More

    ಆಂಧ್ರ ಗಡಿಯ ಐದು ಕಡೆ ಚೆಕ್‌ಪೋಸ್ಟ್

    ಪರಶುರಾಮಪುರ: ಕರೊನಾ ವೈರಸ್ ನಿಯಂತ್ರಣಕ್ಕಾಗಿ ಹೋಬಳಿಯ ಐದು ಕಡೆ ಚೆಕ್‌ಪೋಸ್ಟ್ ತೆರೆದು ಹೊರ ರಾಜ್ಯ, ದೇಶದಿಂದ ಬಂದು ಹೋಗುವವರ ಮೇಲೆ ನಿಗಾ ವಹಿಸಿದ್ದು, ಪ್ರಯಾಣ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಟಿ.ಎನ್.ಕೋಟೆ ತಾಪಂ ಸದಸ್ಯ ಕರಡಪ್ಪ ತಿಳಿಸಿದರು.

    ಹಿರಿಯೂರು-ಚಳ್ಳಕೆರೆ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿ ಬುಧವಾರ ಆರಂಭಿಸಿದ್ದ ಚೆಕ್‌ಪೋಸ್ಟ್ ಬಳಿ ಏರ್ಪಡಿಸಿದ್ದ ಕರೊನಾ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪರಶುರಾಮಪುರ ಹೋಬಳಿಯ ಪುಟ್ಲೋರಹಳ್ಳಿ, ದೊಡ್ಡಚೆಲ್ಲೂರು, ಟಿ.ಎನ್.ಕೋಟೆ, ಪಾತಪ್ಪನಗುಡಿ ಹಾಗೂ ನಾಗಪ್ಪನಹಳ್ಳಿಗೇಟ್ ಈ ಐದು ಸ್ಥಳದಲ್ಲಿ ಚೆಕ್‌ಪೋಸ್ಟ್ ತೆರೆದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಪೊಲೀಸ್, ಗೃಹರಕ್ಷಕ, ಗ್ರಾಪಂ, ಆರೋಗ್ಯ ಇಲಾಖೆ ಸಿಬ್ಬಂದಿ, ಕೆಲ ದಿನಗೂಲಿ ನೌಕರರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

    ಗ್ರಾಪಂ ಅಧ್ಯಕ್ಷ ಓ.ಬೈಲಪ್ಪ, ತಾಪಂ ಸದಸ್ಯ ಕರಡಪ್ಪ, ಪೇದೆಗಳಾದ ತಿಪ್ಪೇಸ್ವಾಮಿ, ಶ್ರೀನಿವಾಸ, ಕಾರ್ಯದರ್ಶಿ ಸಿ.ಈರಣ್ಣ, ಗ್ರಾಮ ಸಹಾಯಕರಾದ ಚಿಕ್ಕೇಗೌಡ, ನಾಗರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts