More

    ಪಾಕಿಸ್ತಾನ ರಾಜಕೀಯ ಬಿಕ್ಕಟ್ಟು: ಅವಿಶ್ವಾಸ ಮತದ ಮೇಲಿನ ಚರ್ಚೆಗೆ ವಿರಾಮ, ಮಧ್ಯಾಹ್ನ 1ಕ್ಕೆ ಕಲಾಪ ಮುಂದೂಡಿಕೆ

    ಇಸ್ಲಾಮಾಬಾದ್: ಪಾಕಿಸ್ತಾನದ ಸುಪ್ರೀಂಕೋರ್ಟ್​ ಆದೇಶದಂತೆ ಇಂದು ಇಮ್ರಾನ್​ ಖಾನ್​ ಅವರು ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿದ್ದು, ಪಾಕ್​ ನ್ಯಾಷನಲ್​ ಅಸೆಂಬ್ಲಿಯಲ್ಲಿ ಇಂದು ಬೆಳಗ್ಗೆ ಆರಂಭವಾಗಿರುವ ಅವಿಶ್ವಾಸ ಮತದ ಮೇಲಿನ ಚರ್ಚೆಗೆ ತಾತ್ಕಾಲಿಕ ವಿರಾಮ ಹೇಳಿದ್ದು, ಸದನವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಲಾಗಿದೆ.

    ಇಮ್ರಾನ್​ ವಿರುದ್ಧದ ಅವಿಶ್ವಾಸ ನಿರ್ಣಯದ ಹಿಂದೆ ವಿದೇಶಿ ಪಿತೂರಿ ಎಂದು ವಿದೇಶಾಂಗ ಸಚಿವ ಶಾ ಮಹಮೂದ್ ಸದನದಲ್ಲಿ ಹೇಳುವಾಗ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು. ನಾವು ಅವಿಶ್ವಾಸ ಮತ ಎದುರಿಸುವುದಾಗಿ ಇದೇ ಸಂದರ್ಭದಲ್ಲಿ ಶಾ ಮಹಮೂದ್ ತಿಳಿಸಿದರು.

    ಇನ್ನು ಇಮ್ರಾನ್​ ಖಾನ್​ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ 51 ಸದಸ್ಯರು ರಾಷ್ಟ್ರೀಯ ಅಸೆಂಬ್ಲಿಯಲ್ಲಿದ್ದಾರೆ. ಅಲ್ಲದೆ, ಅದೇ ಪಕ್ಷ 22 ಬಂಡಾಯ ಸದಸ್ಯರು ಸಹ ಹಾಜರಾಗಿದ್ದು, ಇಂದೇ ಇಮ್ರಾನ್​ ಖಾನ್​ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ. ಸದ್ಯ ಸದನವನ್ನು ಮುಂದೂಡಿದ್ದು, ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ.

    ಗುರುವಾರ​ ತೀರ್ಪು ನೀಡಿದ ಸುಪ್ರೀಂಕೊರ್ಟ್, ಡೆಪ್ಯೂಟಿ ಸ್ಪೀಕರ್ ಕ್ರಮ ಸರಿಯಲ್ಲದ ಕಾರಣ ಮುಂದಿನ ನಡೆ ಏನು? ದೇಶದ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಎಲ್ಲರೂ ನಡೆಯಬೇಕು. ಇಮ್ರಾನ್ ಖಾನ್ ಸರ್ಕಾರ ನ್ಯಾಷನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ಮತವನ್ನು ಎದುರಿಸಬೇಕು. ಏ.9ರಂದು ಬೆಳಗ್ಗೆ 10ಗಂಟೆಗೆ ವಿಶೇಷ ಅಧಿವೇಶನ ನಡೆಯಬೇಕು. ಅಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕಬೇಕು ಎಂದು ಕೋರ್ಟ್ ಹೇಳಿದೆ.

    ಸುಪ್ರೀಂಕೋರ್ಟ್​ನಲ್ಲಿ ಪಾಕ್​ ಪ್ರಧಾನಿಗೆ ಭಾರೀ ಮುಖಭಂಗ: ನಾಳೆಯೇ ಇಮ್ರಾನ್​ ಸರ್ಕಾರದ ಭವಿಷ್ಯ ನಿರ್ಧಾರ

    ರಷ್ಯಾ ಯೋಧರ ರೇಪ್​ನಿಂದ ತಪ್ಪಿಸಿಕೊಳ್ಳಲು ಯೂಕ್ರೇನ್​ ಯುವತಿಯರ ಈ ನಿರ್ಧಾರ ಮನಕಲಕುವಂತಿದೆ!

    ಲ್ಯಾಂಡಿಂಗ್​ ವೇಳೆ ಪತನಗೊಂಡು ಇಬ್ಭಾಗವಾದ ಕಾರ್ಗೋ ವಿಮಾನ: ಭಯಾನಕ ವಿಡಿಯೋ ವೈರಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts