More

    ರೇಷ್ಮೆ ಕೃಷಿಯಿಂದ ಅಧಿಕ ಲಾಭ

    ಪರಶುರಾಮಪುರ: ರೈತರು ಕೃಷಿ ಚಟುವಟಿಕೆ ಜತೆಗೆ ರೇಷ್ಮೆ ಕೃಷಿ ಕೈಗೊಳ್ಳುವುದರಿಂದ ಆರ್ಥಿಕ ಪ್ರಗತಿ ಸಾಧಿಸಬಹುದು ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣ ತಿಳಿಸಿದರು.

    ರೇಷ್ಮೆ ಇಲಾಖೆ ಹಾಗೂ ಸ್ಥಳೀಯ ಆಡಳಿತದಿಂದ ದೊಡ್ಡಬೀರನಹಳ್ಳಿಯಲ್ಲಿ ಸೋಮವಾರ ಆಯೋಜಿಸಿದ್ದ ರೇಷ್ಮೆ ಬೆಳೆ ಕ್ಷೇತ್ರೋತ್ಸವ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಪಂ ವತಿಯಿಂದ ಹೊಸದಾಗಿ ರೇಷ್ಮೆ ನಾಟಿ ಮಾಡುವ ಎಸ್ಸಿ, ಎಸ್ಟಿ ಸಮುದಾಯಕ್ಕೆ 45 ಸಾವಿರ ರೂ., ಇತರ ವರ್ಗಕ್ಕೆ 37.5 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

    ತೊಳಹುಣಸೆ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಹರಿಕೃಷ್ಣ, ಬೆಳೆಗೆ ತಗುಲುವ ರೋಗ, ತೋಟ ನಿರ್ವಹಣೆ, ಹುಳು ಸಾಕಣೆ ವಿಧಾನ, ಹುಳುಗಳಿಗೆ ತಗುಲುವ ಸೋಂಕು ಕುರಿತು ಪ್ರಾತ್ಯಕ್ಷಿಕೆ ನೀಡಿದರು.

    ಹೊಳಲ್ಕೆರೆ ಹಾಗೂ ಚಳ್ಳಕೆರೆ ರೇಷ್ಮೆ ಸಹಾಯಕ ನಿರ್ದೇಶಕ ಬಿ.ರಾಜಗೋಪಾಲ, ಕೆಂಚೋಜಿರಾವ್, ರೇಷ್ಮೆ ಇಲಾಖೆ ವಿವಿಧ ಸೌಲಭ್ಯಗಳ ಮಾಹಿತಿ ನೀಡಿದರು. ಹರಿಕೃಷ್ಣ, ಜೆ.ವಾಸಂತಿ ಇವರು ರೈತರಿಗೆ ತಾಂತ್ರಿಕ ಮಾಹಿತಿ ನೀಡಿದರು. ರೇಷ್ಮೆ ಬೆಳೆಗಾರರ ಜತೆ ಕೃಷಿ ತಂತ್ರಜ್ಞರು ಸಂವಾದ ನಡೆಸಿದರು.

    ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಎಲ್.ಸುರೇಶ್, ದೊಡ್ಡಚೆಲ್ಲೂರು, ಟಿ.ಎನ್.ಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚಾಗಿ ರೇಷ್ಮೆ ಬೆಳೆಯಲಾಗುತ್ತಿದೆ. ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಅಗತ್ಯ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕು ಎಂದರು.

    ಪ್ರಗತಿಪರ ರೈತ ಪೂಜಾರಿ ನಿಂಗಪ್ಪ, ಗ್ರಾಪಂ ಉಪಾಧ್ಯಕ್ಷೆ ಸಾಕಮ್ಮ, ತಾಪಂ ಸದಸ್ಯ ಕರಡಪ್ಪ, ತಾಂತ್ರಿಕ ಸೇವಾ ಕೇಂದ್ರದ ವಿಸ್ತರಣಾಧಿಕಾರಿ ವಿ.ಎಸ್.ಪರಮೇಶ್ವರಪ್ಪ, ವಲಯಾಧಿಕಾರಿ ನಾಗರಾಜು, ರೈತರಾದ ಧನಂಜಯ, ಪ್ರಕಾಶ, ಹೊನ್ನೇಶಪ್ಪ, ನಾಗರಾಜು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts