More

    ಹಳ್ಳಿಗಳಲ್ಲಿ ಹನಿ ನೀರಿಗೂ ತತ್ವಾರ

    ಪರಶುರಾಮಪುರ: ಗ್ರಾಮದಲ್ಲಿ ನಿರ್ಮಾಣವಾಗಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಜಯಣ್ಣನಗರ, ದೊಡ್ಡಗೊಲ್ಲರಹಟ್ಟಿ, ಕರೇಕಲ್ ಗೊಲ್ಲರಹಟ್ಟಿ, ಆಸ್ಪತ್ರೆಯ ಎದುರಿನ ಆರ್‌ಒ ಪ್ಲಾಂಟ್‌ಗಳು ಕೆಲ ತಿಂಗಳ ಹಿಂದೆ ಕೆಟ್ಟಿದ್ದು, ಹನಿ ನೀರಿಗೂ ತತ್ವಾರ ಉಂಟಾಗಿದೆ. ಗ್ರಾಮಸ್ಥರು ಕಿಲೋಮೀಟರ್ ಗಟ್ಟಲೆ ಬೇರೆಡೆ ಹೋಗಿ ನೀರು ತರುವ ಪರಿಸ್ಥಿತಿ ಎದುರಾಗಿದೆ ಎಂದು ಜನ ದೂರಿದ್ದಾರೆ.

    ಕರೇಕಲ್ ಗೊಲ್ಲರಹಟ್ಟಿಯ ಆರ್‌ಒ ಪ್ಲಾಂಟ್‌ನಲ್ಲಿ ಹಣ ಹಾಕಿದರೂ ನೀರಿನ ಕ್ಯಾನ್‌ಗಳು ತುಂಬುತ್ತಿಲ್ಲ. ಆದರೆ, ನೀರು ವ್ಯರ್ಥವಾಗಿ ಹೊರ ಹೋಗುತ್ತಿದೆ. ದೊಡ್ಡಗೊಲ್ಲರಹಟ್ಟಿಯ ಆರ್‌ಒ ಪ್ಲಾಂಟ್ ಕೂಡ ಕೆಟ್ಟು ಹೋಗಿದೆ.

    ಸಮಸ್ಯೆ ಪರಿಹಾರದ ಕುರಿತು ಕ್ರಮ ಕೈಗೊಳ್ಳದಿದ್ದರೆ ತಾಲೂಕು ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರಾದ ಲೋಕೇಶ, ಪಾಲಾಕ್ಷ, ಕರಿಯಣ್ಣ, ವೇಣುಗೋಪಾಲ, ಕೃಷ್ಣಪ್ಪ, ಸಿದ್ದೇಶ, ಭದ್ರಣ್ಣ, ಅರುಣ್, ಅಜ್ಜಯ್ಯ, ಚಂದ್ರಣ್ಣ, ಮಲ್ಲಿಕಾರ್ಜುನ, ಸೋಮಣ್ಣ, ರಾಮಣ್ಣ, ಲಕ್ಷ್ಮೀದೇವಿ, ಸುಜಾತಾ ತಿಳಿಸಿದ್ದಾರೆ.

    ಗ್ರಾಪಂ ಸದಸ್ಯ ಮಿಲ್ಟ್ರಿ ಸಿದ್ದೇಶಣ್ಣ ಹೇಳಿಕೆ: ಜಯಣ್ಣನಗರದ ಆರ್‌ಒ ಪ್ಲಾಂಟ್ ಕಳೆದ ಒಂದು ತಿಂಗಳಿಂದ ಕೆಟ್ಟು ಹೋಗಿದ್ದು, ನೀರಿನ ಸಮಸ್ಯೆ ಹೆಚ್ಚಿದೆ. ಹಲವು ಬಾರಿ ಗ್ರಾಮೀಣ ನೀರು ಮತ್ತು ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಪಿಡಿಒ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

    ಗ್ರಾಮೀಣ ಕುಡಿವ ನೀರು ಮತ್ತು ಸರಬರಾಜು ಇಲಾಖೆ ಎಇಇ ಕಾವ್ಯಾ ಹೇಳಿಕೆ: ಪರಶುರಾಮಪುರ ಗ್ರಾಪಂ ವ್ಯಾಪ್ತಿಯಲ್ಲಿರುವ ಆರ್‌ಒ ಪ್ಲಾಂಟ್ಸ್‌ಗಳ ಸ್ಥಿತಿಗತಿ ಕುರಿತು ಪಿಡಿಒ ಅವರಿಂದ ಮಾಹಿತಿ ಪಡೆದಿದ್ದೇನೆ. ಕೂಡಲೇ ಆರ್‌ಒ ಪ್ಲಾಂಟ್‌ಗಳ ದುರಸ್ತಿಗೊಳಿಸಿ ಶುದ್ಧ ನೀರು ಪೂರೈಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts