More

    ಪಾಕಿಸ್ತಾನದ ಕಳ್ಳಾಟ ಬಯಲು; ಏನೇನೆಲ್ಲಾ ಇತ್ತು ಗೊತ್ತಾ ನೆಲಕ್ಕುರುಳಿದ ಡ್ರೋನ್​ನಲ್ಲಿ?!

    ಶ್ರೀನಗರ: ಇಂದು ಮುಂಜಾನೆ 5ಗಂಟೆ ಸುಮಾರಿಗೆ ಭಾರತೀಯ ಗಡಿ ಭದ್ರತಾ ಪಡೆಯ ಯೋಧರು ಪಾಕಿಸ್ತಾನದ ಡ್ರೋನ್​ವೊಂದನ್ನು ಹೊಡೆದುರುಳಿಸಿದ್ದಾರೆ.

    ಕಥುವಾ ಜಿಲ್ಲೆಯ ಹಿರಾನಗರ ಅಂತಾರಾಷ್ಟ್ರೀಯ ಗಡಿ ಸಮೀಪ ಸುಮಾರು 250 ಮೀ.ಎತ್ತರಲ್ಲಿ ಅನುಮಾನಾಸ್ಪದವಾಗಿ ಸುಳಿದಾಡುತ್ತಿದ್ದ ಪಾಕ್​ ಡ್ರೋನ್​ಗೆ ಬಿಎಸ್​​ಎಫ್​ ಸಿಬ್ಬಂದಿ 9 ಗುಂಡುಗಳನ್ನು ಹಾರಿಸಿದ ಪರಿಣಾಮ ಅದು ನೆಲಕ್ಕೆ ಉರುಳಿಬಿದ್ದಿದೆ.

    ಈ ಬೇಹುಗಾರಿಕಾ ಡ್ರೋನ್​ನಲ್ಲಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಭಾರತೀಯ ಸೇನಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. 8X6 ಅಳತೆಯ ಹೆಕ್ಸಾಕಾಪ್ಟರ್​ ಡ್ರೋನ್​​ನಲ್ಲಿ 4 ಬ್ಯಾಟರಿಗಳು, ಒಂದು ರೇಡಿಯೋ ಸಿಗ್ನಲ್​ ರಿಸೀವರ್​ ಇತ್ತು. ಇದನ್ನೂ ಓದಿ: ಡಿಸೆಂಬರ್​​ನಲ್ಲೇ ವಕ್ಕರಿಸಿದೆ ಕರೊನಾ…ಒಳಚರಂಡಿಯ ತ್ಯಾಜ್ಯದಲ್ಲಿ ಅಡಗಿ ಕುಳಿತಿತ್ತು !

    7 ಗ್ರೆನೇಡ್​ಗಳು (M-67), ಅಮೆರಿಕ ತಯಾರಿತ ಎಂ4 ಕಾರ್ಬನ್​ ಮಶಿನ್​, ಎರಡು ಸ್ಫೋಟಕಗಳು ಮತ್ತು ಮದ್ದುಗುಂಡುಗಳನ್ನು ಹೊತ್ತ ಈ ಡ್ರೋನ್​ ಭಾರತೀಯ ಭೂಪ್ರದೇಶದ ಒಳಗೆ ಹಾರಾಡುತ್ತಿತ್ತು. ನೆಲಕ್ಕುರುಳಿದ ಡ್ರೋನ್​ನಿಂದ ಎಲ್ಲ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ.

    ಪಾಕ್​ನ ಡ್ರೋನ್​ ಈ ಶಸ್ತ್ರಾಸ್ತ್ರಗಳನ್ನು ಉಗ್ರರಿಗೆ ಸರಬರಾಜು ಮಾಡುವುದಿತ್ತು. ಅಲಿ ಭಾಯ್​ ಎಂಬ ಭಯೋತ್ಪಾದಕನ ಹೆಸರು ಸ್ಫೋಟಕಗಳ ಲೋಡ್​ ಮೇಲೆ ಬರೆದುಕೊಂಡಿತ್ತು ಎಂದು ಹಿರಿಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆ ಅಮಾವಾಸ್ಯೆ ದಿನವೇ ಸಂಭವಿಸೋ ಸೂರ್ಯಗ್ರಹಣದಿಂದ ಯಾರಿಗೆ ತೊಂದರೆ: ರಾಜಗುರು ದ್ವಾರಕಾನಾಥ್ ಭವಿಷ್ಯ

    ಕೆಲವು ತಿಂಗಳುಗಳ ಹಿಂದೆ ಜೈಷ್​ ಎ ಮೊಹಮ್ಮದ್​ ಉಗ್ರಸಂಘಟನೆಯ ಉಗ್ರನೊಬ್ಬನನ್ನು ಕೊಂದಾಗ, ಆತನಿಂದ ಇದೇ ಮಾದರಿಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದೂ ಹೇಳಿದ್ದಾರೆ. ಅಲ್ಲಿಗೆ ಪಾಕ್​ ಉಗ್ರರಿಗೆ ನೀಡುತ್ತಿರುವ ನೆರವಿನ ಕಳ್ಳಾಟ ಮತ್ತೊಮ್ಮೆ ಬಯಲಾಗಿದೆ. (ಏಜೆನ್ಸೀಸ್​)

    ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಪಾಕ್​ ಡ್ರೋನ್​ನ್ನು ಹೊಡೆದುರುಳಿಸಿದ ಬಿಎಸ್​ಎಫ್​ ಯೋಧರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts