More

    ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆಯೊಡ್ಡಿ ನಾಲಿಗೆ ಹರಿಬಿಟ್ಟ ಪಾಕ್​ ನಾಯಕಿ!

    ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ, ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಪಾಕ್​ನ​ ಆಡಳಿತಾರೂಢ “ಪಾಕಿಸ್ತಾನ ಪೀಪಲ್ಸ್​ ಪಾರ್ಟಿ”ಯ ನಾಯಕಿ ಶಾಝಿಯಾ ಮರ್ರಿ ಭಾರತೀಯರಿಗೆ ಪರಮಾಣು ಯುದ್ಧದ ಬೆದರಿಕೆಯೊಡ್ಡಿದ್ದಾಳೆ.

    ಪಾಕಿಸ್ತಾನದ ಬೋಲ್​ ನ್ಯೂಸ್​ ಮಾಧ್ಯಮಕ್ಕೆ ಶಾಝಿಯಾ ನೀಡಿರುವ ಪ್ರತಿಕ್ರಿಯೆಯನ್ನು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪಾಕಿಸ್ತಾನ ಪರಮಾಣು ಬಾಂಬ್​ ಹೊಂದಿದೆ ಎನ್ನುವುದನ್ನು ಭಾರತ ಮರೆಯಬಾರದು. ನಮ್ಮ ಪರಮಾಣು ಸ್ಥಿತಿಯು ಮೌನವಾಗಿರಲು ಅಲ್ಲ. ಅಗತ್ಯಬಿದ್ದರೆ ನಾವು ಯಾವುದರಿಂದಲೂ ಹಿಂದೆ ಸರಿಯುವುದಿಲ್ಲ ಎಂದು ಭಾರತೀಯರಿಗೆ ಬೆದರಿಕೆ ಹಾಕಿದ್ದಾಳೆ.

    ವಿಶ್ವಸಂಸ್ಥೆಯಲ್ಲಿ ತಮ್ಮ ದೇಶದ ವಿದೇಶಾಂಗ ಸಚಿವ ನೀಡಿದ ಉದ್ಧಟತನದ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದ ವಿರುದ್ಧ ಪಾಕ್​ ನಾಯಕಿ ನಾಲಿಗೆ ಹರಿಬಿಟ್ಟಿದ್ದಾಳೆ. ಭಾರತದ ಮುಂದೆ ಪಾಕ್​ ಆಟ ಏನೂ ನಡೆಯುವುದಿಲ್ಲ ಎಂಬ ವಾಸ್ತವವನ್ನು ಅರಿಯದೇ ತಮ್ಮ ನಾಯಕರನ್ನು ಮೆಚ್ಚಿಸಲು ಅಪ್ರಬುದ್ಧ​ ಮಾತುಗಳನ್ನಾಡಿದ್ದಾಳೆ.

    ದೇಶವ್ಯಾಪಿ ಆಕ್ರೋಶ
    ವಿಶ್ವಸಂಸ್ಥೆಯ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಮಾತನ್ನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ವಿರುದ್ಧ ಬಿಜೆಪಿ ಕಾರ್ಯಕರ್ತರು ದೇಶಾದ್ಯಾಂತ ಪ್ರತಿಭಟನೆ ನಡೆಸಿದ್ದಾರೆ. ಎಲ್ಲ ರಾಜ್ಯಗಳ ರಾಜಧಾನಿಯಲ್ಲಿ ಬಿಲಾವಲ್ ಭುಟ್ಟೊ ಪ್ರತಿಕೃತಿ ದಹಿಸಲಾಗಿದೆ. ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಕಚೇರಿ ಮುಂದೆಯೂ ಪ್ರತಿಭಟನೆ ನಡೆಸಲಾಗಿದೆ.

    ಬಿಲಾವಲ್ ಹೇಳಿಕೆಯು ಅತ್ಯಂತ ಅವಮಾನಕಾರಿ ಮತ್ತು ಹೇಡಿತನದ್ದಾಗಿದೆ. ಕುಸಿಯುತ್ತಿರುವ ತನ್ನ ದೇಶದ ಆರ್ಥಿಕತೆಯ ಮೇಲಿನ ಗಮನವನ್ನು ಬೇರೆಡೆಗೆ ಸೆಳೆಯುವ ಮತ್ತು ವಿಶ್ವವನ್ನು ತಪ್ಪುದಾರಿಗೆ ಎಳೆಯುವಂತಹ ಹೇಳಿಕೆ ಇದಾಗಿದೆ. ಕಾನೂನು-ಸುವ್ಯವಸ್ಥೆ ಕುಸಿದಿರುವ ಪಾಕ್ ಅರಾಜಕವಾಗಿದೆ. ಸೇನೆ ಮತ್ತು ಸರ್ಕಾರದ ತಕಲಾಟ ಹದ್ದುಮೀರಿದೆ. ವಿದೇಶಗಳ ಜತೆ ಪಾಕ್ ಸಂಬಂಧ ಹಳಸಿಕೊಂಡಿದೆ. ಪಾಕ್ ಭಯೋತ್ಪಾಕದರಿಗೆ ಸ್ವರ್ಗ ಎಂಬುದು ಜಗತ್ತಿಗೆ ಗೊತ್ತಿರುವ ವಿಷಯ. ತಮ್ಮ ದೇಶದ ಹುಳುಕುಗಳನ್ನು ಮುಚ್ಚಿಕೊಳ್ಳಲು ಜಗತ್ತಿನಲ್ಲೇ ಪ್ರಜಾಪ್ರಭುತ್ವದಲ್ಲಿ ಬಲಾಢ್ಯವಾದ, ಮೆಚ್ಚುಗೆಗೆ ಪಾತ್ರವಾದ ವಿದೇಶಾಂಗ ನೀತಿ ಹೊಂದಿರುವ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ಮೋದಿ ಬಗ್ಗೆ ಮಾತನಾಡುವ ಹುಂಬತನವನ್ನು ಬಿಲಾವಲ್ ತೋರಿದ್ದಾರೆ ಎಂದು ಪ್ರತಿಭಟನಕಾರರು ದೂರಿದ್ದಾರೆ.

    ಬಿಲಾವಲ್ ಹೇಳಿದ್ದೇನು?: ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ, ‘ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ ಗುಜರಾತ್​ನ ಹಂತಕ ಇನ್ನೂ ಜೀವಂತವಾಗಿದ್ದಾನೆ. ಭಾರತದ ಪ್ರಧಾನಿಯಾಗಿದ್ದಾನೆ’ ಎಂದು ಹೇಳಿದ್ದರು. ಗಾಂಧಿ ತತ್ವವನ್ನು ಒಪ್ಪದ ಆರ್​ಎಸ್​ಎಸ್ ವ್ಯಕ್ತಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿಶ್ವಸಂಸ್ಥೆ ಆವರಣದಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡಿದ್ದಾರೆ. ಆದರೆ, ಆರ್​ಎಸ್​ಎಸ್ ಗಾಂಧಿ ಹತ್ಯೆಗೈದವನ ತತ್ವವನ್ನು ಪ್ರತಿಪಾದಿಸುತ್ತದೆ ಎಂದು ಭಾಷಣದಲ್ಲಿ ಹೇಳಿದ್ದರು. (ಏಜೆನ್ಸೀಸ್​)

    ಗಂಡನಿಗೆ ಸರ್ಕಾರಿ ಕೆಲಸ ಸಿಗುತ್ತೆ ಅಂತಾ ಕಿಡ್ನಿ ದಾನ ಮಾಡಿದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​!

    ಬೀಚ್​ಗೆ ಮೈತುಂಬ ಬಟ್ಟೆ ಹಾಕ್ಕೊಂಡು ಬಂದು ಟ್ರೋಲ್​ ಆದ ಬೋಲ್ಡ್​ ಬ್ಯೂಟಿ ಉರ್ಫಿ ಜಾವೇದ್​!

    ಜಮಾಲಿಗುಡ್ಡದಲ್ಲಿ ಅದಿತಿ ಕಣ್ಣೀರು; ಕಾಲ್ಪನಿಕ ಪ್ರಪಂಚದಲ್ಲಿ ಭಾವನಾತ್ಮಕ ಪಯಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts