನೀಡುವ ಮೂಲಕ ತಮ್ಮ ಹುಟ್ಟುಹಬ್ಬದ ಜತೆಗೆ ಲಾಕ್‌ಡೌನ್ ಕಾರಣಕ್ಕೆ ತೆರೆದಿದ್ದ ಭೋಜನ ಕೇಂದ್ರಕ್ಕೆ ತೆರೆ ಎಳೆಯಲಾಯಿತು.

    ಕೂಡ್ಲಿಗಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಆಯ್ದ ತಾಲೂಕುಗಳಿಗೆ ತುಂಗಾ ಹಿನ್ನೀರು ತರುವ ಯೋಜನೆ ಕಾಮಗಾರಿ ಶೀಘ್ರಗತಿಯಲ್ಲಿ ನಡೆಯುತ್ತಿದ್ದು, ಇನ್ನುಮುಂದೆ ಈ ಭಾಗದ ಜನರಿಗೆ ಶಾಶ್ವತ ಕುಡಿವ ನೀರು ಲಭ್ಯವಾಗಲಿದೆ ಎಂದರು.

    ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮೂರು ತಾಲೂಕುಗಳ ಮುಖೇನ ಆಂಧ್ರದ ಕಲ್ಯಾಣದುರ್ಗ ತಾಲೂಕು ಬೋರನತಿಪ್ಪೆ ಡ್ಯಾಂಗೆ ವೇದಾವತಿ ನದಿ ನೀರು ಹರಿಯುತ್ತದೆ. ಇದರಿಂದ ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮೂರು ತಾಲೂಕುಗಳ ಕೆಲವೆಡೆ ಬ್ಯಾರೇಜ್, ಚೆಕ್‌ಡ್ಯಾಂ ನಿರ್ಮಿಸಿದ್ದರಿಂದ ರೈತರಿಗೆ ವರದಾನವಾಗಿದೆ ಎಂದರು.

    ಈ ವೇಳೆ ಚಳ್ಳಕೆರೆ, ಪರಶುರಾಮಪುರ ಭಾಗದ ಬಿಜೆಪಿ ಕಾರ್ಯಕರ್ತರು ಕೇಕ್ ಕತ್ತರಿಸಿ ಸಾರ್ವಜನಿಕರಿಗೆ ಹಂಚುವ ಮೂಲಕ ಸಂಸದರ ಹುಟ್ಟುಹಬ್ಬ ಆಚರಿಸಿದರು.

    ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ, ಜಿಲ್ಲಾ ಉಪಾಧ್ಯಕ್ಷ ಬಾಳೇಕಾಯಿ ರಾಮದಾಸ್, ಸೋಮಶೇಖರ ಮಂಡೀಮಠ, ಶಿವಪುತ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಗ್ರಾಪಂ ಸದಸ್ಯರಾದ ಬಿ. ತಿಪ್ಪೇಸ್ವಾಮಿ, ಆರ್. ತಿಪ್ಪೇಸ್ವಾಮಿ, ಬಿಜೆಪಿ ಮುಖಂಡರಾದ ಜೆ.ಒ. ಚನ್ನಕೇಶವ, ಡಿವಿಕೆ ಸ್ವಾಮಿ, ಪ್ರಸನ್ನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts