More

    ಡ್ರೋಣ್‌ ಮೂಲಕ ಬಂತು ಪಾನ್‌ಮಸಾಲಾ: ಪ್ರೇಮಿಗಳು ಫುಲ್‌ ಖುಷ್‌, ಹಂಚಿದವರು ಅಂದರ್‌!

    ಮಾರ್ಬಿ (ಗುಜರಾತ್‌): ಲಾಕ್‌ಡೌನ್‌ನಿಂದಾಗಿ ಅತ್ಯಂತ ಚಿಂತೆಗೀಡಾದವರ ಪೈಕಿ ವಿವಿಧ ವ್ಯಸನಗಳಿಗೆ ದಾಸರಾದವರ ಸಂಖ್ಯೆ ಬಹು ದೊಡ್ಡದಿದೆ.

    ಮದ್ಯಪಾನ, ಧೂಮಪಾನ, ಗುಟಕಾ, ಪಾನ್‌ಮಸಾಲಾ… ಹೀಗೆ ದಿನನಿತ್ಯವೂ ಅಗತ್ಯ ವಸ್ತುಗಳಂತೆ ಇವುಗಳನ್ನೂ ಸೇವಿಸುತ್ತಿದ್ದವರ ಸ್ಥಿತಿ ಚಿಂತಾಜನಕವಾಗಿದೆ. ಹೆಂಡ ಸಿಗದೇ ಕೆಲವರು ಆತ್ಮಹತ್ಯೆ ಮಾಡಿಕೊಂಡರೆ, ವೈನ್‌ಷಾಪ್‌ ಒಳಗೆ ನುಗ್ಗಿ ಹಣವನ್ನು ಬಿಟ್ಟು ಮದ್ಯಪ್ರೇಮಿಯೊಬ್ಬ ಬಾಟಲಿಯನ್ನಷ್ಟೇ ಕೊಂಡೊಯ್ದ ಘಟನೆ, ಮದ್ಯದಂಗಡಿಯ ಗೋಡೆ ಒಡೆದು ಇನ್ನೊಬ್ಬ ಸಿಕ್ಕಬಿದ್ದ ಘಟನೆ ಎಲ್ಲವೂ ನಡೆದು ಹೋಗಿದೆ.

    ಸಿಕ್ಕಬಿದ್ದರೂ ಪರವಾಗಿಲ್ಲ, ಒಂದು ಕೈ ನೋಡಿಯೇ ಬಿಡೋಣ ಎನ್ನುವವರಿಗೂ ಕಮ್ಮಿ ಇಲ್ಲ ಎನಿಸುತ್ತಿದೆ. ಅದಕ್ಕಾಗಿಯೇ ಹೊಸ ಹೊಸ ಪ್ಲ್ಯಾನ್‌ಗಳನ್ನು ಹುಡುಕತ್ತಲೇ ಇದ್ದಾರೆ. ಮನೆಯಲ್ಲಿ ಕೂತು ತಮ್ಮ ಕಾರ್ಯ ಪೂರೈಸಿಕೊಳ್ಳಲು ಖತರ್‌ನಾಕ್‌ ಯೋಚನೆಗಳನ್ನೂ ಮಾಡುತ್ತಿದ್ದಾರೋ ಎನ್ನುವಂಥ ಇನ್ನೊಂದು ಘಟನೆ ಗುಜರಾತ್‌ನ ಮೊರ್ಬಿಯಲ್ಲಿ ನಡೆದಿದೆ.

    ತುರ್ತು ಸಂದರ್ಭಗಳಲ್ಲಿ ಸಂತ್ರಸ್ತರಿಗೆ ವಿಮಾನ, ಡ್ರೋಣ್‌ ಮೂಲಕ ಆಹಾರ ಪೂರೈಕೆ ಮಾಡುವ ವಿಷಯ ಗೊತ್ತೇ ಇದೆ. ಆದರೆ ಇದನ್ನೇ ಉಪಯೋಗಿಸಿಕೊಂಡ ಇಬ್ಬರು ‘ಬುದ್ಧಿವಂತ’ರು ಪಾನ್‌ ಮಸಾಲಾವನ್ನು ಡ್ರೋಣ್‌ ಮೂಲಕ ವಿತರಿಸುವ ಕಾರ್ಯಕ್ಕೆ ಮುಂದಾಗಿ ಈಗ ಪೊಲೀಸರ ಅತಿಥಿಯಾಗಿದ್ದಾರೆ!

    ಲಾಕ್‌ಡೌನ್‌ ಸಮಯದಲ್ಲಿ ರಸ್ತೆಗಳಲ್ಲಿ ಯಾವುದೇ ವಾಹನ ಓಡಾಡಬಾರದು, ಆಕಾಶದಲ್ಲಿ ವಿಮಾನ ಓಡಾಡಬಾರದು ಎಂಬ ನಿರ್ಬಂಧವಿದೆ. ಆದರೆ ಡ್ರೋಣ್‌ ಓಡಾಡಬಾರದು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲವಲ್ಲ ಎಂದುಕೊಂಡೋ ಏನೋ ಇಂಥದ್ದೊಂದು ಸಾಹಸಕ್ಕೆ ಇವರು ಕೈಹಾಕಿದ್ದರು! ಡ್ರೋಣ್‌ ಮೂಲಕ ಪಾನ್‌ ಮಸಾಲಾವನ್ನು ಮನೆ ಬಾಗಿಲಿಗೆ ತಲುಪಿಸುವುದು ಇವರ ಗುರಿಯಾಗಿತ್ತು. ಅದನ್ನು ಕೆಲವೆಡೆ ವಿತರಿಸಿಯೂ ಆಯಿತು, ಪಾನ್‌ಮಸಾಲಾ ಪ್ರೇಮಿಗಳು ಅದನ್ನು ಪಡೆದೂ ಆಯಿತು. ಆದರೆ ಅವರ ಗ್ರಹಚಾರಕ್ಕೆ ಇದನ್ನು ವೀಡಿಯೋ ಮಾಡಿದ ಪುಣ್ಯಾತ್ಮನೊಬ್ಬ ಟಿಕ್‌ಟಾಕ್‌ ಮೂಲಕ ಅದನ್ನು ಹರಿಬಿಟ್ಟ. ಕೆಲವೇ ಕ್ಷಣಗಳಲ್ಲಿ ಇದು ಸಖತ್‌ ವೈರಲ್‌ ಕೂಡ ಆಗಿ ಹೋಯಿತು.

    ವೀಡಿಯೋ ನೋಡಿದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ, ಡ್ರೋಣ್‌ ವಶಕ್ಕೆ ಪಡೆದು, ಪಾನ್‌ ಮಸಾಲಾ ಹಂಚುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)

    ಭಾರತದ ಸೇನಾ ದಾಳಿಗೆ 15 ಪಾಕ್​ ಯೋಧರು, 8 ಭಯೋತ್ಪಾದಕರು ಫಿನಿಷ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts