More

    ತಾಯಿ-ಶಿಶು ಮರಣ ತಡೆ ಸರ್ಕಾರದ ಉದ್ದೇಶ

    ಪರಶುರಾಮಪುರ: ತಾಯಿ ಮತ್ತು ಶಿಶು ಮರಣ ತಪ್ಪಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವುದು ಸರ್ಕಾರದ ಮುಖ್ಯ ಆಶಯವಾಗಿದೆ ಎಂದು ಟಿ.ಎನ್. ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಓ. ಬೈಲಪ್ಪ ತಿಳಿಸಿದರು.

    ಟಿ.ಎನ್. ಕೋಟೆ ಅಂಗನವಾಡಿ ‘ಎ’ ಕೇಂದ್ರದಲ್ಲಿ ಶನಿವಾರ ಶಿಶು ಅಭಿವೃದ್ಧಿ, ಪಂಚಾಯತ್‌ರಾಜ್ ಇಲಾಖೆ, ಸ್ಥಳೀಯ ಆಡಳಿತದಿಂದ ಆಯೋಜಿಸಿದ್ದ ಆರೋಗ್ಯವಂತ ಶಿಶು ಮತ್ತು ಮಕ್ಕಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

    ಅಂಗನವಾಡಿ, ಆಶಾ ಕಾರ್ಯಕರ್ತೆಯರ ಪರಿಶ್ರಮದಿಂದ ಗ್ರಾಮೀಣ ಪ್ರದೇಶದ ಗರ್ಭಿಣಿ, ಬಾಣಂತಿಯರಲ್ಲಿ ಆರೋಗ್ಯ ಜಾಗೃತಿ ಮೂಡಿದ್ದರಿಂದಾಗಿ ತಾಯಿ-ಶಿಶು ಮರಣ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ ಎಂದರು.

    ವಿವಿಧ ಅಂಗನವಾಡಿ ವ್ಯಾಪ್ತಿಯ ಆರೋಗ್ಯವಂತ ಶಿಶುಗಳನ್ನು ಪ್ರದರ್ಶಿಸಲಾಯಿತು. ಇದೇ ವೇಳೆ ಸೊಪ್ಪು, ತರಕಾರಿ, ಹಣ್ಣು, ಬೆಲ್ಲ, ದ್ವಿದಳ ಮತ್ತು ಏಕದಳ ಧಾನ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

    ಆರೋಗ್ಯ ನಿರೀಕ್ಷಕ ಕೋಟೆ ಚಕ್ರವರ್ತಿ, ಗ್ರಾಪಂ ಸದಸ್ಯ ಶಿವಣ್ಣ, ಆಶಾ-ಆರೋಗ್ಯ ಕಾರ್ಯಕರ್ತರಾದ ಕವಿತಾ, ನಿಂಗಮ್ಮ, ಲಕ್ಷ್ಮಿ, ಜ್ಯೋತಿ, ಕವಿತಾ, ರಾಧಾ, ರಂಗಮ್ಮ, ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ತಿಪ್ಪೇಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts