More

    ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಗೆಲುವಿನತ್ತ ಟೀಮ್ ಇಂಡಿಯಾ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು
    ಪ್ರವಾಸಿ ಶ್ರೀಲಂಕಾ ತಂಡದ ಎದುರು ಸವಾರಿ ಮುಂದುವರಿಸಿದ ಭಾರತ ತಂಡ ಎರಡನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಬಿಗಿಹಿಡಿತ ಸಾಧಿಸಿದೆ. ಪ್ರವಾಸಿ ತಂಡಕ್ಕೆ 447 ರನ್ ಗೆಲುವಿನ ಗುರಿ ನೀಡಿರುವ ರೋಹಿತ್ ಶರ್ಮ ಪಡೆ ಎರಡನೇ ಇನಿಂಗ್ಸ್‌ನಲ್ಲೂ ಆರಂಭಿಕ ಆಘಾತ ನೀಡಿದೆ. ಪಂದ್ಯವನ್ನು ಮೂರೇ ದಿನಗಳಲ್ಲಿ ಜಯಿಸಲು ಭಾರತಕ್ಕೆ 9 ವಿಕೆಟ್‌ಗಳಷ್ಟೇ ಬಾಕಿ ಉಳಿದಿವೆ. ಮತ್ತೊಂದೆಡೆ, ಪಿಂಕ್‌ಬಾಲ್ ಟೆಸ್ಟ್‌ನಲ್ಲಿ ಸತತ 2ನೇ ದಿನವೂ ಬೌಲರ್‌ಗಳು ಪಾರಮ್ಯ ಸಾಧಿಸಿದರು. ಭಾನುವಾರದ ಆಟದಲ್ಲಿ ಉಭಯ ತಂಡಗಳಿಂದ 14 ವಿಕೆಟ್‌ಗಳು ಪತನ ಕಂಡವು.

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 6 ವಿಕೆಟ್‌ಗೆ 86 ರನ್‌ಗಳಿಂದ ದಿನದಾಟ ಆರಂಭಿಸಿದ ಲಂಕಾ ತಂಡ, ಜಸ್‌ಪ್ರೀತ್ ಬುಮ್ರಾ (24ಕ್ಕೆ 5) ಹಾಗೂ ಆರ್.ಅಶ್ವಿನ್ (30ಕ್ಕೆ 2) ಮಾರಕ ದಾಳಿಗೆ ನಲುಗಿ 108 ರನ್‌ಗಳಿಗೆ ಸರ್ವಪತನ ಕಂಡಿತು. 143 ರನ್ ಮುನ್ನಡೆಯೊಂದಿಗೆ ಎರಡನೇ ಸರದಿ ಆರಂಭಿಸಿದ ಭಾರತ ತಂಡ, ಶ್ರೇಯಸ್ ಅಯ್ಯರ್ (67ರನ್, 87 ಎಸೆತ, 9 ಬೌಂಡರಿ) ಹಾಗೂ ರಿಷಭ್ ಪಂತ್ (50ರನ್, 31 ಎಸೆತ, 7 ಬೌಂಡರಿ, 2 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಲವಾಗಿ 9 ವಿಕೆಟ್‌ಗೆ 303 ರನ್‌ಗಳಿಸಿ ಡಿಕ್ಲೇರ್ ಘೋಷಿಸಿತು.

    ಲಂಕಾ ಪರ ಎಡಗೈ ಸ್ಪಿನ್ನರ್‌ಗಳಾದ ಪ್ರವೀಣ್ ಜಯವಿಕ್ರಮ (78ಕ್ಕೆ 4) ಹಾಗೂ ಲಸಿತ್ ಎಂಬುಲ್ಡೆನಿಯ (87ಕ್ಕೆ 3) ಗಮನಸೆಳೆದರು. ಶ್ರೀಲಂಕಾ ದಿನದಂತ್ಯಕ್ಕೆ ಎರಡನೇ ಇನಿಂಗ್ಸ್ 1 ವಿಕೆಟ್‌ಗೆ 28 ರನ್ ಪೇರಿಸಿದ್ದು, ಜಯ ದಾಖಲಿಸಲು ಇನ್ನೂ 419 ರನ್ ಪೇರಿಸಬೇಕಿದೆ. ಭಾರತ ಮೊದಲ ಇನಿಂಗ್ಸ್‌ನಲ್ಲಿ 252 ರನ್ ಗಳಿಸಿತ್ತು.

    ಐಪಿಎಲ್ ಆರಂಭಕ್ಕೂ ಮೊದಲೇ ಹೊಸ ಮೈಲಿಗಲ್ಲು ನೆಟ್ಟ ಚೆನ್ನೈ ಸೂಪರ್‌ಕಿಂಗ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts