More

    ಚಿತ್ರಕಲೆಯಲ್ಲಿ ಆಸಕ್ತರಾಗಿದ್ದೀರಾ? ನಿಮಗಿದೆ 50 ಸಾವಿರ ರೂ. ಬಹುಮಾನ ಗೆಲ್ಲುವ ಅವಕಾಶ

    ನವದೆಹಲಿ: ಮನೆಯಲ್ಲಿಯೇ ಕಾಲ ಕಳೆಯಬೇಕಾದ ಅನಿವಾರ್ಯತೆಗೆ ಹಲವು ಹವ್ಯಾಸಗಳು ನಮಗೆ ನೆರವಾಗಬಲ್ಲವು. ಓದುವುದು ಬರೆಯುವುದು, ಸಂಗೀತ, ನೃತ್ಯ ಮೊದಲಾದವುಗಳ ಆಸಕ್ತರಾಗಿದ್ದರೆ ಸಮಯವನ್ನು ಸದ್ವಿನಿಯೋಗ ಪಡಿಸಿಕೊಳ್ಳಬಹುದು.
    ಒಂದು ನೀವು ಚಿತ್ರಕಲೆ ಹವ್ಯಾಸ ನಿಮಗಿದ್ದರೆ ಅದರಲ್ಲಿ ತಲ್ಲೀನರಾಗಬಹುದು. ಜತೆಗೆ ಬಹುಮಾನ ಪಡೆಯುವ ಅವಕಾಶವೂ ನಿಮಗಿಲ್ಲಿದೆ.

    ಕೇಂದ್ರೀಯ ಮೀಸಲು ಪೊಲೀಸ್​ ಪಡೆ (ಸಿಆರ್​ಪಿಎಫ್​) ವಿದ್ಯಾರ್ಥಿಗಳಿಗಾಗಿ ಪೋಸ್ಟರ್​ ಮೇಕಿಂಗ್​ ಸ್ಪರ್ಧೆಯನ್ನು ಏರ್ಪಡಿಸಿದೆ. ರಾಷ್ಟ್ರೀಯ ಮಟ್ಟದ ಈ ಸ್ಪರ್ಧೆಯಲ್ಲಿ ದೇಶದ ಎಲ್ಲ ಭಾಗಗಳ ಮಕ್ಕಳು ಭಾಗವಹಿಸಬಹುದು ಎಂದು ಸಿಆರ್​ಪಿಎಫ್​ ತಿಳಿಸಿದೆ.
    ಕೋವಿಡ್​-19 ವಿರುದ್ಧ ಹೋರಾಟವೇ ಸ್ಪರ್ಧೆಯ ವಿಷಯವಾಗಿದೆ. ಇದಕ್ಕೆ ಸಂಬಂಧಿಸಿದ ಪೋಸ್ಟರ್​ಗಳನ್ನು ಕಳುಹಿಸಬಹುದು. ಕೈಯಿಂದ ರಚಿಸಿದ ಪೇಂಟಿಂಗ್​ಗಳು, ಡ್ರಾಯಿಂಗ್​ಗಳು, ಸ್ಕೆಚ್​ಗಳನ್ನು ಸೂಕ್ತ ಶೀರ್ಷಿಕೆ ಅಥವಾ ಟ್ಯಾಗ್​ಲೈನ್​ ಜತೆಗೆ ಕಳುಹಿಸಬಹುದು.
    ಕರೊನಾ ಸೋಂಕು ಹಾಗೂ ಅದನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.
    1ರಿಂದ 5ನೇ ತರಗತಿ, 6-10 ಹಾಗೂ 11-12ನೇ ತರಗತಿ ಮಕ್ಕಳ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಪೋಸ್ಟರ್​ಗಳನ್ನು ಸಿಆರ್​ಪಿಎಫ್​ನ ಟ್ವಿಟರ್​ ಖಾತೆ CRPF @crpfindia with #BalsenaFightsCorona ವಿಳಾಸಕ್ಕೆ ಏಪ್ರಿಲ್​ 25ರೊಳಗಾಗಿ ಕಳುಹಿಸಬೇಕೆಂದು ಸೂಚಿಸಲಾಗಿದೆ.

    ಅತ್ಯುತ್ತಮವಾದ ಮೂರು ಪೋಸ್ಟರ್​ಗಳಿಗೆ ಕ್ರಮವಾಗಿ 50,000 ರೂ, 40,000 ಹಾಗೂ 25,000 ರೂ. ಬಹುಮಾನ ನೀಡಲಾಗುತ್ತದೆ. ಎಲ್ಲ ಮೂರು ವಿಭಾಗಗಳಲ್ಲಿ 5,000 ರೂ. ಮೊತ್ತದ 10 ಸಮಾಧಾನಕರ ಬಹುಮಾನಗಳು ಇವೆ.
    ದೇಶದ ಆಂತರಿಕ ಭದ್ರತೆಗೆ ನಿಯೋಜಿಸಲಾಗಿರುವ 3.25 ಲಕ್ಷ ಸಿಬ್ಬಂದಿಯೊಂದಿಗೆ ಸಿಆರ್​ಪಿಎಫ್​ ದೇಶದ ಅತಿ ದೊಡ್ಡ ಅರೆ ಸೇನಾ ಪಡೆಯಾಗಿದೆ.

    ಒಬ್ಬರೂ ಸೋಂಕಿತರಿಲ್ಲದ ರಾಜ್ಯಗಳು ಯಾವುವು ಗೊತ್ತೆ? ಇಲ್ಲಿದೆ ರಾಜ್ಯವಾರು ಕೋವಿಡ್​-19 ಪೀಡಿತರ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts