More

    ಔಪಚಾರಿಕವಾಗಿ ಏಕಾದಶಿ ಆಚರಣೆಗೆ ಕೋರಿಕೆ

    ಉಮದಿ: ಕರೊನಾ ಭೀತಿ ಹಿನ್ನೆಲೆ ಈ ಬಾರಿ ಪಂಢರಪುರದಲ್ಲಿ ಕಾರ್ತಿಕ (ಪ್ರಭೋದಿನಿ) ಏಕಾದಶಿಯನ್ನು ಔಪಚಾರಿಕವಾಗಿ ಆಚರಿಸಲು ಅನುಮತಿ ನೀಡುವಂತೆ ಕೋರಿ ಸೊಲ್ಲಾಪುರ ಜಿಲ್ಲಾಧಿಕಾರಿ ಮಿಲಿಂದ್ ಶಂಬರಕರ್ ಹಾಗೂ ಪೊಲೀಸ್ ಅಧೀಕ್ಷಕ ತೇಜಶ್ವಿ ಸಾತಪೋತೆ ಮುಖ್ಯಮಂತ್ರಿ ಉದ್ಭವ ಠಾಕರೆ ಅವರಿಗೆ ಪತ್ರ ಬರೆದಿದ್ದಾರೆ.
    ಎಂಟು ತಿಂಗಳಿಂದ ಪಂಢರಪುರ ದೇವಸ್ಥಾನ ಬಂದ್ ಇದ್ದುದರಿಂದ ವೈಷ್ಣವ ಭಕ್ತರು ವಿಠ್ಠಲ-ರುಕ್ಮಿಣಿ ದರ್ಶನಕ್ಕೆ ಸಾಗರೋಪಾದಿಯಲ್ಲಿ ಬರುತ್ತಾರೆ. ಜನದಟ್ಟಣೆಯಿಂದಾಗಿ ಕರೊನಾ ಹರಡಬಹುದು. ಸಿಬ್ಬಂದಿ ಕೊರತೆಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ವಿಲವಾಗುವ ಭೀತಿಯಿಂದ ಆಷಾಢ ಏಕಾದಶಿಯಂತೆ ಕಾರ್ತಿಕ ಏಕಾದಶಿಯನ್ನು ಕೇವಲ ಔಪಚಾರಿಕ ಆಚರಣೆಗೆ ಅನುಮತಿ ನೀಡಬೇಕೆಂದು ಅವರು ಕೋರಿದ್ದಾರೆ.

    ಈ ಬಾರಿ ಕಾರ್ತಿಕ ಏಕಾದಶಿ ವಾರಿಯನ್ನು ಎಲ್ಲ ಧಾರ್ಮಿಕ ಪದ್ಧತಿಯಂತೆ ನೆರವೇರಿಸಲಾಗುವುದು. ಪಾದಯಾತ್ರೆ (ದಿಂಡಿ) ಮೂಲಕ ಭಕ್ತರು ಪಂಢರಪುರಕ್ಕೆ ಬರಬೇಡಿ. ತಮ್ಮ ತಮ್ಮ ಗ್ರಾಮಗಳಲ್ಲೇ ಏಕಾದಶಿ ಆಚರಿಸಿ. ನಂತರದ ದಿನಗಳಲ್ಲಿ ಹಂತ ಹಂತವಾಗಿ ಪಂಢರಪುರಕ್ಕೆ ಆಗಮಿಸಿ ವಿಠ್ಠಲನ ದರ್ಶನ ಪಡೆಯಬೇಕೆಂದು ಪ್ರಾಂತಾಧಿಕಾರಿ ಸಚಿನ್ ಠೋಲೆ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts