More

    ಗೋಡ್ಸೆ ಕೊಂದವರು ಮುಖ್ಯವಾಹಿನಿಗೆ: ಸುಂದರೇಶ್ ಆತಂಕ

    ಶಿವಮೊಗ್ಗ: ಇಂದು ದೇಶ ಭಕ್ತರ ಹೆಸರಲ್ಲಿ ವಿಜೃಂಭಣೆಯ ಮೆರವಣಿಗೆ ಸಾಗಿದೆ. ಗಾಂಧೀಜಿ ಅವರನ್ನು ಕೊಂದವರು ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಗೋಡ್ಸೆ ಸಂತತಿ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಆತಂಕ ವ್ಯಕ್ತಪಡಿಸಿದರು.
    ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಕ್ವಿಟ್ ಇಂಡಿಯಾ ಚಳವಳಿ ನೆನಪು ಕಾರ್ಯಕ್ರಮದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಸ್ವಾತಂತ್ರೃದ ಚಳವಳಿಗೆ ಹೊಸ ರೂಪ ಹಾಗೂ ವೇಗ ಸಿಕ್ಕಿದ್ದು ಕ್ವಿಟ್ ಇಂಡಿಯಾ ಚಳವಳಿ ಮೂಲಕ. ಆದರೆ ಸ್ವಾತಂತ್ರೃ ಹೋರಾಟದಲ್ಲಿ ಭಾಗವಹಿಸದೇ ಇರುವವರು ಇಂದು ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    1942 ರ ಆ.8 ರಂದು ಗಾಂಧೀಜಿ ನೇತೃತ್ವದಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಮಾಡು ಇಲ್ಲವೇ ಮಡಿ ಎಂಬ ಘೋಷಣೆ ಕೂಗಲಾಯಿತು. ಗಾಂಧೀಜಿ ಸೇರಿದಂತೆ ಅನೇಕರ ಬಂಧನವಾಯಿತು. ಸ್ವಾತಂತ್ರೃಕ್ಕಾಗಿ ಕಾಂಗ್ರೆಸ್ ಹೋರಾಟ ಮಾಡಿದ್ದಕ್ಕೆ ಈ ಘಟನೆ ನಿದರ್ಶನವಾಗಿದೆ ಎಂದು ಹೇಳಿದರು.
    ಕಾಂಗ್ರೆಸ್ ಜಿಲ್ಲಾ ವಕ್ತಾರೆ ಜಿ.ಪಲ್ಲವಿ ಮಾತನಾಡಿ, ರಾಷ್ಟ್ರಧ್ವಜಕ್ಕೆ ಹಾಗೂ ಖಾದಿ ಸಂಸ್ಕೃತಿಯನ್ನು ಅವಮಾನಿಸುವ ಕೆಲಸ ಆರಂಭವಾಗಿದೆ. ಖಾದಿಯಿಂದ ಸಿದ್ಧಪಡಿಸಿದ ರಾಷ್ಟ್ರಧ್ವಜ ಹಾರಿಸಲಾಗುತ್ತಿತ್ತು. ಅದನ್ನು ಕೈ ಬಿಟ್ಟು ಪಾಲಿಸ್ಟರ್ ಬಟ್ಟೆಯ ಧ್ವಜ ಹಾರಿಸಲು ಬಿಜೆಪಿ ಸಂಹಿತೆಯನ್ನೇ ಬದಲಾಯಿಸಿದೆ. ಇದರಿಂದ ಖಾದಿ ವಸ್ತ್ರಕ್ಕೆ ಅಪಮಾನವಾಗಿದೆ ಎಂದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts