More

    ವಿದರ್ಭಕ್ಕೆ ವಿದ್ವತ್, ವೈಶಾಕ್ ಬ್ರೇಕ್ : ಕೊನೇ ದಿನ ಇನ್ನೂ 268 ರನ್ ಗಳಿಸುವ ಸವಾಲು

    ನಾಗ್ಪುರ: ವೇಗಿಗಳಾದ ವಿದ್ವತ್ ಕಾವೇರಪ್ಪ (61ಕ್ಕೆ 6) ಹಾಗೂ ವೈಶಾಕ್ ವಿಜಯ್‌ಕುಮಾರ್ (81ಕ್ಕೆ 4) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಪ್ರವಾಸಿ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ೈನಲ್‌ನಲ್ಲಿ ಆತಿಥೇಯ ವಿದರ್ಭಕ್ಕೆ ತಿರುಗೇಟು ನೀಡಿದ್ದು, ಗೆಲುವಿಗೆ 371 ರನ್‌ಗಳ ಗುರಿ ಪಡೆದಿದೆ. ಮಂಗಳವಾರ ಪಂದ್ಯದ ಅಂತಿಮ ದಿನವಾಗಿದ್ದು, ಮಯಾಂಕ್ ಅಗರ್ವಾಲ್ ಪಡೆಗೆ ಸೆಮಿೈನಲ್‌ಗೇರಲು ಇನ್ನೂ 268 ರನ್ ಅಗತ್ಯವಿದ್ದು, 9 ವಿಕೆಟ್ ಕೈಯಲ್ಲಿವೆ. ವಿದರ್ಭ ಡ್ರಾ ಸಾಧಿಸಿದರೂ ಉಪಾಂತ್ಯಕ್ಕೇರುವ ಅವಕಾಶ ಹೊಂದಿದ್ದರೆ, ಕರ್ನಾಟಕ ಗೆದ್ದರಷ್ಟೇ ಮುಂದಿನ ಹಂತಕ್ಕೇರಲಿದೆ.

    ವಿಸಿಎ ಕ್ರೀಡಾಂಗಣದಲ್ಲಿ ನಡೆಯತ್ತಿರುವ ಪಂದ್ಯದಲ್ಲಿ 4ನೇ ದಿನವಾದ ಸೋಮವಾರ ವಿಕೆಟ್ ನಷ್ಟವಿಲ್ಲದೆ 50 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ವಿದರ್ಭ, 57.2 ಓವರ್‌ಗಳಲ್ಲಿ 196 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ನ 174 ರನ್ ಹಿನ್ನಡೆಯೊಂದಿಗೆ 371 ರನ್‌ಗಳ ಗುರಿ ಪಡೆದಿರುವ ಕರ್ನಾಟಕ, ಎರಡನೇ ಸರದಿಯಲ್ಲಿ ನಾಯಕ ಮಯಾಂಕ್ ಅಗರ್ವಾಲ್ (61* ರನ್, 77 ಎಸೆತ, 9 ಬೌಂಡರಿ, 1 ಸಿಕ್ಸರ್) ಹಾಗೂ ಆರ್.ಸಮರ್ಥ್ (40) ಮೊದಲ ವಿಕೆಟ್‌ಗೆ ಹಾಕಿಕೊಟ್ಟ 101 ರನ್‌ಗಳ ಉತ್ತಮ ಅಡಿಪಾಯದ ನೆರವಿನಿಂದ ದಿನದಂತ್ಯಕ್ಕೆ 26 ಓವರ್‌ಗಳಲ್ಲಿ 1 ವಿಕೆಟ್‌ಗೆ 103 ರನ್‌ಗಳಿಸಿದೆ. ನಾಯಕ ಮಯಾಂಕ್ ಅಗರ್ವಾಲ್ ರಾಜ್ಯದ ಸೆಮಿೈನಲ್ ಆಸೆ ಜೀವಂತವಿರಿಸಿದ್ದು, ಅನೀಶ್ ಕೆವಿ (1*) ಜತೆ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ವಿದರ್ಭ: 460 ಹಾಗೂ 196 (ಧ್ರುವ 57, ಕರುಣ್ ನಾಯರ್ 34, ಅದಿತ್ಯ ಸರವಟೆ 29, ಉಮೇಶ್ 10, ವಿದ್ವತ್ 61ಕ್ಕೆ6, ವೈಶಾಕ್ 81ಕ್ಕೆ 4). ಕರ್ನಾಟಕ: 286 ಹಾಗೂ 1 ವಿಕೆಟ್‌ಗೆ 103 (ಆರ್.ಸಮರ್ಥ್ 40, ಮಯಾಂಕ್ 61*, ಅನೀಶ್ 1*, ಸರವಟೆ 10ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts