More

    ಪಾಕ್ ಕ್ಯಾತೆಗೆ ತಿರುಗೇಟು ಕೊಟ್ಟ ಭಾರತೀಯ ಸೇನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್​ ಸೇನೆಯು ಮಂಗಳವಾರ ಬೆಳಗ್ಗೆ ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್​ ದಾಳಿ ನಡೆಸಿದ್ದು, ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ಕೊಟ್ಟಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

    ಕಳೆದ 12 ತಾಸಿನಲ್ಲಿ ಪಾಕಿಸ್ತಾನ ಸೇನೆಯು ರಾಜೌರಿ ಮತ್ತು ಪೂಂಚ್ ಜಿಲ್ಲೆಗಳಲ್ಲಿ 2ನೇ ಬಾರಿಗೆ ಕದನ ವಿರಾಮ ಉಲ್ಲಂಘಿಸಿದೆ. ಬೆಳಗ್ಗೆ 7.30ರ ಸಮಾರಿನಲ್ಲಿ ರಾಜೌರಿಯ ಸುಂದರ್‌ಬಾನಿ ವಲಯದಲ್ಲಿ ನಿಯಂತ್ರಣ ರೇಖೆಯ (ಎಲ್ಒಸಿ) ಉದ್ದಕ್ಕೂ ಶೆಲ್ ಎಸೆಯುವ ಜತೆಗೆ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘನೆಗೆ ಚಾಲನೆ ನೀಡಿದೆ.

    ಇದನ್ನೂ ಓದಿರಿ ವಲಸೆ ಕುಟುಂಬಗಳಿಗೆ ಉದ್ಯೋಗ ಖಾತ್ರಿ

    ಕುತಂತ್ರದಿಂದ ಪಾಕಿಸ್ತಾನ ಸೇನೆ ನಡೆಸಿದ ಶೆಲ್ ದಾಳಿಯಿಂದಾಗಿ ಪ್ರಾಣಹಾನಿ ಸಂಭವಿಸಿದ ಬಗ್ಗೆ ತಕ್ಷಣದ ವರದಿ ಬಂದಿಲ್ಲ. ಆದರೆ, ಭಾರತೀಯ ಸೇನೆಯೂ ಪಾಕ್​ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದು, ಎರಡೂ ಕಡೆಯ ನಡುವೆ ಗಡಿಯಾಚೆಗಿನ ಶೆಲ್ ದಾಳಿ ನಡೆಯುತ್ತಿದೆ. ಪದೇಪದೆ ಹಳೇ ಚಾಳಿ ಮುಂದುವರಿಸುತ್ತಿರುವ ಪಾಕ್​ ಸೇನೆ ಸೋಮವಾರ ರಾತ್ರಿ ಪೂಂಚ್‌ನ ಗುಲ್‌ಪುರ ಸೆಕ್ಟರ್‌ನಲ್ಲಿ ಎಲ್‌ಒಸಿ ಉದ್ದಕ್ಕೂ ಗುಂಡು ಹಾರಿಸಿತ್ತು. ಈಗ ರಾಜೌರಿಯಲ್ಲಿ ಗಡಿ ನಿಯಮ ಉಲ್ಲಂಘಿಸಿದೆ.

    ಇದನ್ನೂ ಓದಿರಿ ಬಾಂಗ್ಲಾದಲ್ಲಿ ಕರೊನಾ ರೋಗಿಗಳು ನಾಲ್ಕೇ ದಿನಕ್ಕೆ ಚೇತರಿಕೆ…! ಪವಾಡವನ್ನೇ ಮಾಡಿದೆ ಈ ಔಷಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts