More

    ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

    ಪರಶುರಾಮಪುರ: ಸತತ ಬರದಿಂದ ಕಂಗಾಲಾಗಿದ್ದ ರೈತರು ಇದೀಗ ಕರೊನಾ ಸೃಷ್ಟಿಸಿದ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

    ಸಮೀಪದ ಹುಲಿಕುಂಟೆ ಗ್ರಾಮದ ಎಂ.ಜಯಣ್ಣ ಎಂಬ ರೈತ ಮೂರು ಎಕರೆಯಲ್ಲಿ ಕರಬೂಜ ಬೆಳೆದಿದ್ದು, ಫಸಲಿಗೆ ಬಂದು ಹಣ್ಣು ಮಾರಾಟವಾಗದೇ ಜಮೀನಿನಲ್ಲಿ ಕೊಳೆಯುತ್ತಿದೆ.

    ಮೂರು ಲಕ್ಷ ರೂ. ವೆಚ್ಚ ಮಾಡಿ ಬಿತ್ತನೆ ಮಾಡಲಾಗಿತ್ತು. 60 ದಿನಕ್ಕೆ ಹಣ್ಣು ಕಟಾವಿಗೆ ಬಂದಿದೆ. ಯುಗಾದಿ ಪೂರ್ಣಗೊಳಿಸಿ ಕಟಾವು ಮಾಡಬೇಕು ಎಂಬ ಉದ್ದೇಶವಿತ್ತು. ಆದರೆ ಲಾಕ್‌ಡೌನ್‌ನಿಂದ 40 ಟನ್ ಹಣ್ಣು ಜಮೀನಿನಲ್ಲಿ ಇದೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.

    ಸಾಲ ಮಾಡಿ ಬೆಳೆ ನಾಟಿ ಮಾಡಿದ್ದೆವು. 6ರಿಂದ 7 ಲಕ್ಷ ರೂ. ಆದಾಯ ಬರವು ನಿರೀಕ್ಷೆ ಇತ್ತು. ಕರೊನಾ ವೈರಸ್ ನಿಂದಾಗಿ ಬರಸಿಡಿಲು ಬಡಿದಂತಾಗಿದೆ.

    ಎರಡು ದಿನದ ಹಿಂದೆಯಷ್ಟೆ ಸರ್ಕಾರ ಹಣ್ಣು ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ, ನಾವು ಬೆಳೆದ ಹಣ್ಣು ಅವಧಿ ಮೀರಿ 75 ದಿನಗಳಾವೆ. ದೂರದ ಮಾರುಕಟ್ಟೆಗೆ ಹೋಗುವ ಹೊತ್ತಿಗೆ ಕೊಳೆತು ಹೋಗುತ್ತವೆ, ಏನು ಮಾಡಬೇಕು ಎಂಬುದು ತಿಳಿಯದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

    ಇದೇ ಗ್ರಾಮದ ಮತ್ತೊಬ್ಬ ರೈತ ನಾಗಣ್ಣ ಮೂರು ಎಕರೆ ಜಮೀನಲ್ಲಿ 3.25 ಲಕ್ಷ ರೂ. ವೆಚ್ಚ ಮಾಡಿ ಬೆಳೆದಿದ್ದ ಕಲ್ಲಂಗಡಿ ಹಣ್ಣು ಜಮೀನಿನಲ್ಲಿ ಕೊಳೆಯುತ್ತಿದೆ. ಎರಡು ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೊ ಹಣ್ಣು ಕುರಿಗಳಿಗೆ ಹಾಕಲಾಗಿದೆ.

    ಚಳ್ಳಕೆರೆ ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕ ಆರ್.ವಿರೂಪಾಕ್ಷಪ್ಪ ಹೇಳಿಕೆ: ರೈತರು ಬೆಳೆದ ತೋಟಗಾರಿಕೆ ಬೆಳೆಗಳ ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ರೈತರು ಹಣ್ಣು ಮತ್ತು ತರಕಾರಿಗಳನ್ನು ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ಸಾಗಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts