More

    ಪ್ಯಾಕೇಜ್ ರೈತರಿಗೆ ಪ್ರಯೋಜವಿಲ್ಲ

    ಪರಶುರಾಮಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಿಂದ ರೈತರಿಗೆ ಯಾವುದೇ ಉಪಯೋಗ ಆಗಲಾರದು ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಸೋಮಗುದ್ದುರಂಗಸ್ವಾಮಿ ತಿಳಿಸಿದ್ದಾರೆ.

    ರಾಜ್ಯ ಸರ್ಕಾರ ಆಂಧ್ರಪ್ರದೇಶದ ಮಾದರಿಯಲ್ಲಿ ಬಿತ್ತನೆ ಶೇಂಗಾಕ್ಕೆ 4000 ರೂ. ನಿಗದಿ ಮಾಡಬೇಕು ಹಾಗೂ ಲಘುಪೋಷಕಾಂಶಗಳನ್ನು ಉಚಿತವಾಗಿ ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಕೃಷಿ ಕೆಲಸಗಳಿಗೆ ದಿನಕ್ಕೆ 400 ರೂ. ಕೊಟ್ಟರೂ ಕೃಷಿಕೂಲಿಗೆ ಜನರು ಬರುತ್ತಿಲ್ಲ. ಇಂತಹ ವೇಳೆ ನರೇಗಾದಡಿ ಕೆಲಸ ಮಾಡಿದವರಿಗೆ ಕೇವಲ 280 ರೂ. ನಿಗದಿ ಸರಿಯಹಲ್ಲ. ಸಾಮಾಜಿಕ ಬದಲಾವಣೆಗೆ ತಕ್ಕಂತೆ ಕೂಲಿ ಹೆಚ್ಚಿಸಬೇಕು.

    ಮುಂಗಾರು ಬಿತ್ತನೆಗೆ ತೊಗರಿ, ಹುರುಳಿ, ನವಣೆ, ಸಜ್ಜೆ, ಔಡ್ಲ, ಎಳ್ಳು, ಶೇಂಗಾ, ಸೂರ್ಯಕಾಂತಿ ಮತ್ತಿತರೆ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts