More

    ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಪಾದಯಾತ್ರೆ ಆರಂಭ

    ಮಂಗಳೂರು: ಮಂಗಳೂರಿನಲ್ಲಿ ದೇವ-ದೈವಸ್ಥಾನಗಳನ್ನು ಅಪವಿತ್ರಗೊಳಿಸುವುದರ ವಿರುದ್ಧ ಕೊರಗಜ್ಜನ ಮೊರೆ ಹೋಗಲು ತೀರ್ಮಾನಿಸಿ ವಿಶ್ವ ಹಿಂದು ಪರಿಷತ್‌ ಬಜರಂಗದಳ ನೇತೃತ್ವದಲ್ಲಿ ಭಾನುವಾರ ಮುಂಜಾನೆ ಕದ್ರಿ ಶ್ರೀ ಮಂಜುನಾಥೇಶ್ವರ ಸನ್ನಿಧಿಯಿಂದ ಕುತ್ತಾರು ಶ್ರೀ ಕೊರಗಜ್ಜ ಆದಿಕ್ಷೇತ್ರದವರೆಗೆ ಬೃಹತ್ ಪಾದಯಾತ್ರೆ ಪ್ರಾರಂಭಗೊಂಡಿತು.
    ಕುತ್ತಾರಿನ ಕೊರಗಜ್ಜನ ಆದಿ ಕ್ಷೇತ್ರದ ಬಳಿ ಬೆಳಗ್ಗೆ 10:30 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥರು ಭಾಗವಹಿಸಲಿದ್ದಾರೆ. ಮಾ.ಕಾರ್ತಿಕ್ ಅವರಿಂದ ಕೊರಗಜ್ಜನ ಭಕ್ತಿಗೀತೆ ಹಾಗೂ ವಿದ್ವಾಂಸ ಕೆ.ಕೆ ಪೇಜಾವರ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ.

    ಕಳೆದ ಕೆಲವು ತಿಂಗಳಿಂದ ಮಂಗಳೂರು ಹಾಗೂ ಆಸುಪಾಸಿನ ದೇವಸ್ಥಾನ, ಭೂತಸ್ಥಾನ, ಕೊರಗಜ್ಜನ ಕ್ಷೇತ್ರಗಳಲ್ಲಿ ಕಾಣಿಕೆಡಬ್ಬಿಗೆ ಕೊಳಕು ವಸ್ತುಗಳನ್ನು ಹಾಕುವುದು, ಆವರಣವನ್ನು ಮಲಿನಗೊಳಿಸುವ ಮೂಲಕ ಆರಾಧಕರ ಮನಸ್ಸಿಗೆ ನೋವುಂಟು ಮಾಡುವ ಕೃತ್ಯಗಳು ನಡೆಯುತ್ತಿವೆ. ಆದರೆ ಇದುವರೆಗೆ ಪೊಲೀಸರು ಯಾರನ್ನೂ ಬಂಧಿಸುವುದಕ್ಕೆ ಸಾಧ್ಯವಾಗಿಲ್ಲ. ಈ ನೆಲೆಯಲ್ಲಿ ಕೊರಗಜ್ಜನ ಮೊರೆಹೋಗುವ ಮೂಲಕ ತಪ್ಪಿತಸ್ಥರು ಸಿಗುವಂತಾಗಲಿ ಎಂದು ಪ್ರಾರ್ಥಿಸಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

    ವಿಶ್ವ ಹಿಂದು ಪರಿಷತ್‌ ಮುಖಂಡರಾದ ಪ್ರೊ.ಎಂ.ಬಿ.ಪುರಾಣಿಕ್‌, ಶರಣ್‌ ಪಂಪ್‌ವೆಲ್‌, ಗೋಪಾಲ್‌ ಕುತ್ತಾರ್‌, ಮೇಯರ್‌ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್‌ ದಿವಾಕರ್‌ ಮುಂತಾದವರು ಪಾಲ್ಗೊಂಡರು.

    ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಪಾದಯಾತ್ರೆ ಆರಂಭ
    ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಪಾದಯಾತ್ರೆ ಆರಂಭ
    ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಪಾದಯಾತ್ರೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts