More

    ಕಾಂಗ್ರೆಸ್​ನಲ್ಲಿ ವಿಲೀನವಾದ ಜನ್ ಅಧಿಕಾರ್ ಪಕ್ಷ!

    ನವದೆಹಲಿ: ಲೋಕಸಭೆ ಚುನಾವಣೆಗೆ ಒಂದು ತಿಂಗಳ ಮೊದಲು, ಪಪ್ಪುಯಾದವ್ ಬುಧವಾರ ತಮ್ಮ ಜನ್ ಅಧಿಕಾರ್ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದ್ದಾರೆ.

    ಇದನ್ನೂ ಓದಿ: ‘ಲೈಂಗಿಕ ದೃಷ್ಟಿ ಬದಲಿಸಲು ಚುಚ್ಚುಮದ್ದು ಕೊಟ್ಟು ಚಿತ್ರಹಿಂಸೆ’: ಮತ್ತೆ ನ್ಯಾಯಾಲಯಕ್ಕೆ ಸಲಿಂಗ ಪಾಲುದಾರರು…

    ಅವರು ಮಂಗಳವಾರ ಸಂಜೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಪಕ್ಷದ ನಾಯಕ ತೇಜಸ್ವಿ ಯಾದವ್ ಅವರನ್ನು ಭೇಟಿ ಮಾಡಿದ್ದರು. ಲಾಲು ಪ್ರಸಾದ್ ಅವರಿಗೆ ಯಾವುದೇ ರಾಜಕೀಯ ಸಂಬಂಧವಿಲ್ಲದಿದ್ದರೂ, ನಾವೆಲ್ಲರೂ ವಿಚಾರ ಹಂಚಿಕೊಳ್ಳಲು ಭೇಟಿಯಾಗಿದ್ದೇವೆ. ಸೀಮಾಂಚಲ್ ಮತ್ತು ಮಿಥಿಲಾಂಚಲ್ ನಲ್ಲಿ ಬಿಜೆಪಿಯನ್ನು ಕಟ್ಟಿಹಾಕುವುದು ನಮ್ಮ ಉದ್ದೇಶಚಾಗಿದೆ ಎಂದರು.

    ತೇಜಸ್ವಿ ಯಾದವ್ ಅವರು ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿ ರಾಹುಲ್ ಗಾಂಧಿಯವರ ಹೃದಯ ಗೆದ್ದಿದ್ದಾರೆ. ಈ ಚುನಾವಣೆ ಮಾತ್ರವಲ್ಲದೆ ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ನಾವು ಗೆಲ್ಲುತ್ತೇವೆ. ಬಿಜೆಪಿಯನ್ನು ಸೋಲಿಸುವುದು ಮತ್ತು ದುರ್ಬಲ ವರ್ಗಗಳ ಅಭಿವೃದ್ಧಿ ನಮ್ಮ ಧ್ಯೇಯವಾಗಿದೆ ಎಂದು ಪಪ್ಪುಯಾದವ್ ಹೇಳಿದರು.

    ಕಾಂಗ್ರೆಸ್ ನಾಯಕತ್ವದೊಂದಿಗೆ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಜನರ ಮನ ಗೆದ್ದವರು ಈ ದೇಶದ ಪ್ರಧಾನಿಯಾಗುತ್ತಾರೆ ಎಂದರು.

    ‘ವಿಚಾರಣೆಯಿಲ್ಲದೆ ಆರೋಪಿಗಳನ್ನು ಅನಿರ್ಧಿಷ್ಟಾವಧಿ ಜೈಲಿನಲ್ಲಿರಿಸುವುದು ಅಸಾಧ್ಯ’: ಸುಪ್ರೀಂಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts