More

    ಮಿತ್ರರಾಷ್ಟ್ರ ಚೀನಾಕ್ಕೆ ‘ಟಿಕ್​ಟಾಕ್’​ ಶಾಕ್​ ನೀಡಿದ ಪಾಕಿಸ್ತಾನ ಸರ್ಕಾರ

    ಇಸ್ಲಮಾಬಾದ್​: ಚೀನಾಕ್ಕೆ ಅದರ ಸಾರ್ವಕಾಲಿಕ ಮಿತ್ರ ರಾಷ್ಟ್ರ ಪಾಕಿಸ್ತಾನ ಶಾಕ್​ ನೀಡಿದೆ. ಇತ್ತೀಚೆಗಷ್ಟೇ ಭಾರತದಲ್ಲಿ ನಿಷೇಧವಾಗಿದ್ದ ಬಹುಪ್ರಸಿದ್ಧ ಟಿಕ್​ಟಾಕ್​ ಆ್ಯಪ್​ಗೆ ಇದೀಗ ಪಾಕ್​​ನಲ್ಲೂ ನಿರ್ಬಂಧ ಹೇರಲಾಗಿದೆ.

    ಟಿಕ್​ಟಾಕ್​ ಆ್ಯಪ್​ ನಿರ್ಬಂಧಿಸಿ ಆದೇಶ ಹೊರಡಿಸಿರುವ ಪಾಕಿಸ್ತಾನ ಟೆಲಿಕಾಂ ಪ್ರಾಧಿಕಾರ, ಪಾಕ್​ ಸರ್ಕಾರದ ಸೂಚನೆಗಳನ್ನು ಪಾಲಿಸುವಲ್ಲಿ ಚೀನಾ ಆ್ಯಪ್​ ವಿಫಲವಾಗಿದೆ. ಹಾಗಾಗಿ ಬ್ಲಾಕ್​ ಮಾಡಲಾಗಿದೆ ಎಂದು ತಿಳಿಸಿದೆ.
    ಟಿಕ್​ಟಾಕ್​ನಲ್ಲಿ ಅಶ್ಲೀಲ, ಅನೈತಿಕ, ಕಾನೂನು ಬಾಹಿರ ವಿಡಿಯೋಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈನಲ್ಲೇ ಪಾಕಿಸ್ತಾನ ಒಮ್ಮೆ ಎಚ್ಚರಿಕೆ ನೀಡಿತ್ತು. ಯುವಜನತೆ, ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ವಿವಿಧ ವರ್ಗದ ಜನರಿಂದ ತುಂಬ ದೂರುಗಳು ಬರುತ್ತಿವೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು, ಇಂಥ ವಿಚಾರಗಳನ್ನೊಳಗೊಂಡ ವಿಡಿಯೋಗಳನ್ನು ಕಡಿಮೆ ಮಾಡದೆ ಇದ್ದರೆ ಶೀಘ್ರದಲ್ಲೇ ನಿಷೇಧಿಸುವುದಾಗಿ ಟೆಲಿಕಾಂ ಪ್ರಾಧಿಕಾರ ಹೇಳಿತ್ತು.

    ಕಾನೂನು ಬಾಹಿರ ವಿಚಾರಗಳನ್ನು ಟಿಕ್​ಟಾಕ್​ನಲ್ಲಿ ನಿರ್ಬಂಧಿಸಿ, ತೃಪ್ತಿದಾಯಕ ಕಾರ್ಯವಿಧಾನವನ್ನು ಟಿಕ್​ಟಾಕ್ ಅಳವಡಿಸಿಕೊಂಡರೆ ತಮ್ಮ ನಿರ್ಧಾರವನ್ನು ಇನ್ನೊಮ್ಮೆ ಮರುಪರಿಶೀಲನೆ ಮಾಡುವುದಾಗಿ ಪಾಕ್ ತಿಳಿಸಿದೆ. (ಏಜೆನ್ಸೀಸ್​)

    2 ವರ್ಷಗಳ ಹಿಂದೆ ನಾಪತ್ತೆ ಆಗಿದ್ದ ಬಾಲಕಿಯನ್ನು ಪತ್ತೆ ಮಾಡಿಕೊಟ್ಟ ‘ದರ್ಪಣ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts