More

  ಪಡಗಾನೂರ ಗ್ರಾಮಕ್ಕೆ ತಂತ್ರಜ್ಞರ ಭೇಟಿ

  ದೇವರಹಿಪ್ಪರಗಿ: ಕಳೆದ ವಾರ ಭೂಮಿ ಕಂಪಿಸಿದ ಹಿನ್ನೆಲೆ ತಾಲೂಕಿನ ಪಡಗಾನೂರ ಗ್ರಾಮಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ತಂತ್ರಜ್ಞ ಚಿದಂಬರಮ್ ಹಾಗೂ ಮಹೇಶ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
  ಕಂಪನದಿಂದ ಬಿರುಕು ಬಿಟ್ಟ ತಮ್ಮ ಮನೆಗಳನ್ನು ನೋಡುವಂತೆ ಅಧಿಕಾರಿಗಳಿಗೆ ಸ್ಥಳೀಯರು ದುಂಬಾಲು ಬಿದ್ದರು. ಇದಕ್ಕೆ ಸ್ಪಂದಿಸಿದ ತಂತ್ರಜ್ಞರು ಕಂಪನಕ್ಕೆ ಕಾರಣವಾದ ಅಂಶಗಳ ಬಗ್ಗೆ ಮಾತ್ರ ತಿಳಿಯಲು ನಾವು ಬಂದಿದ್ದು, ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಉಳಿದ ವಿಷಯಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.
  ತಹಸೀಲ್ದಾರ್ ವೈ.ಬಿ. ನಾಗಠಾಣ, ಕಂದಾಯ ನಿರೀಕ್ಷಕ ಆನಂದ ಪಮ್ಮಾರ, ರಾಜಕುಮಾರ ಸಿಂದಗೇರಿ, ಸಂಗಮೇಶ ಕದ್ರಿ, ಶರಣಕುಮಾರ ನಾಟೀಕಾರ, ಮುದುಕಪ್ಪ ಭಾವಿಮನಿ, ಮಾಮಲ್ಲ ಕೌಲಗಿ, ಮುತ್ತಪ್ಪ ದೊಡಮನಿ, ಬಾಬು ದೇಗಲಿ, ಉಮೇಶ ಕದ್ರಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts