More

    ಆಟೋ ಚಾಲಕನಿಗೆ ಕರೊನಾ

    ಪರಶುರಾಮಪುರ: ಚಳ್ಳಕೆರೆ ತಾಲೂಕು ಗ್ರಾಮವೊಂದರ ಆಟೋ ಚಾಲಕನಿಗೆ ಕರೊನಾ ದೃಢಪಟ್ಟಿದ್ದು, ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಕೋವಿಡ್ ವಿಭಾಗದಲ್ಲಿ ಇಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಸುಧಾ ತಿಳಿಸಿದರು.

    ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತಾಡಿ, ಆಟೋ ಚಾಲಕ ಜೂ.10ರಂದು ಭರಮಸಾಗರದಲ್ಲಿ ವಿವಾಹ ಕಾರ್ಯಕ್ರಮಕ್ಕೆ ತೆರಳಿದ್ದು, ಜೂ.11ರಂದು ನೂತನ ದಂಪತಿ ಮತ್ತು ಅವರ ಸಂಬಂಧಿ ಏಳು ಜನರನ್ನು ಆಂಧ್ರದ ಅನಂತಪುರ ಜಿಲ್ಲೆಯ ಲಕ್ಷ ್ಮಣ್ಣನಹಳ್ಳಿಗೆ ಆಟೋದಲ್ಲಿ ಕರದೊಯ್ದಿದ್ದಾನೆ.

    ಅಲ್ಲಿಂದ ವಾಪಸ್ ಬರುವಾಗ ಆಂಧ್ರದ ಚೆಕ್‌ಪೋಸ್ಟ್‌ನಲ್ಲಿ ಚಾಲಕನ ಗಂಟಲು ದ್ರವ ಪಡೆದು ಅನಂತಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ಜೂ.13ರಂದು ಬಂದ ವರದಿ ಮಾಹಿತಿಯನ್ನು ಚಿತ್ರದುರ್ಗ ಜಿಲ್ಲಾಡಳಿತಕ್ಕೆ ನೀಡಿತ್ತು.

    ಪಾಸಿಟಿವ್ ಬಂದ ಕಾರಣ ಯುವಕನನ್ನು ಪರಶುರಾಮಪುರ ಸರ್ಕಾರಿ ಆಸ್ಪತ್ರೆಗೆ ಭಾನುವಾರ ಕರೆತಂದು ಕೋವಿಡ್ ವಿಭಾಗದ ಕೊಠಡಿಯಲ್ಲಿ ಇಡಲಾಗಿದೆ ಎಂದು ಹೇಳಿದರು.

    ಜಿಲ್ಲಾಧಿಕಾರಿ ಆದೇಶದಂತೆ ಕರೊನಾ ಸೋಂಕಿತನನ್ನು ಪರಶುರಾಮಪುರದ ಸಿಎಚ್‌ಸಿಯ ಕೋವಿಡ್ ವಿಭಾಗದಲ್ಲಿ ಇಡಲಾಗಿದೆ. ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಗ್ರಾಮಸ್ಥರು ಆತಂಕ ಪಡಬೇಕಿಲ್ಲ.
    ಎಂ.ಮಲ್ಲಿಕಾರ್ಜುನಪ್ಪ
    ತಹಸೀಲ್ದಾರ್, ಚಳ್ಳಕೆರೆ

    ಪರಶುರಾಮಪುರ ಗ್ರಾಮಸ್ಥರ ವಿರೋಧ: ಕರೊನಾ ಸೋಂಕಿತನನ್ನು ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಇಡದೇ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಸ್ಥಳಕ್ಕೆ ಬಂದ ಆಗಮಿಸಿದ ಟಿಎಚ್‌ಒ ಡಾ.ಪ್ರೇಮಸುಧಾ, ಜಿಲ್ಲಾಧಿಕಾರಿ ಆದೇಶ ಪಾಲಿಸುವುದು ನಮ್ಮ ಕರ್ತವ್ಯ. ಇದಕ್ಕೆ ಅಡ್ಡಿಪಡಿಸಿದರೆ ಕಾನೂನು ಉಲ್ಲಂಘನೆ ಆಗಲಿದೆ ಎಂದು ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು. ಗ್ರಾಪಂ ಸದಸ್ಯರಾದ ಟಿ.ಗೋವಿಂದಪ್ಪ, ಕೃಷ್ಣಪ್ಪ, ತಿಪ್ಪೇಸ್ವಾಮಿ, ಗ್ರಾಮಸ್ಥರಾದ ನಾಗಭೂಷಣ, ನರಸಪ್ಪ, ಚಂದ್ರಣ್ಣ, ವಾಸು, ನಾಗರಾಜು, ಕರಿಯಣ್ಣ, ವೀರೇಂದ್ರ, ರಾಜಕುಮಾರ, ಚಿತ್ತಯ್ಯ, ತಿಮ್ಮಯ್ಯ, ರಾಜು, ನಾಗರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts