More

    ಈ ಊರಲ್ಲಿ ಗ್ರಾಮ ಪಂಚಾಯಿತಿ ಸದಸ್ಯನೇ ಕಿಡ್ನ್ಯಾಪ್​!; ಮತ್ತೊಬ್ಬ ಸದಸ್ಯನ ವಿರುದ್ಧವೇ ಅಪಹರಣ ಆರೋಪ…


    ವಿಜಯಪುರ (ಆಲಮೇಲ): ಗ್ರಾಮ ಪಂಚಾಯಿತಿ ಚುನಾವಣೆ ನಡೆದು, ಮೀಸಲಾತಿ ಪಟ್ಟಿ ಕೂಡ ಪ್ರಕಟವಾಗಿದೆ. ಏತನ್ಮಧ್ಯೆ ಈ ಚುನಾವಣೆಯಲ್ಲಿ ಗೆದ್ದಿರುವ ಗ್ರಾಮಪಂಚಾಯಿತಿ ಸದಸ್ಯರೊಬ್ಬರು ಅಪಹರಣಕ್ಕೀಡಾಗಿದ್ದಾರೆ. ತಂದೆ ಅಪಹರಣಕ್ಕೀಡಾಗಿದ್ದಾರೆ ಎಂದು ಅವರ ಪುತ್ರ ಪೊಲೀಸರಿಗೆ ದೂರು ನೀಡಿದ್ದಾರೆ.

    ಅಪಹರಣಕ್ಕೆ ಒಳಗಾಗಿರುವುದು ಆಲಮೇಲ ತಾಲೂಕಿನ ರಾಮನಳ್ಳಿ ವ್ಯಾಪ್ತಿಗೆ ಬರುವ ನಾಗರಹಳ್ಳಿ ಗ್ರಾ.ಪಂ. ಸದಸ್ಯ ಶರಣಪ್ಪ ದೊಡ್ಡಮನಿ. ಈ ಕುರಿತು ಅವರ ಪುತ್ರ ಭಾಗಪ್ಪ ದೊಡ್ಡಮನಿ ಈ ಕುರಿತು ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವಿಶೇಷವೆಂದರೆ ಅಪಹರಣ ಆರೋಪವನ್ನು ಎದುರಿಸುತ್ತಿರುವುದು ಕೂಡ ಗ್ರಾಮ ಪಂಚಾಯತ್ ಸದಸ್ಯನೇ. ವಿಭೂತಿಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮಹಾಂತೇಶ ಮಾಡ್ಯಾಳ ವಿರುದ್ಧ ಅಪಹರಣ ದೂರು ದಾಖಲಾಗಿದೆ.

    ಇದನ್ನೂ ಓದಿ: ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

    ರಾಮನಳ್ಳಿ ಗ್ರಾಮ ಪಂಚಾಯತಿಗೆ ಒಟು 5 ಗ್ರಾಮಗಳು ಬರುತ್ತಿದ್ದು ಸುಮಾರು 14 ಜನ ಸದಸ್ಯರು ಇದ್ದಾರೆ. ಅದರಲ್ಲಿ ಬಹುಮತಕ್ಕೆ 8 ಸದಸ್ಯರ ಬಲ ಬೇಕಾಗಿದೆ. ರಾಮನಳ್ಳಿ 4, ನಾಗರಳ್ಳಿ 4, ಗುಡ್ಡಳ್ಳಿ 3, ವಿಭೂತಿಹಳ್ಳಿ 2 ಹಾಗೂ ತೋಂಟಾಪುರ 1 ಸದಸ್ಯರು ಆಯ್ಕೆ ಆಗಿದ್ದಾರೆ. ಈಗ ವಿಭೂತಿಹಳ್ಳಿ ಸದಸ್ಯ ಮಹಾಂತೇಶ ಮಾಡ್ಯಾಳ ಹಾಗೂ ನಾಗರಳ್ಳಿಯ 3 ಜನ ಸದಸ್ಯರ ನಡುವೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದ್ದು ನಾಗರಳ್ಳಿ ವಾರ್ಡ್ ನಂ.2 ಸದಸ್ಯ ಶರಣಪ್ಪ ದೊಡ್ಡಮನಿಯನ್ನು ಮಹಾಂತೇಶ ಮಾಡ್ಯಾಳ ಅಪಹರಿಸಿದ್ದಾನೆ ಎಂಬ ಆರೋಪ ಬಂದಿದೆ.

    ಘಟನೆ ವಿವರ: ನನ್ನ ತಂದೆಯನ್ನು ಮಹಾಂತೇಶ ಮಾಡ್ಯಾಳ ಮತ್ತಿತರರು ಜ.5ರಂದು ಮಧ್ಯರಾತ್ರಿ 1 ಗಂಟೆಗೆ ಅಪಹರಣ ಮಾಡಿಕೊಂಡು ಹೋಗಿದ್ದಾರೆ. ತಂದೆ ಮನೆ ಮುಂದೆ ಮಲಗಿದ್ದಾಗ ರಾತ್ರಿ ಇಬ್ಬರು ಕಾರಿನಲ್ಲಿ ಬಂದು ಎತ್ತಿಕೊಂಡು ಹೋದರು. ಆಗ ಅವರು ಚೀರಾಡಿದ್ದರಿಂದ ಎಚ್ಚರವಾಗಿ ನೋಡಿದ್ದ ಚಿಕ್ಕಮ್ಮ ನನಗೆ ಫೋನ್ ಮಾಡಿ ತಿಳಿಸಿದ್ದಾಳೆ. ಅಂದು ನಾನು ಡ್ರೈವರ್ ಕೆಲಸದಿಂದಾಗಿ ಪುಣೆಯಲ್ಲಿದ್ದು ಮರುದಿನ ಗ್ರಾಮಕ್ಕೆ ಬಂದು ವಿಚಾರಣೆ ಮಾಡಿದಾಗ ವಿವರವಾದ ವಿಷಯ ತಿಳಿಯಿತು ಎಂದು ಕಿಡ್ನ್ಯಾಪ್​ ಆಗಿರುವ ಗ್ರಾಪಂ ಸದಸ್ಯನ ಮಗ ಭಾಗಪ್ಪ ದೊಡ್ಡಮನಿ ದೂರು ನೀಡಿದ್ದಾನೆ.

    ನೆನಪಿರಲಿ, ಹುಡುಗರೂ ಸೇಫ್​ ಅಲ್ಲ… ಕೆಲಸದ ಆಮಿಷ ಒಡ್ಡಿ ಯುವಕನ ಮೇಲೆ ಗ್ಯಾಂಗ್​ರೇಪ್​!

     

    ನಿನ್ನನ್ನೇ ಪ್ರೀತಿಸೋದು ಅಂದೋಳು ಈಗ ಬೇರೆ ಮದ್ವೆಯಾಗಹೊರಟಿದ್ದಾಳೆ- ಸಾಯೋಣ ಎನಿಸ್ತಿದೆ…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts