More

    ನೂಪುರ್ ಶರ್ಮಾ ಹತ್ಯೆಗಾಗಿ ಗಡಿ ದಾಟಿ ಬಂದ ಪಾಕಿಸ್ತಾನಿ; 11 ಇಂಚಿನ ಚಾಕು ಸಹಿತ ಸಿಕ್ಕಿಬಿದ್ದ…

    ನವದೆಹಲಿ: ಹೇಳಿಕೆಯೊಂದರ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ವಕ್ತಾರೆ ಸ್ಥಾನದಿಂದ ಅಮಾನತು ಆಗಿರುವ ನಾಯಕಿ ನೂಪುರ್​ ಶರ್ಮಾಗೆ ಬೆಂಬಲ ಸೂಚಿಸಿದ್ದ ಟೈಲರ್, ರಾಜಸ್ಥಾನದ ಕನ್ಹಯ್ಯ ಲಾಲ್​ ಹತ್ಯೆಯ ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿರುವಾಗಲೇ ಮತ್ತೊಂದು ಹತ್ಯೆಯ ಸಂಚು ಬಯಲಾಗಿದೆ. ಸ್ವಲ್ಪ ಎಚ್ಚರ ತಪ್ಪಿದ್ದರೂ ನೂಪುರ್ ಶರ್ಮಾ ಹತ್ಯೆ ಕೂಡ ನಡೆದುಹೋಗಿರುತ್ತಿತ್ತೇನೋ? ಆದರೆ ಬಿಎಸ್​ಎಫ್​ ಸಿಬ್ಬಂದಿಯ ಜಾಗ್ರತೆಯಿಂದಾಗಿ ಹತ್ಯೆಗೆಂದು ಬಂದಿದ್ದ ಪಾಕಿಸ್ತಾನದ ವ್ಯಕ್ತಿ ಸಿಕ್ಕಿಬಿದ್ದಿದ್ದು, ಈತನನ್ನು ಬಂಧಿಸಲಾಗಿದೆ.

    ರಿಜ್ವಾನ್ ಇರ್ಷಾದ್ ಎಂಬ ಈತನನ್ನು ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಜುಲೈ 16ರಂದು ಹಿಂದುಮಲ್ಕೋಟ್​ ಬಾರ್ಡರ್ ಔಟ್​ಪೋಸ್ಟ್​​ನಲ್ಲಿ ಭದ್ರತಾ ಸಿಬ್ಬಂದಿ ಈತನ ಚಲನವಲನದ ಬಗ್ಗೆ ಅನುಮಾನ ಮೂಡಿ ವಶಕ್ಕೆ ಪಡೆದಿದ್ದರು. ಈತನನ್ನು ಇಂಟೆಲಿಜೆನ್ಸ್ ಬ್ಯೂರೋದವರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

    ಬಂಧಿತನ ಬಳಿ 11 ಇಂಚಿನ ಚಾಕು, ಧಾರ್ಮಿಕ ಪುಸ್ತಕಗಳು, ಬಟ್ಟೆ, ಆಹಾರ ಹಾಗೂ ಚೀಲವೊಂದರಲ್ಲಿ ಮರಳು ಕೂಡ ಇತ್ತು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಂಡಿ ಬಹಾಬುದ್ದೀನ್​ ನಿವಾಸಿ ಎಂಬುದಾಗಿ ಈತ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

    ಪ್ರವಾದಿ ವಿರುದ್ಧ ವಿವಾದಿತ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ನೂಪುರ್ ಶರ್ಮಾ ಹತ್ಯೆಗಾಗಿ ಬಂದಿದ್ದಾಗಿ ಈತ ಪ್ರಾಥಮಿಕ ತನಿಖೆ ವೇಳೆ ತಿಳಿಸಿದ್ದು, ಹತ್ಯೆ ಮಾಡುವುದಕ್ಕೂ ಅಜ್ಮೇರ್ ದರ್ಗಾಗೆ ಭೇಟಿ ಕೊಡುವ ಯೋಜನೆ ಹಾಕಿಕೊಂಡಿದ್ದ ಎಂಬುದೂ ವಿಚಾರಣೆ ವೇಳೆ ತಿಳಿದುಬಂದಿದೆ.

    ಈತನನ್ನು ಹೆಚ್ಚಿನ ವಿಚಾರಣೆಗಾಗಿ ಮೊದಲು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದು, ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಅಲ್ಲಿಂದ ಮತ್ತೆ ಹೆಚ್ಚಿನ ವಿಚಾರಣೆಗಾಗಿ 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಐಬಿ, ರಾ ಮತ್ತು ಮಿಲಿಟರಿ ಇಂಟೆಲಿಜೆನ್ಸ್​ ಅಧಿಕಾರಿಗಳ ಜಂಟಿ ತಂಡ ಈತನನ್ನು ವಿಚಾರಣೆಗೆ ಒಳಪಡಿಸುತ್ತಿದೆ.

    ಮಗಳನ್ನು ಅಮೆರಿಕಕ್ಕೆ ಕಳಿಸಿ ಮರಳುತ್ತಿದ್ದ ದಂಪತಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವು!

    ತಪ್ಪು ಆದೇಶದ ಬಳಿಕ ಸರ್ಕಾರ ಮತ್ತೊಂದು ಎಡವಟ್ಟು; ದಸರಾಗೆ ‘ಹಳೇ ಕಾರ್ಯಸೂಚಿ’?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts