More

    ಭತ್ತ ವರ್ಧನೆಗೆ ಬೇಕು ಮಳೆ

    ಶಶಿಧರ ಕುಲಕರ್ಣಿ ಮುಂಡಗೋಡ
    ತಾಲೂಕಿನಾದ್ಯಂತ ಕಳೆದ ದಿನಗಳಿಂದ ಸರಿಯುತ್ತಿರುವ ಸಾಧಾರಣ ಮಳೆಯಿಂದ ಭತ್ತ ಹಾಗೂ ಗೋವಿನಜೋಳ ಬೆಳೆಗೆ ಜೀವಕಳೆ ಬಂದಿದೆ. ಇದರಿಂದ ರೈತರಲ್ಲಿ ಮಂದಹಾಸ ಮೂಡಿದೆಯಾದರೂ ಬೆಳೆಗಳಿಗೆ ಇನ್ನೂ ಹೆಚ್ಚಿನ ಮಳೆ ಅವಶ್ಯವಿದೆ ಎಂಬುದು ರೈತರ ಅಭಿಪ್ರಾಯ.
    ಕಳೆದ 2 ವಾರಗಳ ಹಿಂದೆ ಮಳೆ ಸುಳಿವು ಇಲ್ಲದ್ದರಿಂದ ಬಿತ್ತನೆ ಮಾಡಿದ್ದ ಭತ್ತ ಬಿಸಿಲಿನ ತಾಪಕ್ಕೆ ಹಳದಿ ಬಣ್ಣಕ್ಕೆ ತಿರುಗಿತ್ತು. ಗೋವಿನ ಜೋಳದ ಬೆಳವಣಿಗೆ ಕುಂಠಿತಗೊಂಡಿತ್ತು. ಭತ್ತದ ಗದ್ದೆ ಹದ ಮಾಡಲು ಮಳೆ ತೀರಾ ಅವಶ್ಯವಿತ್ತು. ಗೋವಿನ ಜೋಳಕ್ಕೆ ಗೊಬ್ಬರ ನೀಡಲು ಮಳೆ ಬೇಕಾಗಿತ್ತು. ಈಗ ಸುರಿದ ಮಳೆಯಿಂದ ಗೋವಿನ ಜೋಳದ ಬೆಳೆಗೆ ತಕ್ಕಮಟ್ಟಿಗೆ ಅಡ್ಡಿಯಿಲ್ಲ. ಆದರೆ, ಭತ್ತಕ್ಕೆ ಇನ್ನೂ ಹೆಚ್ಚಿನ ಮಳೆ ನೀರಿನ ಅವಶ್ಯವಿದೆ. ಈಗ ಬಿದ್ದ ಮಳೆ ಯಾವ ಲೆಕ್ಕಕ್ಕೂ ಅಲ್ಲ. ಮುಂದೆ ಇದೇ ರೀತಿ ಮಳೆ ಕಡಿಮೆ ಆಗುತ್ತಾ ಹೋದರೆ ಭತ್ತವೂ ಕಂದು ಬಣ್ಣಕ್ಕೆ ತಿರುಗಿ ಬೇರು ಹುಳು ಬಾಧೆ ಆರಂಭವಾಗುವ ಸಾಧ್ಯತೆ ಇದೆ. ಹೆಚ್ಚಿನ ರೈತರು ಗೊಬ್ಬರ ಮತ್ತು ಔಷಧ ಸಿಂಪಡಣೆ ಮಾಡಿಲ್ಲ. ಜೋರಾಗಿ ಮಳೆ ಸುರಿಯುವ ಮುನ್ಸೂಚನೆ ಇದ್ದಿದ್ದರಿಂದ ಭತ್ತವನ್ನೂ ಬಿತ್ತನೆ ಮಾಡಿದ್ದಾರೆ.


    ಈಗ ಬೀಳುತ್ತಿರುವ ಸಣ್ಣದಾದ ಮಳೆ ಭತ್ತ ಮತ್ತು ಗೋವಿನ ಜೋಳ ಬೆಳೆಗಳಿಗೆ ಸಾಕಾಗುತ್ತಿಲ್ಲ. ಇನ್ನೂ ಹೆಚ್ಚಿನ ಮಳೆ ಆಗಬೇಕು. ನೀರಾವರಿ ಸೌಲಭ್ಯವಿರುವ ರೈತರು ತಮ್ಮ ಬೆಳೆಗಳನ್ನು ಸ್ಪ್ರಿಂಕ್ಲರ್ ಮೂಲಕ ರಕ್ಷಣೆ ಮಾಡಿಕೊಳ್ಳಬೇಕು. ಮಳೆ ಆಶ್ರಿತ ರೈತರು ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಇಲಾಖೆಯಿಂದ ಸಸ್ಯ ಸಂರಕ್ಷಣಾ ಔಷಧಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬೇಕು. | ಎಂ.ಎಸ್. ಕುಲಕರ್ಣಿ ಸಹಾಯಕ ಕೃಷಿ ನಿರ್ದೇಶಕ ಮುಂಡಗೋಡ


    ಮಳೆಯನ್ನೇ ನಂಬಿ ಕೃಷಿ ಮಾಡುವ ನಮಗೆ ಸದ್ಯಕ್ಕೆ ಬಿದ್ದ ಮಳೆಯಿಂದ ನಮ್ಮ ಬೆಳೆ ರಕ್ಷಿಸಿಕೊಳ್ಳುವುದು ಕಷ್ಟವಾಗಿದೆ. ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯಬೇಕಿತ್ತು. ಆದರೆ, ಆಗಿಲ್ಲ. ಇನ್ನು ಮುಂದಾದರೂ ಉತ್ತಮ ಮಳೆ ಸುರಿಯಬೇಕಿದೆ. | ಮಂಜು ಕೋಣನಕೇರಿ ಸನವಳ್ಳಿ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts