More

  ಪಾಕಿಸ್ತಾನ, ಬಾಂಗ್ಲಾದೇಶದಿಂದ ಬಂದಿರುವ ಮುಸ್ಲಿಮರನ್ನು ದೇಶದಿಂದ ಹೊರ ಹಾಕಲೇಬೇಕು: ಸಾಮ್ನಾ ಪತ್ರಿಕೆಯಲ್ಲಿ ಶಿವಸೇನಾ ಅಭಿಮತ

  ಮುಂಬೈ: ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ಮುಸ್ಲಿಮರನ್ನು ಹೊರ ಹಾಕಲೇಬೇಕು ಇದರಲ್ಲಿ ಸಂಶಯವೇ ಬೇಡ ಎಂದು ಶಿವಸೇನಾ ಅಭಿಪ್ರಾಯಪಟ್ಟಿದೆ. ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಈ ಅಭಿಪ್ರಾಯ ಪ್ರಕಟಗೊಂಡಿದೆ.

  ಪೌರತ್ವ ತಿದ್ದಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಬಗ್ಗೆ ದೇಶಾದ್ಯಂತ ಪ್ರತಿಭಟನೆ, ಪರ- ವಿರೋಧದ ಚರ್ಚೆಗಳ ನಡೆಯುತ್ತಿರುವಾಗ ಬಂದ ಮಹಾರಾಷ್ಟ್ರ ರಾಜ್ಯದಲ್ಲಿ ಆಡಳಿತದಲ್ಲಿರುವ ಮಹಾ ವಿಕಾಸ ಅಘಾಡಿಯ ಈ ಹೇಳಿಕೆ ಬಗ್ಗೆ ಪರ ವಿರೋಧದ ಚರ್ಚೆಗಳಾಗಲಿವೆ.

  ಶಿವಸೇನಾ ಮುಖ್ಯಸ್ಥ ಉದ್ಧವ್​ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿಯು ಎನ್​ಸಿಪಿ ಮತ್ತು ಕಾಂಗ್ರೆಸ್​ ಜತೆಗೂಡಿ ರಚನೆಗೊಂಡ ಸರ್ಕಾರವಾಗಿದೆ.

  “ಪಾಕಿಸ್ತಾನ ಹಾಗೂ ಬಾಂಗ್ಲಾದಿಂದ ಬಂದಿರುವ ಮುಸ್ಲಿಮರನ್ನು ಭಾರತದಿಂದ ಹೊರ ಹಾಕಲೇಬೇಕು, ಇದರಲ್ಲಿ ಅನುಮಾನವೇ ಬೇಡ. ಇದನ್ನು ಮಾಡಲು ನೀವು ಬಾವುಟದ ಬಣ್ಣವನ್ನು ಬದಲಾಯಿಸುತ್ತೀರಿ. ಇದು ತುಂಬ ಆಸಕ್ತಿದಾಯಕ ಎನಿಸುತ್ತಿದೆ. ಶಿವಸೇನಾ ಯಾವತ್ತು ತನ್ನ ಬಾವುಟವನ್ನು ಬದಲಿಸಿಲ್ಲ. ಅದು ಯಾವಾಗಲೂ ಕೇಸರಿಯಾಗಿಯೇ ಉಳಿದಿದೆ. ಶಿವಸೇನೆಯೂ ಎಂದಿಗೂ ಹಿಂದುತ್ವಕ್ಕಾಗಿ ಹೋರಾಡುತ್ತದೆ. ಆದರೆ ಪೌರತ್ವ ಕಾಯ್ದೆಯಲ್ಲೂ ಲೋಪದೋಷಗಳಿವೆ” ಎಂದಿದೆ.

  ಪೌರತ್ವ ತಿದ್ದಪಡಿ ಕಾಯ್ದೆ ಬಗ್ಗೆ ಶೀವಸೇನಾಗೆ ಮಿಶ್ರ ಅಭಿಪ್ರಾಯವಿದೆ. ಲೋಕ ಸಭೆಯಲ್ಲಿ ಕಾಯ್ದೆಯನ್ನು ಬೆಂಬಲಿಸಿದ್ದ ಶಿವಸೇನಾ, ರಾಜ್ಯಸಭೆಯಲ್ಲಿ ಸಭಾತ್ಯಾಗ ಮಾಡಿತ್ತು.

  ನಾವು ಬಣ್ಣ ಬದಲಿಸಿಲ್ಲ: ಹಳೆಯ ರಾಜಕೀಯ ಪ್ರತಿಸ್ಪರ್ಧಿಗಳನ್ನೇ ಪಾಲುದಾರರಾನ್ನಾಗಿಸಿಕೊಂಡು ನಾನು ಹೊಸ ರಾಜಕೀಯ ಮಾರ್ಗವನ್ನು ಆರಿಸಿಕೊಂಡಿದ್ದೇನೆ. ನಾವು ಬಣ್ಣ ಬದಲಾಯಿಸಿಲ್ಲ. ನಮ್ಮದು ಕೇಸರಿಯಾಗಿಯೇ ಉಳಿದಿದೆ ಎಂದು ಸಿಎಂ ಉದ್ಧವ್​ ಠಾಕ್ರೆ ಎಂಎನ್​ಎಸ್​ ಮುಖ್ಯಸ್ಥ ರಾಜ್​ ಠಾಕ್ರೆಗೆ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts