More

    ಸಂಪರ್ಕ ರಸ್ತೆ ಸಂಚಾರ ಅಪಾಯ

    ಪಡುಬಿದ್ರಿ: ಪಲಿಮಾರು ಹಾಗೂ ಪಡುಬಿದ್ರಿ ಗ್ರಾಮಗಳನ್ನು ಸಂಪರ್ಕಿಸುವ ಜಿಲ್ಲಾ ಪಂಚಾಯಿತಿ ಪ್ರಮುಖ ರಸ್ತೆ ಹೊಂಡಗುಂಡಿಗಳಿಂದ ತುಂಬಿ ಸಂಚಾರಕ್ಕೆ ಅಯೋಗ್ಯವಾಗಿ ಮಾರ್ಪಟ್ಟಿದೆ.
    ಪಡುಬಿದ್ರಿಯಿಂದ ಹೆಜಮಾಡಿ ಗಡಿ ಪ್ರದೇಶದ ಮೂಲಕ ಹಾದು ಪಲಿಮಾರು ಗ್ರಾಮ ಸಂಪರ್ಕಿಸುವ 5 ಕಿ.ಮೀ. ರಸ್ತೆಗೆ ಹಲವು ವರ್ಷಗಳ ಹಿಂದೆ ಡಾಂಬರು ಹಾಕಲಾಗಿತ್ತು. ಎರಡು ಬಸ್‌ಗಳು ಈ ರಸ್ತೆಯಲ್ಲಿ ಸಂಚರಿಸುತ್ತಿತ್ತು. ಹೊಂಡಗುಂಡಿ ಹಾಗೂ ಪ್ರಯಾಣಿಕರ ಕೊರತೆಯಿಂದ ಕಾಲಕ್ರಮೇಣ ಆ ಬಸ್ ಸಂಚಾರವೂ ಮೊಟಕುಗೊಂಡಿತು. ರಸ್ತೆ ಸಂಪೂರ್ಣ ಕೆಟ್ಟಿದ್ದು, ಜನ ಹಾಗೂ ವಾಹನಗಳು ಸಂಕಷ್ಟಪಡುವಂತಾಗಿದೆ.
    ರಸ್ತೆ ನಿರ್ಮಾಣ ಸಂದರ್ಭ ನಡ್ಸಾಲು ಕಂಪಿತೋಟ ಬಳಿ ತೋಡಿಗೆ ನಿರ್ಮಿಸಿರುವ ಸೇತುವೆ ಸಂಪರ್ಕಿಸುವ ಪ್ರದೇಶದಲ್ಲೂ ಕುಸಿದು ಅಪಾಯಕಾರಿಯಾಗಿದೆ. ಅಲ್ಲಿಂದ ಅರ್ಧ ಕಿ.ಮೀ. ಅಂತರದಲ್ಲಿ ಸುಜ್ಲಾನ್ ಯೋಜನಾ ಪ್ರದೇಶಕ್ಕೆ ಸಂಪರ್ಕಿಸಲು ಅಂಡರ್‌ಪಾಸ್ ನಿರ್ಮಿಸಿದ್ದರೂ ಅದು ಮಳೆಗಾಲದಲ್ಲಿ ನೀರು ತುಂಬಿ ಸಂಚಾರಕ್ಕೆ ದುಸ್ತರವಾಗಿದೆ. ಅಂಡರ್‌ಪಾಸ್ ಕೂಡ ಶಿಥಿಲವಾಗಿದೆ.
    ಸುಜ್ಲಾನ್ ಆವರಣ ಗೋಡೆಯೂ ಕುಸಿತ
    ಮಳೆಗಾಲದಲ್ಲಿ ನೀರು ಒಳಭಾಗದಲ್ಲಿ ಜಿನುಗುತ್ತಿರುವ ಇಲ್ಲಿ ಈ ಬಾರಿಯ ಮಳೆಗಾಲದಲ್ಲಿ ಒಂದು ಪಾರ್ಶ್ವದಲ್ಲಿ ಸುಜ್ಲಾನ್ ಆವರಣ ಗೋಡೆ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕಂಪನಿ ತಾತ್ಕಾಲಿಕವಾಗಿ ಮಣ್ಣು ತೆರವು ಮಾಡಿದ್ದು, ನೀರು ರಸ್ತೆಗೆ ಹರಿಯುವುದನ್ನು ತಡೆಯಲು ಕ್ರಮ ಕೈಗೊಂಡಿಲ್ಲ. ಪಡುಬಿದ್ರಿ ಮಂಜೊಟ್ಟಿ ಪ್ರದೇಶದಲ್ಲಿ ಘನ ಹಾಗೂ ಹಸಿ ತ್ಯಾಜ್ಯಗಳನ್ನು ದಾರಿಹೋಕರು ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವುದರಿಂದ ದುರ್ನಾತ ಬೀರುತ್ತಿದೆ.

    ಪಡುಬಿದ್ರಿ- ಪಲಿಮಾರು ಸಂಪರ್ಕ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಅಗತ್ಯವಿದೆ. ಅನುದಾನ ಹೊಂದಾಣಿಕೆ ಮಾಡಿಕೊಂಡು ಮುಂದಿನ ಹಂತದಲ್ಲಿ ಕಾಮಗಾರಿ ನಡೆಸುವ ಬಗ್ಗೆ ಗಮನ ಹರಿಸಲಾಗುವುದು.
    | ಶಶಿಕಾಂತ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ಸದಸ್ಯ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts