More

    ಇಂದು 2ನೇ ಹಂತದ ವಿತರಣೆಗೆ ಚಾಲನೆ

    ಪರಶುರಾಮಪುರ: ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಸೋಮವಾರದಿಂದ 2ನೇ ಹಂತದ ವಿತರಣೆಗೆ ಚಾಲನೆ ನೀಡಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿ ಎನ್.ಗಿರೀಶ ತಿಳಿಸಿದರು.

    ಗ್ರಾಮದ ಪಾವಗಡ ರಸ್ತೆಯ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಬಿತ್ತನೆ ಬೀಜ ವಿತರಣೆ, ಟೋಕನ್, ಶೇಂಗಾ ಕಾಯಿಯ ವಿತರಣೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿ, ಶೇಂಗಾ, ಮೆಕ್ಕೆಜೋಳ ಹಾಗೂ ತೊಗರಿ ಸೇರಿ ಅಗತ್ಯ ಲಘುಪೋಷಕಾಂಶಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ ಎಂದರು.

    ಜೂ.15-ಪರಶುರಾಮಪುರ, ಪಗಡಲಬಂಡೆ, ಚೌಳೂರು ರೈತರಿಗೆ, 17-ಟಿ.ಎನ್.ಕೋಟೆ, ಸಿದ್ದೇಶ್ವರನ ದುರ್ಗ, ಪಿ.ಮಹದೇವಪುರ, ದೊಡ್ಡಚೆಲ್ಲೂರು, ಜೂ.18ರಂದು ಬೆಳಗೆರೆ, ಚನ್ನಮ್ಮನಾಗತಿಹಳ್ಳಿ ಹಾಗೂ ಜಾಜೂರು ಗ್ರಾಪಂ ವ್ಯಾಪ್ತಿಯ ರೈತರಿಗೆ ಪರವಾನಗಿ ವಿತರಿಸಲಾಗುವುದು ಎಂದು ತಿಳಿಸಿದರು.

    ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಮಾತನಾಡಿ, ಕರೊನಾ ಭೀತಿ ಇರುವ ಹಿನ್ನೆಲೆಯಲ್ಲಿ ಅತ್ಯಂತ ಜಾಗ್ರತೆ ವಹಿಸಿ ಬಿತ್ತನೆ ಬೀಜ ಪಡೆದುಕೊಳ್ಳಬೇಕು. ದೈಹಿಕ ಅಂತರ, ಮಾಸ್ಕ್ ಕಡ್ಡಾಯ ಇರಲಿ ಎಂದು ಸಲಹೆ ನೀಡಿದರು.

    ಕೃಷಿ ಅಧಿಕಾರಿಗಳಾದ ಜೀವನ್, ಆತ್ಮಯೋಜನೆಯ ಪ್ರತಾಪರೆಡ್ಡಿ, ಕೃಷಿಕರಾದ ತಿಮ್ಮಣ್ಣ, ಸತ್ಯನಾರಾಯಣ, ಲಕ್ಷ್ಮಣ, ಮಹಾಲಿಂಗಪ್ಪ, ನಾಗಭೂಷಣ, ಜಯಣ್ಣ, ರುದ್ರಣ್ಣ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts