More

    FACT CHECK| ತಾಯಿ ಎದುರೇ ಬಾಲಕಿಯನ್ನು ಅಪಹರಣ ಮಾಡಿ ಹಲ್ಲೆ ನಡೆಸಿದ ವಿಡಿಯೋದ ನೈಜತೆ ಏನು?

    ನವದೆಹಲಿ: ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಬೆನ್ನ ಹಿಂದೆಯೇ ತಾಯಿ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

    ಪಾಕಿಸ್ತಾನದಲ್ಲಿ ಹಿಂದೂಗಳನ್ನು ಈ ರೀತಿ ಹಿಂಸಿಸಲಾಗುತ್ತಿದೆ ಎಂದು ಶೀರ್ಷಿಕೆ ಬರೆದು ಅದರಲ್ಲಿ ಇಬ್ಬರು ಪುರುಷರು ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವುದು ಹಾಗೂ ಹುಡುಗಿಯೊಬ್ಬಳನ್ನು ಟ್ರ್ಯಾಕ್ಟರ್​ನಲ್ಲಿ ಹೊಡೆಯುತ್ತಿರುವ ವಿಡಿಯೋವನ್ನು ಅಪ್​ಲೋಡ್​ ಮಾಡಲಾಗಿತ್ತು. ಆದರೆ ಈ ವಿಡಿಯೋ ಪಾಕಿಸ್ತಾನದ್ದಲ್ಲ. ಭಾರತದ ಜೋಧ್​ಪುರದಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯದ ವಿಡಿಯೋ ಎಂಬುದು ಇಂಡಿಯಾ ಟುಡೆ ನಡೆಸಿದ ಫ್ಯಾಕ್ಟ್​ ಚೆಕ್​ನಿಂದ ಪತ್ತೆಯಾಗಿದೆ.

    ಪಾಕಿಸ್ತಾನದಲ್ಲಿ ತಾಯಂದಿರ ಎದುರೇ ಹೆಣ್ಣು ಮಕ್ಕಳನ್ನು ಅಪಹರಣ ಮಾಡಿ ಥಳಿಸುತ್ತಾರೆ. ನಂತರ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಾರೆ. ಇದು ಅಮಾನವೀಯ. ಎಲ್ಲ ಹಿಂದೂಗಳು ಈ ವಿಡಿಯೋವನ್ನು ಹಂಚಬೇಕು. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸುವ ಹಾಗೂ ಕಾಂಗ್ರೆಸ್​ ಬೆಂಬಲಿಸುವ ಹಿಂದೂಗಳು ಈ ವಿಡಿಯೋ ನೋಡಿ ಜಾಗೃತಗೊಳ್ಳುತ್ತಾರೆ ಅಂದುಕೊಂಡಿದ್ದೇವೆ ಎಂದು ಬರೆದು ಪೋಸ್ಟ್​ ಮಾಡಲಾಗಿತ್ತು.

    ಈ ವಿಡಿಯೋವನ್ನು ಹಲವು ಬಾರಿ ವೀಕ್ಷಿಸಿ, ಕೀವರ್ಡ್​ ಮೂಲಕ ಹುಡುಕಿದಾಗ ಇದು ನಕಲಿ ವಿಡಿಯೋ ಎಂಬುದು ಪತ್ತೆಯಾಗಿದೆ. ಈ ಘಟನೆ ರಾಜಸ್ತಾನದ ಜೋಧ್​ಪುರ್ ಜಿಲ್ಲೆಯ ಬಾಪ್​ ತಹಸಿಲ್​ನಲ್ಲಿ 2017ರ ಸೆಪ್ಟಂಬರ್​ 11 ರಂದು ನಡೆದಿದೆ.

    ಅಹ್ಮದ್ ಖಾನ್ ಎಂಬಾತ ತನ್ನ ಅಪ್ರಾಪ್ತ ಮಗಳನ್ನು ಶೌಕತ್ ಎಂಬ ವ್ಯಕ್ತಿಗೆ ವಿವಾಹ ಮಾಡಿಕೊಟ್ಟಿದ್ದ. ಈ ವಿಷಯ ಬಾಲಕಿಯ ತಾಯಿಗೆ ತಿಳಿದು ಆಕೆಗೆ 18 ವರ್ಷ ತುಂಬದ ಈ ಹಿನ್ನೆಲೆಯಲ್ಲಿ ಈ ವಿವಾಹ ಕಾನೂನು ಬಾಹಿರ ಹೀಗಾಗಿ ಮಗಳನ್ನು ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು. ಶೌಕತ್​ ತನ್ನ ಸ್ನೇಹಿತರ ಜೊತೆ ಸೇರಿ ತಾಯಿ ಎದುರೇ ಬಾಲಕಿ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಬಲವಂತವಾಗಿ ತನ್ನ ಹಳ್ಳಿಗೆ ಕರೆದುಕೊಂಡು ಹೋಗಿದ್ದ.

    ಈ ಘಟನೆಯನ್ನು ಹಲವು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು. ಪೊಲೀಸರು ದೂರು ದಾಖಲಿಸಿ ಬಾಲಕಿಯನ್ನು ಬಲವಂತವಾಗಿ ಹಳ್ಳಿಗೆ ಕರೆದೊಯ್ದವನ್ನು ಬಂಧಿಸಿದ್ದರು.

    ಈ ವಿಡಿಯೋವನ್ನು ತಿರುಚಿ ನೆರೆ ರಾಷ್ಟ್ರದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿತ್ತು. ಫ್ಯಾಕ್ಟ್​ ಚೆಕ್​ನಿಂದ ಇದು ನಕಲಿ ಎಂದು ಪತ್ತೆಯಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts