More

    ಆಕಳಿಗೊಂದು ಗೂಟ, ಜಿಲ್ಲೆಗೊಂದು ಪಂಚಮಸಾಲಿ ಪೀಠ: 2030ರ ಒಳಗೆ 10 ಪೀಠಗಳ ಸ್ಥಾಪನೆ!

    ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದಲ್ಲಿ ಪಂಚಮಸಾಲಿ ‌ಮೂರನೇ ಪೀಠದ ಕಟ್ಟಡಕ್ಕೆ ಇಂದು ಭೂಮಿ ಪೂಜೆ ನಡೆಯಿತು. ಮೂರನೇ ಪೀಠದ ಪೀಠಾಧಿಪತಿ ಡಾ.ಮಹದೇವ ಶಿವಾಚಾರ್ಯ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು.

    ಪಂಚಮಸಾಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಗನಬಸವ ಸ್ವಾಮೀಜಿ, ಬೆಂಡವಾಡ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಸೇರಿದಂತೆ ಒಕ್ಕೂಟದ ಸ್ವಾಮೀಜಿಗಳು, ಸಚಿವ ಮುರುಗೇಶ್ ನಿರಾಣಿ ಅವರ ಸಹೋದರ ಸಂಗಮೇಶ್ ನಿರಾಣಿ, ಹರಿಹರ ‌ಪಂಚಮಸಾಲಿ ಪೀಠದ ಟ್ರಸ್ಟಿ ಬಸವರಾಜ ದಿಂಡೂರ ಭಾಗಿಯಾಗಿದ್ದರು. ನಂತರ ಮಾತನಾಡಿದ ಹರಿಹರ ‌ಪಂಚಮಸಾಲಿ ಪೀಠದ ಟ್ರಸ್ಟಿ ಬಸವರಾಜ ದಿಂಡೂರ, ರಾಜ್ಯದಲ್ಲಿ ಪಂಚಮಸಾಲಿ ಸಮಾಜದ ಹತ್ತು ಪೀಠಗಳು ಸ್ಥಾಪನೆ ಆಗುವ ಬಗ್ಗೆ ಮಾಹಿತಿ ನೀಡಿದರು.

    2030ರ ಸಂಕ್ರಾಂತಿ ವೇಳೆಗೆ ಹತ್ತು ಪೀಠಗಳು ಸ್ಥಾಪನೆ ಆಗಬಹುದು. ಸದ್ಯ ಶಿಕಾರಿಪುರ ತಾಲೂಕಿನ ಉಡತಡಿ ಗ್ರಾಮದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಪೀಠ ಸ್ಥಾಪನೆ ಆಗಲಿದೆ. ಆಕಳಿಗೊಂದು ಗೂಟ, ಜಿಲ್ಲೆಗೊಂದು ಪಂಚಮಸಾಲಿ ಪೀಠ ಆಗಬೇಕು. ದೊಡ್ಡ ಜಿಲ್ಲೆ ಇದ್ದರೆ ಎರಡು ಪೀಠಗಳು ಆದರೂ ತೊಂದರೆ ಇಲ್ಲ. ಪೀಠಗಳ ಸ್ಥಾಪನೆ ಮುಖ್ಯ ಉದ್ದೇಶ ಸಮಾಜದ ಯುವಜನರಿಗೆ ಧಾರ್ಮಿಕ ಸಂಸ್ಕಾರ, ಮಕ್ಕಳಲ್ಲಿ ಸ್ವಾಭಿಮಾನ, ವ್ಯಕ್ತಿತ್ವ ವಿಕಾಸ ಮಾಡುವುದು. ಆ ಮೂಲಕ ರಾಜ್ಯದಲ್ಲಿ ಇರುವ ಒಂದು ಕೋಟಿ ಪಂಚಮಸಾಲಿ ಸಮಾಜವನ್ನು ಒಗ್ಗಟ್ಟು ಮಾಡುವುದಾಗಿದೆ.

    ಸಮಾವೇಶವಾಗಿ ಮಾರ್ಪಟ್ಟ ಕಾಂಗ್ರೆಸ್ ಪಾದಯಾತ್ರೆ; ಈ ಹೋರಾಟದಿಂದ ಇತಿಹಾಸ ಸೃಷ್ಟಿ ಎಂದ ಸುರ್ಜೆವಾಲಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts