More

  ಪಾಕಿಸ್ತಾನಿಗಳು ಭಾರತ ಪ್ರವೇಶಿಸಬಹುದಾದ್ರೆ ಮಹಾರಾಷ್ಟ್ರದವರು ಬೆಳಗಾವಿಗೆ ಭೇಟಿ ನೀಡಬಾರದಾ?: ಸಂಜಯ್​ ರಾವತ್​

  ಮುಂಬೈ: ಬೆಳಗಾವಿ ಜಿಲ್ಲೆಗೆ ಭೇಟಿ ನೀಡುವುದನ್ನು ತಡೆಯುತ್ತಿದ್ದಾರೆ ಎಂದು ಆರೋಪಿಸಿ ಶಿವಸೇನಾ ಸಂಸದ ಸಂಜಯ್​ ರಾವತ್​ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  ಶನಿವಾರ ಮುಂಬೈನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪಾಕಿಸ್ತಾನಿ, ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾಗಳು ಭಾರತವನ್ನು ಪ್ರವೇಶಿಸಬಹುದು ಆದರೆ, ಮಹಾರಾಷ್ಟ್ರದಿಂದ ಯಾರೊಬ್ಬರು ಬೆಳಗಾವಿಗೆ ಹೋಗಬಾರದಾ? ಇದು ತಪ್ಪು. ಅಲ್ಲಿ ವಿವಾದವಿರಬಹುದು ಆದರೆ ಪರಸ್ಪರ ಇಬ್ಬರು ಇಷ್ಟು ನಿರ್ಬಂಧಗಳನ್ನು ಹೇರಬಾರದು ಎಂದು ಹೇಳಿದರು.

  ಬೆಳಗಾವಿ ಜಿಲ್ಲೆಗೆ ಭೇಟಿ ನೀಡುವುದಕ್ಕೆ ನಿಷೇಧ ಹೇರಿರುವ ದಿನದ ಬೆನ್ನಲ್ಲೇ ಸಂಜಯ್​ ರಾವತ್​ ಹೇಳಿಕೆ ನೀಡಿದ್ದಾರೆ.

  ಬೆಳಗಾವಿಯಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಗೆ ಸಂಬಂಧಿಸಿದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜನರೊಂದಿಗೆ ಮಾತನಾಡಲು ನಾನು ಅಲ್ಲಿಗೆ ಹೋಗಬೇಕಾಗಿದೆ. ಒಂದು ವೇಳೆ ನಿರ್ಬಂಧವೇನಾದರೂ ಹೇರಿದರೆ, ಅದು ಬೇರೆಯದಕ್ಕೆ ಆಸ್ಪದ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ.

  ಇದಕ್ಕೂ ಮುನ್ನ ಮಹಾರಾಷ್ಟ್ರ ಸಚಿವ ರಾಜೇಂದ್ರ ಪಾಟೀಲ್ ಯೆದ್ರಾವ್​ಕರ್​ ಕರ್ನಾಟಕ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಲ್ಲೆಗೆ ಯತ್ನಿಸಿ, ಮಾತನಾಡುವುದನ್ನು ನಿಲ್ಲಿಸಿದರು ಎಂದು ದೂರಿದ್ದಾರೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts