More

    ಮನುಷ್ಯನಲ್ಲಿ ಕಲಾರಾಧನೆ ಇರಬೇಕು

    ಧಾರವಾಡ: ಮನುಷ್ಯ ಸುಸಂಸ್ಕೃತ ಬದುಕನ್ನು ರೂಪಿಸಿಕೊಳ್ಳಬೇಕಾದರೆ ಅವನಲ್ಲಿ ಕಲಾರಾಧನೆ ಇರಬೇಕು ಎಂದು ಹಿರಿಯ ಸಾಹಿತಿ ಡಾ. ವೀರಣ್ಣ ರಾಜೂರ ಹೇಳಿದರು.
    ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ೧೩೪ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
    ಚಿತ್ರಕಲೆ ಮನುಷ್ಯನ ಮೊದಲ ಭಾಷೆ. ಮಾತನಾಡಲು ಆರಂಭಿಸಿದ್ದು ಚಿತ್ರಕಲೆಯ ಮೂಲಕ. ಮಾನವನ ವಿಕಾಸ ಆದಂತೆ ವಿವಿಧ ಸಂವಹನ ಮಾಧ್ಯಮಗಳು ಬಂದವು. ಕಲೆ ಮನುಷ್ಯನ ಹುಟ್ಟಿನೊಂದಿಗೆ, ನಮ್ಮ ಬದುಕಿಗೆ ಅಂಟಿಕೊAಡು ಬಂದಿದೆ. ನಮ್ಮ ಬದುಕೇ ಕಲೆಯ ಮೂಲಕ ವಿಕಾಸಗೊಂಡಿದೆ. ಮಗುವಿನ ಕಲಿಕೆಯೂ ಚಿತ್ರಕಲೆಯ ಮೂಲಕವೇ ಆರಂಭವಾಗಿ ಚಿತ್ರಗಳ ಮೂಲಕವೇ ಭಾಷೆಯನ್ನು ಕಲಿಯುವುದು ಎಂದರು.
    ಸAಘದ ೧೩೪ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಚಿತ್ರಕಲೆಗೆ ಮಾನ್ಯತೆ ನೀಡಿರುವುದು ಅಭಿನಂದನೀಯ ಎಂದು ಕಲಾವಿದರಾದ ಬಿ. ಮಾರುತಿ ಮತ್ತು ಹುಬ್ಬಳ್ಳಿಯ ಶಾಮಲಾ ಗುರುಪ್ರಸಾದ ಮೆಚ್ಚುಗೆ ವ್ಯಕ್ತಪಡಿಸಿದರು.
    ಸಂಘದ ಅಧ್ಯಕ್ಷ ಚಂದ್ರಕಾAತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಡಾ. ಆನಂದ ಪಾಟೀಲ, ನಿಂಗಣ್ಣ ಕುಂಟಿ, ವೀರಣ್ಣ ಒಡ್ಡೀನ, ಶಿವಾನಂದ ಭಾವಿಕಟ್ಟಿ, ಶಂಕರ ಕುಂಬಿ, ಡಾ. ಶೈಲಜಾ ಅಮರಶೆಟ್ಟಿ, ಎಂ.ಎA. ಚಿಕ್ಕಮಠ, ಸಿ.ಯು. ಬೆಳ್ಳಕ್ಕಿ, ಕುಮಾರ ಕಾಟೇನಹಳ್ಳಿ, ಇತರರಿದ್ದರು.
    ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಹಲಗತ್ತಿ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts