More

    ಚಳ್ಳಕೆರೆಯಿಂದ ರಾಜಸ್ಥಾನಕ್ಕೆ ಪಾದಯಾತ್ರೆ

    ಬಳ್ಳಾರಿ: ಲಾಕ್​ಡೌನ್​ದಿಂದಾಗಿ ಕೆಲಸ ಇಲ್ಲದೆ ಕಂಗಾಲಾದ 15 ಜನರ ರಾಜಸ್ಥಾನಿ ಕುಟುಂಬವೊಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಪಾದಯಾತ್ರೆ ಮೂಲಕ ರಾಜಸ್ಥಾನದ ಚಿತ್ತೋರ ಜಿಲ್ಲೆಗೆ ಹೊರಟಿದೆ.

    ಇದನ್ನೂ ಓದಿ:  ನಕಲಿ ಅಶ್ಲೀಲ ಸಿಡಿ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ: ರಾಮಚಂದ್ರಾಪುರ ಮಠಕ್ಕೆ ಗೆಲುವು

    ಪುಟ್ಟ ಮಕ್ಕಳೊಂದಿಗೆ 50 ಕಿಮೀ ಹೆಚ್ಚು ನಡೆದುಕೊಂಡು ಬಂದಿರುವ ಕುಟುಂಬದವರು, ಮಂಗಳವಾರ ತಾಲೂಕಿನ ಹಲಕುಂದಿ ಚೆಕ್​ಪೋಸ್ಟ್ ನಲ್ಲಿ ಕಂಡುಬಂದರು. ಕಳೆದ ಅನೇಕ ವರ್ಷಗಳಿಂದ ಚಳ್ಳಕೆರೆಯಲ್ಲಿ ಪಾನಿಪೂರಿ, ಐಸ್ಕ್ರೀಂ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಲಾಕ್​ಡೌನ್ ಶುರುವಾದ ಬಳಿಕ ವ್ಯಾಪಾರವಿಲ್ಲದೆ, ಹಣವೂ ಇಲ್ಲದೆ ಪರದಾಡುತ್ತಿದ್ದಾರೆ.

    ಇದನ್ನೂ ಓದಿ:  VIDEO: ಸಂಸದೆ ಶೋಭಾ ಕರಂದ್ಲಾಜೆಗೆ ಗಲ್ಫ್ ರಾಷ್ಟ್ರಗಳಿಂದ ಜೀವ ಬೆದರಿಕೆ ಕರೆ!

    ಭಾನುವಾರ ಚಳ್ಳಕೆರೆಯಿಂದ ಹೊರಟಿದ್ದು ದಾರಿ ಮಧ್ಯೆ ಆಟೋ, ಲಾರಿಯಲ್ಲಿ ಬಂದಿದ್ದೇವೆ. ಸುಮಾರು 50 ಕಿ.ಮೀ ನಡೆದಿದ್ದೇವೆ. ಮಾರ್ಗದಲ್ಲಿ ಜನರು ಊಟ, ಉಪಹಾರ ನೀಡಿದರು. ನಾವು ಊರಿಗೆ ಹೋಗಬೇಕು. ಹೇಗಾದರೂ ಮಾಡಿ ಕಳಿಸಿಕೊಡಿ ಸುದ್ದಿಗಾರರಿಗೆ ಅಂಗಲಾಚಿದರು.

    ಚೆನ್ನೈನ ಈ ಹಣ್ಣು ಮಾರುಕಟ್ಟೆ ಈಗ ಭಯ ಹುಟ್ಟಿಸುತ್ತಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts